ಇಂಡೋನೇಷ್ಯಾದಲ್ಲಿ ಅರಳಿದ ಹೊಸ ಮಾರುತಿ ಎರ್ಟಿಗಾ
2015 ಇಂಡೋನೇಷ್ಯಾ ಅಂತರಾಷ್ಟ್ರೀಯ ಆಟೋ ಶೋದಲ್ಲಿ ಅತಿ ನೂತನ ಮಾರುತಿ ಸುಜುಕಿ ಎರ್ಟಿಗಾ ಬಹು ಬಳಕೆಯ ವಾಹನವು (ಎಂಪಿವಿ) ಭರ್ಜರಿ ಅನಾವರಣಗೊಂಡಿದೆ. ಇದು ನಿಕಟ ಭವಿಷ್ಯದಲ್ಲೇ ಭಾರತ ಮಾರುಕಟ್ಟೆಯನ್ನು ತಲುಪಲಿದೆ.
ಹೊಸ ಎರ್ಟಿಗಾದಲ್ಲಿ ಆಧುನಿಕತೆಗೆ ತಕ್ಕಂತೆ ಅಂದತೆ ವೃದ್ಧಿಗೆ (cosmetic changes) ಆದ್ಯತೆ ಕೊಡಲಾಗಿದೆ. ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡಬರುವುದಿಲ್ಲ. ಇದೀಗ ನೂತನ ಎರ್ಟಿಗಾ ಭಾರತ ಪ್ರವೇಶ, ಆಕರ್ಷಕ ಚಿತ್ರಗಳು ಹಾಗೂ ಗಮನಾರ್ಹ ಬದಲಾವಣೆಗಳನ್ನು ತಿಳಿದುಕೊಳ್ಳಲು ಚಿತ್ರಪುಟದತ್ತ ಮುಂದುವರಿಯಿರಿ...

ನೂತನ ಮಾರುತಿ ಎರ್ಟಿಗಾ ಮುಂಬರುವ ಹಬ್ಬದ ಆವೃತ್ತಿಯ ವೇಳೆಯಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಪ್ರಮುಖವಾಗಿಯೂ ಹೋಂಡಾ ಮೊಬಿಲಿಯೊ ಹಾಗೂ ರೆನೊ ಲೊಡ್ಜಿ ಮುಂತಾದ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

ಇನ್ನು ಕಾರಿನಲ್ಲಿ ಕಂಡುಬರುವ ಪ್ರಮುಖ ಬದಲಾವಣೆ ಬಗ್ಗೆ ಮಾತನಾಡುವುದಾದ್ದಲ್ಲಿ ಮುಂಭಾಗದಲ್ಲಿ ಮೂರು ಪದರುಗಳ ದಪ್ಪವಾದ ಕ್ರೋಮ್ ಗ್ರಿಲ್ ಇರಲಿದೆ. ಅಂತೆಯೇ ಪರಿಷ್ಕೃತ ಬಂಪರ್ ಪ್ರಮುಖ ಆಕರ್ಷಣೆಯಾಗಲಿದೆ.

ಪರಿಷ್ಕೃತ ರೇಡಿಯೇಟರ್ ಗ್ರಿಲ್ ಹಾಗೂ ಫಾಗ್ ಲ್ಯಾಂಪ್ ಹೌಸಿಂಗ್ ನಲ್ಲೂ ಕ್ರೋಮ್ ಸ್ಪರ್ಶತೆ ಇರಲಿದೆ. ಆದರೆ ಕಾರಿನ ಬದಿಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ.

ಅಂತೆಯೇ ಹಿಂಭಾಗದಲ್ಲಿ ರಿಜಿಸ್ಟ್ರೇಷನ್ ಪ್ಲೇಟ್ ಮೇಲ್ಗಡೆಯಲ್ಲಿ ಲಾಂಛನದೊಂದಿಗೆ ಕ್ರೋಮ್ ಆಯ್ಕೆ ಇರಲಿದೆ. ಇವೆಲ್ಲದರ ಜೊತೆಗೆ ರಿಯರ್ ಪಾರ್ಕಿಂಗ್ ಸೆನ್ಸಾರ್ ಮತ್ತು ವರ್ಧಿತ ಟೈಲ್ ಲ್ಯಾಂಪ್ ಪ್ರತಿಫಲಕಗಳು ಪ್ರಮುಖ ಆಕರ್ಷಣೆಯಾಗಿದೆ.

ಕಾರಿನೊಳಗೆ ಗಾಢ ಕಂದು ಬಣ್ಣದ ಒಳಮೈ ಜಾಗವನ್ನು ಕೊಡಲಾಗಿದೆ. ಅಲ್ಲದೆ ಹೊಸ ಎರ್ಟಿಗಾದಲ್ಲಿ ಫ್ಯಾಬ್ರಿಕ್ ಹೋದಿಕೆಯು ಇರಲಿದೆ. ಅಂತೆಯೇ ಮೂರನೇ ಸಾಲಿನಲ್ಲಿ 50:50 ಸೀಟು ವಿಭಜನಾ ಆಯ್ಕೆಯೂ ಇರುತ್ತದೆ.

ಇನ್ನುಳಿದಂತೆ ವಿದ್ಯುನ್ಮಾನವಾಗಿ ಮಡಚಬಹುದಾದ ಹೊರಗಿನ ರಿಯರ್ ವ್ಯೂ ಮಿರರ್, ಚಾಲಕ ಬದಿಯಲ್ಲಿ ಆಟೋ ಅಪ್ ಪವರ್ ವಿಂಡೋ, ಎರಡನೇ ಸಾಲಿನಲ್ಲಿ ಐಚ್ಛಿಕ ಸಾಕೆಟ್ ಕನ್ಸೋಲ್, ಡ್ಯುಯಲ್ ಏರ್ ಬ್ಯಾಗ್ ಮತ್ತು ಎಬಿಎಸ್ ಸೌಲಭ್ಯಗಳು ದೊರಕಲಿದೆ.

ಎಂಜಿನ್ ತಾಂತ್ರಿಕತೆ
- 1.4 ಲೀಟರ್ ಕೆ ಸಿರೀಸ್ ಕೆ (ಕೆ14ಬಿ) ವಿವಿಟಿ ಪೆಟ್ರೋಲ್ ಎಂಜಿನ್
- 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ (ಫಿಯೆಟ್ ನಿಂದ ಆಮದು)
ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್
(ಭಾರತದಲ್ಲಿ ಆಟೋಮ್ಯಾಟಿಕ್ ವೆರಿಯಂಟ್ ಬಿಡುಗಡೆ ಸಾಧ್ಯತೆ)


Click it and Unblock the Notifications








