ದೋಷಪೂರಿತ ಸ್ವಿಚ್, ಏರ್ ಬ್ಯಾಗ್; ಮೈಕ್ರಾ, ಸನ್ನಿ ಹಿಂದಕ್ಕೆ ಕರೆ

By Nagaraja

ದೋಷಪೂರಿತ ಎಂಜಿನ್ ಸ್ವಿಚ್, ಏರ್ ಬ್ಯಾಗ್ ಹಿನ್ನೆಲೆಯಲ್ಲಿ ತನ್ನ ಜನಪ್ರಿಯ ಮೈಕ್ರಾ ಹ್ಯಾಚ್ ಬ್ಯಾಕ್ ಹಾಗೂ ಸನ್ನಿ ಸೆಡಾನ್ ಕಾರುಗಳನ್ನು ಹಿಂದಕ್ಕೆ ಕರೆಯಲು ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ನಿಸ್ಸಾನ್ ನಿರ್ಧರಿಸಿದೆ.

ಭಾರತದಲ್ಲಿ 12,000ಕ್ಕೂ ಹೆಚ್ಚು ಮೈಕ್ರಾ ಹಾಗೂ ಸನ್ನಿ ಮಾದರಿಗಳಿಗೆ ವಾಪಾಸ್ ಕರೆ ನೀಡಲಾಗಿದೆ. ಜಾಗತಿಕ ರಿಕಾಲ್ ಭಾಗವಾಗಿ ಭಾರತದಲ್ಲೂ ಇಂತಹದೊಂದು ನಡೆಯನ್ನು ಸಂಸ್ಥೆ ಅನುಸರಿಸಿದೆ.

ನಿಸ್ಸಾನ್ ಮೈಕ್ರಾ

ಎಂಜಿನ್ ಸ್ವಿಚ್ ಹಾಗೂ ಏರ್ ಬ್ಯಾಗ್ ನಲ್ಲಿ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ನಿಸ್ಸಾನ್, 2013 ಜೂನ್ ತಿಂಗಳಿಂದ 2015 ಮಾರ್ಚ್ ತಿಂಗಳ ವರೆಗೆ ನಿರ್ಮಾಣವಾದ ಮಾದರಿಗಳನ್ನು ಹಿಂಪಡೆದಿದೆ.
ನಿಸ್ಸಾನ್ ಸನ್ನಿ

ಜಾಗತಿಕವಾಗಿ ನಿಸ್ಸಾನ್ ಸಂಸ್ಥೆಯು ಒಟ್ಟು 2,70,000 ವಾಹನಗಳನ್ನು ಹಿಂಪಡೆದುಕೊಂಡಿದ್ದು, ಸಮಸ್ಯೆ ಕಂಡುಬಂದಲ್ಲಿ ಸಂಪೂರ್ಣ ಉಚಿತವಾಗಿ ಸರಿಪಡಿಸಿಕೊಡಲಾಗುವುದು. ಇಲ್ಲೂ ಕಂಡುಬಂದಿರುವ ಗಮನಾರ್ಹ ಅಂಶವೆಂದರೆ ಈ ಏರ್ ಬ್ಯಾಗ್ ಗಳನ್ನು ಜಪಾನ್ ಮೂಲದ ಟಕಟಾ ಸಂಸ್ಥೆ ಒದಗಿಸಿತ್ತು.
Most Read Articles

Kannada
English summary
Now the Japanese based manufacturer is issuing a recall for their hatchback and sedan models in India. Nissan will be recalling over 12,000 Micra and Sunny models in the country.
Story first published: Tuesday, June 30, 2015, 12:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X