ಹಬ್ಬದ ಆವೃತ್ತಿ; ನಿಸ್ಸಾನ್ ಆಕರ್ಷಕ ಆಫರ್

By Nagaraja

ಹಬ್ಬದ ಆವೃತ್ತಿಯು ಆರಂಭವಾಗಿರುವಂತೆಯೇ ಜಪಾನ್ ಮೂಲದ ನಿಸ್ಸಾನ್ ಸಂಸ್ಥೆಯು ತನ್ನ ಶ್ರೇಣಿಯ ಕಾರುಗಳಿಗೆ ಆಕರ್ಷಕ ಆಫರುಗಳನ್ನು ಮುಂದಿಟ್ಟಿದೆ. ಈ ಮುಖಾಂತರ ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿದೆ.

ನಿಸ್ಸಾನ್ ಬಜೆಟ್ ಬ್ರಾಂಡ್ ಆಗಿರುವ ದಟ್ಸನ್ ಮಾದರಿಗಳಿಗೆ ಈಗಾಗಲೇ ಆಫರುಗಳನ್ನು ಘೋಷಿಸಲಾಗಿದೆ. ಈಗ ನಿಸ್ಸಾನ್ ತನ್ನ ಶ್ರೇಣಿಯ ಮೈಕ್ರಾ, ಸನ್ನಿ ಹಾಗೂ ಟೆರನೊ ಕಾರುಗಳಿಗೆ ಆಫರ್ ಗಳನ್ನು ಮುಂದಿಡುತ್ತಿದೆ.

ನಿಸ್ಸಾನ್ ಟೆರೆನೊ

ನೀವು ನಿಸ್ಸಾನ್ ಮೈಕ್ರಾ ಅಥವಾ ಮೈಕ್ರಾ ಆಕ್ಟಿವ್ ಆಯ್ಕೆ ಮಾಡಿದರೆ ರು. 45,000 ವರಗಿನ ಪ್ರಯೋಜನ ನಿಮ್ಮದಾಗಿಸಬಹುದಾಗಿದೆ. ಇದರಲ್ಲಿ ಎಕ್ಸ್ ಚೇಂಜ್ ಬೋನಸ್ ಹಾಗೂ ಅನೇಕ ಆಕ್ಸೆಸರಿಗಳು ಸೇರಿವೆ.

ಇನ್ನೊಂದೆಡೆ ನಿಸ್ಸಾನ್ ಸನ್ನಿ ಖರೀದಿ ವೇಳೆ ಆಕ್ಸೆಸರಿ ಹಾಗೂ ಎಕ್ಸ್ ಚೇಂಜ್ ಬೋನಸ್ ಸೇರಿದಂತೆ 75,000 ರು.ಗಳ ಪ್ರಯೋಜನ ನೀಡಲಾಗುತ್ತದೆ. ಅಂತೆಯೇ ಟೆರನೊ ಆಯ್ದ ವೆರಿಯಂಟ್ ಗಳಲ್ಲಿ ಒಟ್ಟಾರೆ 95,000 ರು.ಗಳ ಪ್ರಯೋಜನ ಪಡೆಯಬಹುದಾಗಿದೆ. ಇದರಲ್ಲಿ ನೇವಿಗೇಷನ್ ಸಿಸ್ಟಂ, ಎಕ್ಸ್ ಚೇಂಜ್ ಬೋನಸ್ ಹಾಗೂ ಐದು ಗ್ರಾಂ ಚಿನ್ನದ ನಾಣ್ಯ ಸೇರಿಕೊಂಡಿದೆ. ಅಲ್ಲದೆ ನಿರ್ದಿಷ್ಠ ಮಾದರಿಗಳಿಗೆ ಒಂದು ವರ್ಷದ ವರೆಗಿನ ಉಚಿತ ವಿಮೆ ಸಹ ನೀಡಲಾಗುತ್ತಿದೆ.

Article Published On: Monday, October 12, 2015, 12:09 [IST]
English summary
Nissan India Announce Attractive Offers For 2015 Festive Season
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+