ನಿಸ್ಸಾನ್ ಪ್ರೀಮಿಯಂ ಕ್ರಾಸೋವರ್ ಭಾರತ ಪ್ರವೇಶ ಖಚಿತ
ಜಪಾನ್ ಮೂಲದ ಪ್ರತಿಷ್ಠಿತ ಸಂಸ್ಥೆಯಾಗಿರುವ ನಿಸ್ಸಾನ್, ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ಪೋದಲ್ಲಿ ನೂತನ ಕ್ರಾಸೋವರ್ ಮಾದರಿಯನ್ನು ಬಿಡುಗಡೆ ಮಾಡಲಿದೆ. ಈ ಬಗೆಗಿನ ವರದಿಯನ್ನು ಖಚಿತಪಡಿಸಿರುವ ನಿಸ್ಸಾನ್, ಎಕ್ಸ್-ಟ್ರೈಲ್ ಪ್ರೀಮಿಯಂ ಕ್ರಾಸೋವರ್ ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ಈ ಹಿಂದೆ ಕಳೆಪ ಮಾರಾಟದ ಹಿನ್ನೆಲೆಯಲ್ಲಿ ಎಕ್ಸ್-ಟ್ರೈಲ್ ಮಾರಾಟವನ್ನು ನಿಲುಗಡೆಗೊಳಿಸಲಾಗಿತ್ತು. ಆದರೆ ಇಲ್ಲಿಗೆ ಸೋಲೊಪ್ಪಿಕೊಳ್ಳಲು ತಯಾರಾಗದ ಸಂಸ್ಥೆಯು ಆಕ್ರಮಣಕಾರಿ ನಿಲುವು ಸ್ವೀಕರಿಸಲು ಮುಂದಾಗಿದೆ.

ಎಂಜಿನ್ ತಾಂತ್ರಿಕತೆ
- 1.6 ಲೀಟರ್ ಫೋರ್ ಸಿಲಿಂಡರ್ ಡೀಸೆಲ್,
- 127 ಅಶ್ವಶಕ್ತಿ,
- 320 ಎನ್‌ಎಂ ತಿರುಗುಬಲ,
- ಸಿವಿಟಿ ಗೇರ್ ಬಾಕ್ಸ್



Click it and Unblock the Notifications