ಭಾರತಕ್ಕೆ ಲಗ್ಗೆಯಿಟ್ಟ ಪರಿಷ್ಕೃತ ಆಡಿ ಕ್ಯೂ7; ಬೆಲೆ 72 ಲಕ್ಷ ರು.
ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆ ಆಡಿ ಅತಿ ನೂತನ ಕ್ಯೂ7 ಕಾರನ್ನು ಭಾರತ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಗಮನಾರ್ಹ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.
ಆರಂಭಿಕ ಬೆಲೆ: 72 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)
ಪ್ರಸ್ತುತ ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ದೇಶದ ಮಾರುಕಟ್ಟೆ ತಲುಪಲಿರುವ ನೂತನ ಆಡಿ ಕ್ಯೂ7 2016ನೇ ಸಾಲಿನ ಮಧ್ಯಂತರ ಅವಧಿಯ ವೇಳೆಯಾಗುವಾಗ ಸ್ಥಳೀಯವಾಗಿ ಜೋಡಣೆಯಾಗಲಿದೆ. ಇದು ಬೆಲೆಯಲ್ಲಿ ಮತ್ತಷ್ಟು ಇಳಿಕೆಗೆ ಸಹಕಾರಿಯಾಗಲಿದೆ.

ಆಡಿ ಕ್ಯೂ7 ಬಿಡುಗಡೆ ವೇಳೆ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರಮುಖ ಆಕರ್ಷಣೆಯಾಗಿದ್ದರು. ಈ ಮುಖಾಂತರ ಆಡಿ ಕಾರಿನ ಮೇಲಿನ ಮಮತೆಯನ್ನು ಮಗದೊಮ್ಮೆ ತೋರ್ಪಡಿಸಿಕೊಂಡರು.

ಹಿಂದಿನ ಮಾದರಿಗೆ ಹೋಲಿಸಿದಾಗ ಹೊಸ ಆಡಿ ಕ್ಯೂ7 ಕಾರಿನಲ್ಲಿ ಕಂಡುಬಂದಿರುವ ಗಮನಾರ್ಹ ಬದಲಾವಣೆಯೆಂದರೆ 300 ಕೆ.ಜಿಗಳಷ್ಟು ತೂಕ ಇಳಿಸಲಾಗಿದೆ. ಅಂದರೆ ಗರಿಷ್ಠ ಇಂಧನ ಕ್ಷಮತೆ ನೀಡಲು ಸಹಕಾರಿಯಾಗಲಿದೆ.

ಅಂತೆಯೇ ಪ್ರೀಮಿಯಂ ಪ್ಲಸ್ ಹಾಗೂ ಟೆಕ್ನಾಲಜಿಗಳೆಂಬ ಎರಡು ವೆರಿಯಂಟ್ ಗಳಲ್ಲಿ ಹೊಸ ಕಾರು ಲಭ್ಯವಾಗಲಿದೆ.
ಎಕ್ಸ್ ಶೋ ರೂಂ ದೆಹಲಿ ಬೆಲೆ
- ಆಡಿ ಕ್ಯೂ7 ಪ್ರೀಮಿಯಂ ಪ್ಲಸ್: 72 ಲಕ್ಷ ರು.
- ಆಡಿ ಕ್ಯೂ7 ಟೆಕ್ನಾಲಜಿ: 77.5 ಲಕ್ಷ ರು.
- ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್),
- ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ),
- ಎಂಟೆಕ್ಷನ್ ಅಸಿಸ್ಟ್,
- ಸಂಭವನೀಯ ಅಪಘಾತ ತಪ್ಪಿಸಲು ನೆರವು,
- ನೈಟ್ ವಿಷನ್ ಅಸಿಸ್ಟ್

ಎಂಜಿನ್ ತಾಂತ್ರಿಕತೆ
ಪರಿಷ್ಕೃತ ಆಡಿ ಕ್ಯೂ7 ಕಾರು 3.0 ಲೀಟರ್ ಟರ್ಬೊ ಚಾರ್ಜ್ಡ್ ವಿ6 ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 600 ಎನ್ ಎಂ ತಿರುಗುಬಲದಲ್ಲಿ 249 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಆಡಿಯ ಕ್ವಾಟ್ರೊ ತಂತ್ರಗಾರಿಕೆಯ 8 ಸ್ಪೀಡ್ ಟಿಪ್ ಟ್ರಾನಿಕ್ ಗೇರ್ ಬಾಕ್ಸ್ ಮುಖಾಂತರ ಎಲ್ಲ ನಾಲ್ಕು ಚಕ್ರಗಳಿಗೆ ಶಕ್ತಿ ವರ್ಗಾವಣೆಯಾಗಲಿದೆ.

ವೇಗವರ್ಧನೆ
ನೂತನ ಆಡಿ ಕ್ಯೂ7 ಕೇವಲ 7.2 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಿಂದಿನ ಮಾದರಿಗೆ ಹೋಲಿಸಿದಾಗ ಇಲ್ಲೂ ಗಮನಾರ್ಹ ಬದಲಾವಣೆ ಕಂಡುಬಂದಿದೆ.

ವೈಶಿಷ್ಟ್ಯಗಳು
ಎಲ್ಲ ಹೊಸತನ ನೀಡುವ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಬೋಸ್ ಆಡಿಯೋ ಸಿಸ್ಟಂ, ಎಲ್‌ಇಡಿ ಮ್ಯಾಟ್ರಿಕ್ಸ್ ಹೆಡ್ ಲೈಟ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಲೆಥರ್ ಸೀಟು, ಪ್ಯಾನರಾಮಿಕ್ ಸನ್ ರೂಫ್, ನಾಲ್ಕು ವಿಧಗಳ ಕ್ಲೈಮೇಟ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ ಹಾಗೂ ಹೊಸತಾದ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇರಲಿದೆ. ಇವೆಲ್ಲದರ ಜೊತೆಗೆ ಹೆಡ್ ಅಪ್ ಡಿಸ್ ಪ್ಲೇ ಹಾಗೂ ನೇವಿಗೇಷನ್ ಅಸಿಸ್ಟನ್ಸ್ ಕೂಡಾ ಇರಲಿದೆ.

ಸುರಕ್ಷತೆ

ಪ್ರತಿಸ್ಪರ್ಧಿಗಳು
ಭಾರತ ಮಾರುಕಟ್ಟೆಯಲ್ಲಿ ನೂತನ ಆಡಿ ಕ್ಯೂ7 ಪ್ರಮುಖವಾಗಿಯೂ ಬಿಎಂಡಬ್ಲ್ಯು ಎಕ್ಸ್5, ಮರ್ಸಿಡಿಸ್ ಬೆಂಝ್ ಜಿಎಲ್-ಕ್ಲಾಸ್ ಮತ್ತು ವೋಲ್ವೋ ಎಕ್ಸ್‌ಸಿ90 ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications