ನಿಸ್ಸಾನ್ ಸಣ್ಣ ಕಾರು ಮುಂದಿನ ವರ್ಷ ಬಿಡುಗಡೆ ಸಾಧ್ಯತೆ

Written By:

ಜಪಾನ್ ಮೂಲದ ಪ್ರಖ್ಯಾತ ವಾಹನ ಸಂಸ್ಥೆಯಾಗಿರುವ ನಿಸ್ಸಾನ್, ಮುಂದಿನ ವರ್ಷ ಮಾರ್ಚ್ ವೇಳೆಯಾಗುವಾಗ ತನ್ನ ಬಹುನಿರೀಕ್ಷಿತ ಸಣ್ಣ ಕಾರನ್ನು ದೇಶದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಈ ಮೊದಲು 2017ರ ವೇಳೆಯಾಗುವಾಗ ಸಣ್ಣ ಕಾರನ್ನು ಪರಿಚಯಿಸುವ ಯೋಜನೆಯನ್ನು ಸಂಸ್ಥೆ ಹೊಂದಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಅತಿ ಬೇಗನೇ ಅಂದರೆ 2016ರ ವೇಳೆಯಾಗುವಾಗ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ನಿಸ್ಸಾನ್ ಸಣ್ಣ ಕಾರು

ಈ ಬಗ್ಗೆ ಪ್ರತಿಕ್ರಿಯಿಸಿರುವ ನಿಸ್ಸಾನ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅರುಣ್ ಮಲ್ಹೋತ್ರಾ, 'ಮಾರ್ಚ್ ವೇಳೆಯಾಗುವಾಗ ದೇಶದ ಜನತೆ ಹೊಸ ಎಂಟ್ರಿ ಕಾರನ್ನು ನೋಡಬಹುದು' ಎಂದಿದ್ದಾರೆ.

ವಿಶೇಷವೆಂದರೆ ನಿಸ್ಸಾನ್ ಬಜೆಟ್ ಕಾರು ಬ್ರಾಂಡ್ ಆಗಿರುವ ದಟ್ಸನ್ ತಳಹದಿಯಲ್ಲಿ ಹೊಸ ಕಾರು ನಿರ್ಮಾಣವಾಗಲಿದೆ. ಪ್ರಸ್ತುತ ಫ್ಲ್ಯಾಟ್ ಫಾರ್ಮ್ ನಿಂದಲೇ ಈಗಾಗಲೇ ಎರಡು ಮಾದರಿಗಳು (ದಟ್ಸನ್, ದಟ್ಸನ್ ಗೊ ಪ್ಲಸ್) ಹೊರಬಂದಿದೆ. ಅಲ್ಲದೆ ದಟ್ಸನ್ ಕೂಡಾ ಸಣ್ಣ ಕಾರನ್ನು (ರೆಡಿ ಗೊ) ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಇದುವೇ ನಿಸ್ಸಾನ್ ನ ಬಹುನಿರೀಕ್ಷಿತ ಮಾದರಿಯಾಗಲಿದೆಯೇ ಎಂಬುದು ಕುತೂಹಲವನ್ನುಂಟು ಮಾಡಿದೆ.

ಪ್ರಸ್ತುತ ನಿಸ್ಸಾನ್ ಸಂಸ್ಥೆಯು ಭಾರತದಲ್ಲಿ ದಟ್ಸನ್ ಬ್ರಾಂಡ್ ಗಾಗಿ 21 ಔಟ್ಲೆಟ್ ಗಳನ್ನು ಹೊಂದಿದೆ. ಅಂತೆಯೇ 2016ರ ವೇಳೆಯಾಗುವಾಗ ಈ ಸಂಖ್ಯೆಯನ್ನು 60ಕ್ಕೇರಿಸುವ ಯೋಜನೆ ಹೊಂದಿದೆ.

English summary
Japanese car manufacturer Nissan will launch a new small car in the Indian Market by March. The car was originally to be launched in 2017.
Story first published: Friday, July 10, 2015, 7:43 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark