ಹೋಂಡಾ ಎಚ್‌ಆರ್-ವಿ ಅನಾವರಣ; ಭಾರತಕ್ಕೆ ಬರುತ್ತಾ?
ಜಪಾನ್‌ನ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಎಲ್ಲ ಹೊಸತನದಿಂದ ಕೂಡಿರುವ ಎಚ್‌ಆರ್-ವಿ ಕಾಂಪಾಕ್ಟ್ ಎಸ್‌ಯುವಿ ಕಾರನ್ನು ಅನಾವರಣಗೊಳಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ನಿಕಟ ಭವಿಷ್ಯದಲ್ಲೇ ಎಚ್‌ಆರ್-ವಿ ಮಾದರಿಯನ್ನು ಹೋಂಡಾ ಸಂಸ್ಥೆಯು ಭಾರತಕ್ಕೆ ಪರಿಚಯಿಸಲಿದೆ.
ಹೋಂಡಾ ಜನಪ್ರಿಯ ಸಿಆರ್-ವಿ ಮಾದರಿಯ ತಳಹದಿಯಲ್ಲಿ ರೂಪುಗೊಂಡಿರುವ ಎಚ್-ವಿ ಅತ್ಯಾಧುನಿಕ ಮುಂದುವರಿದ ತಂತ್ರಜ್ಞಾನಗಳನ್ನು ಪಡೆಯಲಿದೆ. ವಾಹನ ಶೈಲಿಯಿಂದ ಹಿಡಿದು ಚಾಲನೆ ಹಾಗೂ ಇಂಧನ ಕ್ಷಮತೆಯಲ್ಲಿ ಇದು ಅದ್ಭುತ ಅನುಭವ ನೀಡಲಿದೆ.

ನೂತನ ಹೋಂಡಾ ಎಚ್‌ಆರ್-ವಿ 130 ಅಶ್ವಶಕ್ತಿ ಉತ್ಪಾದಿಸಬಲ್ಲ 1.5 ಲೀಟರ್ ಐ-ವಿಟೆಕ್ ಪೆಟ್ರೋಲ್ ಹಾಗೂ 120 ಪಿಎಸ್ ಪವರ್‌ನ ಐ-ಡಿಟೆಕ್ ಡೀಸೆಲ್ ಎಂಜಿನ್ ಪಡೆಯಲಿದೆ. ಇವೆರಡು ಸಿಕ್ಸ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಂತೆಯೇ ಪೆಟ್ರೋಲ್ ಮಾದರಿಯು ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

ಹೋಂಡಾ ಎಚ್‌ಆರ್ವಿ ಕಾರು ಹೋಂಡಾದ ಮ್ಯಾಜಿಕ್ ಸೀಟು ಸಿಸ್ಟಂ ಪಡೆಯಲಿದೆ. ಅಲ್ಲದೆ 453 ಲೀಟರ್ ಬೂಟ್ ಸ್ಪೇಸ್ ಕೂಡಾ ಪಡೆಯಲಿದೆ. ಇನ್ನು ಸೀಟುಗಳನ್ನು ಮಡಚಿದಾಗ ಗರಿಷ್ಠ 1026 ಲೀಟರ್ ಬೂಟ್ ಸ್ಪೇಸ್ ಪಡೆಯಲಿದೆ.

ಇನ್ನು ಏಳು ಇಂಚಿನ ಕನೆಕ್ಟ್ ಸ್ಕ್ರೀನ್, ಸ್ಮಾರ್ಟ್ ಫೋನ್ ತರಹನೇ ಕ್ರಿಯಾತ್ಮಕತೆ, ಆಂಡ್ರಾಯ್ಡ್ 4.0.4 ಆಪರೇಟಿಂಗ್ ಸಿಸ್ಟಂಗಳು ವೆಬ್ ಬ್ರೌಸಿಂಗ್, ಸೋಷಯಲ್ ಮೀಡಿಯಾ ಹಾಗೂ ಇಂಟರ್‌ನೆಟ್‌ನಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ.

ಇನ್ನು ಸುರಕ್ಷತೆಯತ್ತ ದೃಷ್ಟಿ ಹಾಯಿಸಿದಾಗ ಕರ್ಟೈನ್ ಏರ್ ಬ್ಯಾಗ್, ಏಸ್ ಬಾಡಿ ನಿರ್ಮಾಣ ಮತ್ತು ಹೋಂಡಾದ ಮುಂದುವರಿದ ಡ್ರೈವ್ ಆಸಿಸ್ಟ್ ಸಿಸ್ಟಂ ಕೂಡಾ ಪಡೆಯಲಿದೆ.

ಒಟ್ಟಿನಲ್ಲಿ ನೂತನ ಎಚ್‌ಆರ್-ವಿ ಕಾಂಪಾಕ್ಟ್ ಎಸ್‌ಯುವಿ ಭಾರತ ಮಾರುಕಟ್ಟೆಯನ್ನು ಯಾವಾಗ ತಲುಪಲಿದೆ ಎಂಬುದು ಇನ್ನಷ್ಟೇ ಖಚಿತವಾಗಲಿದೆ.


Click it and Unblock the Notifications








