ಹೊಸ ಷೆವರ್ಲೆ ಕ್ರೂಝ್ ಎಕ್ಸ್‌ಕ್ಲೂಸಿವ್ ಫ್ರಂಟ್ ಡಿಸೈನ್

By Nagaraja

ನಿಮಗಿದರ ಬಗ್ಗೆ ಗೊತ್ತಿಲ್ಲವಾದರೆ ನಾವಿಲ್ಲಿ ಹೇಳಬಯಸುವುದೇನೆಂದರೆ ಹೊಸ ತಲೆಮಾರಿನ ಷೆವರ್ಲೆ ಕ್ರೂಝ್ ಅತಿ ಶೀಘ್ರದಲ್ಲೇ ಮಾರುಕಟ್ಟೆಯನ್ನು ತಲುಪಲಿದೆ. ಅಷ್ಟಕ್ಕೂ ಅಮೆರಿಕದ ಜನರಲ್ ಮೋಟಾರ್ಸ್ ಅಧೀನತೆಯಲ್ಲಿರುವ ಷೆವರ್ಲೆ ಕ್ರೂಝ್ ಹೇಗಿರಬಹುದು ?

ಈ ಸಂಬಂಧ ಎಕ್ಸ್ ಕ್ಲೂಸಿವ್ ಫ್ರಂಟ್ ಡಿಸೈನ್ (ಮುಂಭಾಗ) ಚಿತ್ರವನ್ನು ಸಂಸ್ಥೆಯು ಬಿಡುಗಡೆಗೊಳಿಸಿದ್ದು, ಹೆಚ್ಚಿನ ಕುತೂಹಲಕ್ಕೆ ಎಡೆ ಮಾಡಿ ಕೊಟ್ಟಿದೆ. ನಿಮ್ಮೆಲ್ಲರ ಮಾಹಿತಿಗಾಗಿ, ಹೊಸ ಕ್ರೂಝ್ ಇದೇ ಜೂನ್ ತಿಂಗಳಲ್ಲಿ ಪಾದಾರ್ಪಣೆಗೈಯಲಿದೆ.

ಷೆವರ್ಲೆ ಕ್ರೂಝ್

ಆರಂಭದಲ್ಲಿ ಆಸ್ಟ್ರೇಲಿಯಾ ಮಾರುಕಟ್ಟೆ ತಲುಪಲಿದ್ದು, ಬಳಿಕ ವಿಶ್ವದ ಇತರ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಮುಂಭಾಗದಲ್ಲಿ ಒಂದು ಬದಿಯನ್ನು ಮರೆಮಾಚುವ ಮೂಲಕ ಷೆವರ್ಲೆ ಅಭಿಮಾನಿಗಳಲ್ಲಿ ಇನ್ನಷ್ಟು ಆಸಕ್ತಿಯನ್ನು ಕಾಯ್ದುಕೊಂಡಿದೆ.

ಹೊಸ ತಲೆಮಾರಿನ ಷೆವರ್ಲೆ ಕ್ರೂಝ್ ಆಧುನಿಕತೆಗೆ ತಕ್ಕಂತೆ ಆಕ್ರಮಣಕಾರಿ ವಿನ್ಯಾಸವನ್ನು ಪಡೆದುಕೊಂಡಿದೆ. ಅಷ್ಟಕ್ಕೂ ಹೊಸ ಮಾದರಿಯು ಭಾರತವನ್ನು ಯಾವಾಗ ತಲುಪಲಿದೆ ಎಂಬುದಕ್ಕೀಗ ಯಾವುದೇ ಸ್ಪಷ್ಟನೆಯಿಲ್ಲ. ಆದರೆ ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯನ್ನು ಭವಿಷ್ಯದಲ್ಲಾದರೂ ಷೆವರ್ಲೆ ಪರಿಗಣಿಸಲಿದೆ ಎಂಬುದರಲ್ಲಿ ಯಾವುದೇ ಸಂಶಯವೇ ಇಲ್ಲ.

ಪ್ರಸ್ತುತ ಭಾರತ ಮಾರುಕಟ್ಟೆಯಲ್ಲಿರುವ ಷೆವರ್ಲೆ ಕ್ರೂಝ್ ದೆಹಲಿ ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ 13.79 ಲಕ್ಷ ರು.ಗಳಿಷ್ಟಿದೆ. ಇನ್ನು ಹೊಸ ತಲೆಮಾರಿನ ಷೆವರ್ಲೆ ಕ್ರೂಝ್ ಆದಷ್ಟು ಬೇಗನೇ ಭಾರತವನ್ನು ಪ್ರವೇಶಿಸಲಿ ಎಂಬುದು ನಮ್ಮ ಆಶಯವಾಗಿದೆ. ತಾಜಾ ವಾಹನ ಸುದ್ದಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.

More from DriveSpark

Article Published On: Saturday, June 6, 2015, 12:00 [IST]
English summary
The new generation GM Cruze front fascia has been teased ahead of its June debut, and we like what we see.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+