ಬುದ್ಧ ಅಂತರಾಷ್ಟ್ರೀಯ ರೇಸ್ ಟ್ರ್ಯಾಕ್ ನಲ್ಲಿ ನಿಸ್ಸಾನ್ ಶಕ್ತಿ ಪ್ರದರ್ಶನ
ಜಪಾನ್ ಮೂಲಕ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ನಿಸ್ಸಾನ್, ತನ್ನ ನಿಷ್ಠೆಯ ಗ್ರಾಹಕರು ಹಾಗೂ ವಾಹನ ಪ್ರೇಮಿಗಳಿಗಾಗಿ ಹೆಸರಾಂತ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್ ನಲ್ಲಿ ಅತಿ ವಿಶೇಷ ಕಾರ್ನಿವಲ್ 2015 ಡ್ರೈವಿಂಗ್ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಈ ಸಂದರ್ಭದಲ್ಲಿ ನಿಸ್ಸಾನ್ ಶ್ರೇಣಿಯ ವಾಹನಗಳ ಶಕ್ತಿ ಪ್ರದರ್ಶನ ನಡೆದಿತ್ತು.
ಒಟ್ಟಿನಲ್ಲಿ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್ ನಲ್ಲಿ ಹಬ್ಬದ ವಾತಾವರಣ ಮಡುಗಟ್ಟಿತ್ತು. ಪ್ರಸ್ತುತ ಡ್ರೈವಿಂಗ್ ಹಬ್ಬದಲ್ಲಿ ಭಾಗವಹಿಸಲು ನಮ್ಮ ಡ್ರೈವ್ ಸ್ಪಾರ್ಕ್ ಪ್ರತಿನಿಧಿಗಳು ವಿಶೇಷ ಆಹ್ವಾನವನ್ನು ಗಿಟ್ಟಿಸಿಕೊಂಡಿದ್ದರು. ಈ ವಿಶೇಷ ಕ್ಷಣವನ್ನು ನಿಮ್ಮೊಂದಿಗೂ ಹಂಚಿಕೊಳ್ಳಲು ನಾವು ಬಯಸುತ್ತಿದ್ದೇವೆ.

ನಿಸ್ಸಾನ್ ಹಬ್ಬದ ಆಚರಣೆಗೆ ವಿಶೇಷ ಕಾರಣವೊಂದಿದೆ. ನಿಸ್ಸಾನ್ ಸಂಸ್ಥೆಯು ಭಾರತಕ್ಕೆ ಪ್ರವೇಶಿಸಿ 10 ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ಈ ಮೂರು ದಿನಗಳ ಕಾರ್ಯಕ್ರಮವನ್ನು ಏರ್ಪಡಿಸಿದೆ.

ಪೆಟ್ರೋಲ್ ಜೊತೆ ಜೊತೆಗೆ ನಿಸ್ಸಾನ್ ಶ್ರೇಣಿಯ ಕಾರುಗಳಾದ ಲೀಫ್, ಮೈಕ್ರಾ, ಸನ್ನಿ ಹಾಗೂ ಟೆರನೊ ಮಾದರಿಗಳು ವಿಶೇಷ ಪೆಟ್ರೋಲಿಂಗ್ ನಡೆಸಿದ್ದವು.

ನಮಗೆ ದೊರಕಿದ ಮೊದಲ ಅನುಭವ ನಿಸ್ಸಾನ್ ಪೆಟ್ರೋಲ್ ಆಗಿತ್ತು. ಅಮೋಘ ವಿ8 ಎಂಜಿನ್ ಪಡೆದುಕೊಂಡಿರುವ ಈ ದುಬಾರಿ ಕಾರು ಆಫ್-ರೋಡಿಂಗ್ ನಲ್ಲೂ ಸೈ ಎನಿಸಿಕೊಂಡಿದೆ.

ಐಷಾರಾಮಿ ಕ್ರೀಡಾ ಬಳಕೆಯ ಕಾರಾಗಿರುವ ನಿಸ್ಸಾನ್ ಪೆಟ್ರೋಲ್ ನಿಕಟ ಭವಿಷ್ಯದಲ್ಲೇ ಭಾರತಕ್ಕೂ ಎಂಟ್ರಿ ಕೊಡಲಿದೆ. ಇದು ಇನ್ನಷ್ಟು ರೋಚಕತೆಗೆ ಕಾರಣವಾಗಿದೆ.

ಇದೇ ಸಂದರ್ಭದಲ್ಲಿ ಜನಪ್ರಿಯ ಟೆರನೊ ಕಾಂಪಾಕ್ಟ್ ಎಸ್ ಯುವಿ ಡ್ರೈವಿಂಗ್ ಅನುಭವ ಅವಕಾಶವನ್ನು ವಾಹನ ಪ್ರೇಮಿಗಳು ಪಡೆದಿದ್ದರು.

ಮೊದಲ ಬಾರಿಗೆ ಆಫ್ ರೋಡ್ ಚಾಲನಾ ಅನುಭವ ಪಡೆಯುವವರಿಗೆ ಟು ವೀಲ್ ಡ್ರೈವ್ ಸಿದ್ಧಾಂತದ ನಿಸ್ಸಾನ್ ಟೆರನೊ ರೋಮಾಂಚನಗೊಳಿಸಿತ್ತು.

ತದಾ ಬಳಿಕ ಅತ್ಯಂತ ಅಪಾಯಕಾರಿ ಆಫ್ ರೋಡ್ ಸವಾಲನ್ನು ಪೆಟ್ರೋಲ್ ಎಸ್ ಯುವಿ ಎದುರಿಸಿತ್ತು.

ಇಲ್ಲಿ ಪೆಟ್ರೋಲ್ ನ ಬೃಹತ್ ಎಂಜಿನ್ ಹಾಗೂ ಗ್ರೌಂಡ್ ಕ್ಲಿಯರನ್ಸ್ ನ ಪರಿಪೂರ್ಣ ಪ್ರಯೋಗ ನಡೆಯಿತು. ಈ ಎಲ್ಲ ಪರಿಸ್ಥಿತಿಯನ್ನು ನಿಸ್ಸಾನ್ ಪೆಟ್ರೋಲ್ ನಿರಾಯಾಸವಾಗಿ ಎದುರಿಸಿತ್ತು.

ನಿಸ್ಸಾನ್ ಸನ್ನಿ ಬಗ್ಗೆಯೂ ಗ್ರಾಹಕರಲ್ಲಿದ್ದ ಆತಂಕವನ್ನು ದೂರ ಮಾಡುವ ಪ್ರಯತ್ನ ಮಾಡಲಾಯಿತು.

ಏತನ್ಮಧ್ಯೆ ಯುರೋಪ್ ಖಂಡಗಳಲ್ಲಿ ಅತಿ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿರುವ ನಿಸ್ಸಾನ್ ಲೀಫ್ ಶೂನ್ಯ ಮಾಲಿನ್ಯದ ವಾಹನ ವಿಶೇಷ ಗಮನ ಸೆಳೆಯಿತು.

ಸಾಮಾನ್ಯವಾಗಿ ಎಲೆಕ್ಟ್ರಿಕ್ ವಾಹನಗಳೆಂದರೆ ಎಲ್ಲರೂ ನಿರ್ಲ್ಯಕ್ಷ ವಹಿಸುತ್ತಾರೆ. ಆದರೆ ಬುದ್ಧ ಅಂತರಾಷ್ಟ್ರೀಯ ರೇಸ್ ಟ್ರ್ಯಾಕ್ ನಲ್ಲಿ ಕಂಡುಬಂದ ದೃಶ್ಯ ಬೇರೆನೇ ಆಗಿತ್ತು.

ಹಾಗಿರಬೇಕಾದರೆ ನಿಸ್ಸಾನ್ ಸನ್ನಿ ಸೆಡಾನ್ ಸಹ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್ ಗೆ ಒಂದೆರೆಡು ಸುತ್ತನ್ನು ಹಾಕಿ ಬಂದಿತ್ತು. ಈ ಸಂದರ್ಭದಲ್ಲಿ ವಾಹನ ಪ್ರೇಮಿಗಳು ತಾವು ಮುಂದು ತಾವು ಮುಂದು ಎಂದು ಪೈಪೋಟಿಯನ್ನು ಆರಂಭಿಸಿದ್ದವು.

ಇನ್ನು ನಿಸ್ಸಾನ್ ಹ್ಯಾಚ್ ಬ್ಯಾಕ್ ಮೈಕ್ರಾ ಸಹ ತನ್ನ ಅಂದತೆಯನ್ನು ಪ್ರದರ್ಶಿಸಿತ್ತು. ಇದನ್ನು ಸಹ ನಾವು ಉಲ್ಲೇಖಿಸಲೇ ಬೇಕಾಗುತ್ತದೆ.

ಒಟ್ಟಾರೆಯಾಗಿ ಭವಿಷ್ಯದಲ್ಲಿ ಇಂತಹ ಕಾರ್ಯಕ್ರಮವನ್ನು ನಿರಂತರ ಅಂತರಾಳದಲ್ಲಿ ಆಯೋಜಿಸುವ ಯೋಜನಯನ್ನು ಸಂಸ್ಥೆಯು ಹೊಂದಿದೆ. ಈಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆಗೆ ಹಂಚಿಕೊಳ್ಳಿರಿ.


Click it and Unblock the Notifications