ಗುಡ್ ವುಡ್ ಫೇಸ್ಟಿವಲ್‌ನಲ್ಲಿ ಮಾರ್ಗನ್ ಎಲೆಕ್ಟ್ರಿಕ್ ವಾಹನದ ಚಮಕ್

By Nagaraja

ಇತಿಹಾಸ ಪ್ರಸಿದ್ಧ 'ಗುಡ್ ವುಡ್ ಫೇಸ್ಟಿವಲ್ ಆಫ್ ಸ್ಪೀಡ್' ಹಿಲ್ ಕ್ಲೈಂಬ್ ಮೋಟಾರು ರೇಸಿಂಗ್‍ನಲ್ಲಿ ಹೊಸತಾದ ವಿದ್ಯುತ್ ಚಾಲಿತ ತ್ರಿಚಕ್ರ ವಾಹನವೊಂದು ಅನಾವರಣಗೊಂಡಿದೆ.

ಅದುವೇ, ಮಾರ್ಗನ್ ಇವಿ3

ಗುಡ್ ವುಡ್ ಫೇಸ್ಟಿವಲ್ ಆಫ್ ಸ್ಪೀಡ್ ವರ್ಷಂಪ್ರತಿ ಇಂಗ್ಲೆಂಡ್ ವೆಸ್ಟ್ ಸಸ್ಸೆಕ್ಸ್‌ನ ಗುಡ್ ವುಡ್ ಹೌಸ್‌ನ ಲ್ಲಿ ನಡೆದು ಬರುತ್ತಿರುವ ವಾರ್ಷಿಕ ಹಿಲ್ ಕ್ಲೈಂಬ್ ಮೋಟಾರು ರೇಸಿಂಗ್ ಆಗಿದ್ದು, ಜೂನ್ ಅಥವಾ ಜುಲೈ ತಿಂಗಳಲ್ಲಿ ಆಯೋಜನೆಯಾಗುತ್ತದೆ.

ಮಾರ್ಗನ್ ಇವಿ3

ಇದನ್ನೇ ಸದಾವಕಾಶವಾಗಿ ಬಳಸಿಕೊಂಡಿರುವ ಮಾಲ್ವೆರ್ನ್ ತಳಹದಿಯ ಕ್ರೀಡಾ ಕಾರು ಸಂಸ್ಥೆಯಾಗಿರುವ ಮಾರ್ಗನ್ ತ್ರಿಚಕ್ರ ಇವಿ3 ವಾಹನವನ್ನು ಪರಿಚಯಪಡಿಸಿದೆ.

ಸಂಸ್ಥೆಯಿಂದ ಮೊದಲು ನಿರ್ಮಾಣವಾದ ಪ್ಲಸ್ ಇ ಎಲೆಕ್ಟ್ರಿಕ್ ವಾಹನವು 2012 ಜಿನೆವಾ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿತ್ತು. ಪ್ರಸ್ತುತ ಎಲೆಕ್ಟ್ರಿಕ್ ಇವಿ3 2016ರ ವೇಳೆಯಾಗುವಾಗ ಮಾರಾಟಕ್ಕೆ ಲಭ್ಯವಾಗಲಿದೆ.

ಮಾರ್ಗನ್ ಇವಿ3

ಸಿಂಗಲ್ ಮೋಟಾರ್ ನಿಂದ ನಿಯಂತ್ರಿಸಲ್ಪಡುವ ಎಲೆಕ್ಟ್ರಿಕ್ ಇವಿ3, ಗರಿಷ್ಠ 101 ಅಶ್ವಶಕ್ತಿ ಉತ್ಪಾದಿಸಲಿದೆ. ಅಲ್ಲದೆ 150 ಮೈಲು ವ್ಯಾಪ್ತಿಯ ವರೆಗೆ ಚಲಿಸುವ ಸಾಮರ್ಥ್ಯ ಹೊಂದಿರಲಿದೆ. ಅಂತೆಯೇ ಕೇವಲ 450 ಕೆ.ಜಿ ಭಾರವನ್ನಷ್ಟೇ ಹೊಂದಿರಲಿದೆ.

ಸಂಪೂರ್ಣ ಪರಿಸರ ಎನಿಸಿಕೊಂಡಿರುವ ಎಲೆಕ್ಟ್ರಿಕ್ ಇವಿ3 ಭವಿಷ್ಯದ ವಿದ್ಯುತ್ ಚಾಲಿತ ವಾಹನಗಳಿಗೆ ಹೊಸ ಆಯಾಮವನ್ನು ನೀಡಲಿದೆ.

Article Published On: Tuesday, June 23, 2015, 13:03 [IST]
English summary
Morgan, the Malvern based sports car manufacturer is all set to showcase an all electric version of it's three-wheeler during the Goodwood Festival of Speed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+