2017ರಲ್ಲಿ ಬರುತ್ತೆ 5 ಹಾಗೂ 7 ಸೀಟುಗಳ ವ್ಯಾಗನಾರ್

By Nagaraja

ದೇಶದ ಅತ್ಯಂತ ಯಶಸ್ವಿ ಸಣ್ಣ ಕಾರು ಮಾದರಿಗಳಲ್ಲಿ ವ್ಯಾಗನಾರ್ ಕೂಡಾ ಒಂದಾಗಿದೆ. ಆಟೋ ವಲಯದಲ್ಲಿ 'ಟಾಲ್ ಬಾಯ್' ಎಂದೇ ಮೆಚ್ಚುಗೆಗೆ ಪಾತ್ರವಾಗಿರುವ ಈ ದೊಡ್ಡ ಹ್ಯಾಚ್‌ಬ್ಯಾಕ್ ಕಾರು ಕಳೆದ ಅನೇಕ ವರ್ಷಗಳಿಂದ ಉತ್ತಮ ಮಾರಾಟ ಕಾಯ್ದುಕೊಂಡಿದೆ.

ಈಗ ಆಧುನಿಕತೆಗೆ ತಕ್ಕಂತೆ ವ್ಯಾಗನಾರ್‌ನಲ್ಲಿ ಕೆಲವೊಂದು ಬದಲಾವಣೆಗೆ ದೇಶದ ಅತಿ ದೊಡ್ಡ ಪ್ರಯಾಣಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಮುಂದಾಗಿದೆ. ಅಂದರೆ ಈಗಿನ ವ್ಯಾಗನಾರ್‌ನಲ್ಲಿ ಬದಲಾವಣೆಯಾಗಲಿದೆ ಎಂದಲ್ಲ.

wagonr

ಬದಲಾಗಿ ಗುಜರಾತ್ ಘಟಕದಲ್ಲಿ ಹೊಸ ವ್ಯಾಗನಾರ್‌ಗೆ ರೂಪುರೇಷೆ ನೀಡಲಾಗುತ್ತಿದ್ದು, ಈಗಾಗಲೇ ವೈಸಿಎ ಕೋಡ್‌ನಿಂದ ಅರಿಯಲ್ಪಟ್ಟಿದೆ. ವರದಿಗಳ ಪ್ರಕಾರ ವ್ಯಾಗನಾರ್ ಐದು ಹಾಗೂ ಏಳು ಸೀಟುಗಳ ಆಸನ ವ್ಯವಸ್ಥೆಯೊಂದಿಗೆ ಲಭ್ಯವಾಗಲಿದ್ದು, 2017 ಮಧ್ಯಂತರ ವೇಳೆಯಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ನಿಸ್ಸಾನ್ ಅಧೀನತೆಯಲ್ಲಿ ದಟ್ಸನ್ ಇನ್ನು ಕೆಲವೇ ದಿನಗಳಲ್ಲಿ ಸಬ್ ಫೋರ್ ಮೀಟರ್‌ನೊಳಗೆ ಸೆವೆನ್ ಸೀಟರ್ ಕಾಂಪಾಕ್ಟ್ ಎಂಪಿವಿ ಬಿಡುಗಡೆ ಮಾಡಲಿದೆ. ಈ ಎಲ್ಲದರ ಹಿನ್ನಲೆಯಲ್ಲಿ ಮಾರುತಿ ಬೆಳವಣಿಗೆ ವಾಹನ ವಲಯದಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.

ಇನ್ನು ಹೊಸ ವ್ಯಾಗನಾರ್ ಕಾರಿನ ವೈಶಿಷ್ಟ್ಯಗಳಾಗಲಿ ಅಥವಾ ತಾಂತ್ರಿಕ ಮಾಹಿತಿಗಳ ಬಗ್ಗೆ ಯಾವುದೇ ಮಾಹಿತಿಗಳು ಹೊರ ಬಂದಿಲ್ಲ.

More from DriveSpark

Article Published On: Tuesday, January 6, 2015, 14:46 [IST]
English summary
The Japanese manufacturer is not looking at small goals, it has a bigger picture in its mind. They are working on a project named YCA, it will be manufactured from their Gujarat facility. This vehicle will be developed at the beginning of 2017 and by mid-year will be available.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+