ಫ್ರಾಂಕ್‌ಫರ್ಟ್ ನಲ್ಲಿ ಅರಳಲಿರುವ ನಿಸ್ಸಾನ್ ಗ್ರಿಪ್ಜ್ ಕಾನ್ಸೆಪ್ಟ್ ಕಾರು
ಜರ್ಮನಿಯಲ್ಲಿ ನಡೆಯಲಿರುವ ಜಗತ್ತಿನ ಅತಿ ದೊಡ್ಡ ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ, ಜಪಾನ್ ಮೂಲದ ನಿಸ್ಸಾನ್ ಮೋಟಾರ್ಸ್ ಸಂಸ್ಥೆಯು ಅತಿ ನೂತನ ಗ್ರಿಪ್ಜ್ (Gripz) ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸಲಿದೆ.
ಐಕಾನಿಕ್ 240ಝಡ್ ಡೆಸಾರ್ಟ್ ರೇಸರ್ ಹಾಗೂ ರೋಡ್ ಸೈಕ್ಲಿಂಗ್ ನಿಂದ ಸ್ಪೂರ್ತಿ ಪಡೆದಿರುವ ನಿಸ್ಸಾನ್ ಗ್ರಿಪ್ಜ್, ಹೆಚ್ಚು ಕ್ರೀಡಾತ್ಮಕ ವಿನ್ಯಾಸವನ್ನು ಮೈಗೂಡಿಸಿಕೊಳ್ಳಲಿದೆ.

ನೈಜ ಕ್ರಾಸೋವರ್ ಮಾದರಿಗೆ ಹೊಸ ಆಯಾಮ ನೀಡಲಿರುವ ನಿಸ್ಸಾನ್ ಗ್ರಿಪ್ಜ್ ವಿಶಿಷ್ಟ ಚಾಲನಾ ಅನುಭವ ಸೃಷ್ಟಿ ಮಾಡುವ ನಂಬಿಕೆಯನ್ನು ಸಂಸ್ಥೆ ಹೊಂದಿದೆ.
ಬಹುನಿರೀಕ್ಷಿತ 2015 ಫ್ರಾಂಕ್ ಫರ್ಟ್ ಮೋಟಾರು ಶೋ ಸೆಪ್ಟೆಂಬರ್ 15ರಂದು ಆರಂಭವಾಗಲಿದೆ. ಈ ಸಂಬಂಧ ನಿಸ್ಸಾನ್ ಸಂಸ್ಥೆಯು ಟೀಸರ್ ವಿಡಿಯೋ ಹಾಗೂ ಚಿತ್ರವನ್ನು ಬಿಡುಗಡೆ ಮಾಡಿದೆ.

ನಿಸ್ಸಾನ್ ಗ್ರಿಪ್ಜ್: ಟೀಸರ್ ವಿಡಿಯೋ ವೀಕ್ಷಿಸಿ


Click it and Unblock the Notifications








