ಕಳಪೆ ಮಾರಾಟ; ಇವಾಲಿಯಾ ಎಂಪಿವಿ ಮಾರಾಟಕ್ಕೆ ಬಿತ್ತು ಬ್ರೇಕ್

Written By:

ಕಳಪೆ ಮಾರಾಟದ ಹಿನ್ನೆಲೆಯಲ್ಲಿ ದೇಶದಲ್ಲಿ ಇವಾಲಿಯಾ ಬಹು ಬಳಕೆಯ ವಾಹನದ (ಎಂಪಿವಿ) ಮಾರಾಟವನ್ನು ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆಯಾದ ನಿಸ್ಸಾನ್ ಸ್ಥಗಿತಗೊಳಿಸಿದೆ.

ಬಿಡುಗಡೆ ವೇಳೆ ಅತಿ ಹೆಚ್ಚು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಮಾದರಿಗಳಲ್ಲಿ ನಿಸ್ಸಾನ್ ಇವಾಲಿಯಾ ಒಂದಾಗಿತ್ತು. ಆದರೆ ನಿರೀಕ್ಷಿತ ಪ್ರಮಾಣದ ಮಾರಾಟ ಪಡೆಯುವಲ್ಲಿ ವಿಫಲವಾಗಿತ್ತು.

ನಿಸ್ಸಾನ್ ಇವಾಲಿಯಾ

ಅನೇಕ ಬಾರಿ ಪರಿಷ್ಕೃತ ಮಾದರಿಗಳನ್ನು ಪರಿಚಯಿಸಿದರೂ ಇವಾಲಿಯಾ ಮಾರಾಟಕ್ಕೆ ಉತ್ತೇಜನ ನೀಡುವಲ್ಲಿ ಸಂಸ್ಥೆ ವಿಫಲವಾಗಿತ್ತು. ಇವೆಲ್ಲದರ ಹಿನ್ನೆಲೆಯಲ್ಲಿ ಮಾರಾಟ ಸ್ಥಗಿತ ಮಾಡಲು ಸಂಸ್ಥೆ ನಿರ್ಧರಿಸಿದೆ.

ಭಾರತ ಮಾರುಕಟ್ಟೆಯಲ್ಲಿ ಟೊಯೊಟಾ ಇನ್ನೋವಾ ಹಾಗೂ ಮಹೀಂದ್ರ ಕ್ಸೈಲೋಗಳಂತಹ ಜನಪ್ರಿಯ ಮಾದರಿಗಳ ಮುಂದೆ ರೇಸ್ ಗಿಳಿದಿದ್ದ ಇವಾಲಿಯಾ ಹಿನ್ನೆಡೆ ಅನುಭವಿಸಿತ್ತು.

ನಿಮ್ಮ ಮಾಹಿತಿಗಾಗಿ ಇವಾಲಿಯಾ ರಿ ಬ್ಯಾಡ್ಜ್ ಪಡೆದುಕೊಂಡಿದ್ದ ಅಶೋಕ್ ಲೇಲ್ಯಾಂಡ್ ಸ್ಟೈಲ್ ಎಂಬ ಮಾದರಿಯನ್ನು ಪರಿಚಯಿಸಿತ್ತು. ಆದರೆ ಮಾರಾಟ ಕುಸಿತದ ಹಿನ್ನೆಲೆಯಲ್ಲಿ 2015 ಮೇ ತಿಂಗಳಲ್ಲಿ ಮಾರಾಟ ಕೊನೆಗೊಳಿಸಿತ್ತು.

English summary
Nissan has a wide range of products on offer in India, they also provide an affordable brand Datsun in the country. All in all they offer hatchbacks to compact SUV and even an MPV.
Story first published: Saturday, June 27, 2015, 16:31 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark