ನಾಳಿನ ಕಾರಿಗೆ ಎನ್‌ವಿಡಿಯಾ ಡ್ರೈವ್ ಆಟೋಮೋಟಿವ್ ಕಂಪ್ಯೂಟರ್ಸ್‌ ಸೇವೆ

By Nagaraja

ಲಾಸ್ ವೇಗಾಸ್‌‍ನಲ್ಲಿ ಸಾಗುತ್ತಿರುವ 'ವಾರ್ಷಿಕ ಕನ್ಸೂಮರ್ ಎಲೆಕ್ಟ್ರಾನಿಕ್ ಶೋ 2015' ಶೋ ಹಲವಾರು ಕಾರಣಗಳಿಂದಾಗಿ ವಾಹನೋದ್ಯಮದ ಪಾಲಿಗೆ ಅತಿ ಮಹತ್ವದೆನಿಸಿಕೊಂಡಿದೆ. ಇಲ್ಲಿ ನಾವೀನ್ಯ ಗಾಡ್ಜೆಟ್ ಮಾತ್ರವಲ್ಲದೆ ಭವಿಷ್ಯದ ಕಾರಿಗೆ ಸಂಬಂಧಪಟ್ಟ ಅನೇಕ ಹೊಸ ತಂತ್ರಗಾರಿಕೆಗಳ ಅವಿಷ್ಕಾರವಾಗುತ್ತಿದೆ. ಇದು ಆಟೋಮೊಬೈಲ್ ವಿಭಾಗವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಭರವಸೆಯಲ್ಲಿದೆ.

ಈಗ ಸಾಂಟಾ ಕ್ಲಾರಾ ತಳಹದಿಯ ಅಮೆರಿಕದ ಗ್ಲೋಬಲ್ ತಾಂತ್ರಿಕ ಸಂಸ್ಥೆಯಾಗಿರುವ ಎನ್‌ವಿಡಿಯಾ ಕಾರ್ಪೋರೇಷನ್, ಸಿಇಎಸ್ 2015 ತಾಂತ್ರಿಕ ಮೇಳದಲ್ಲಿ ಹೊಸತಾದ ಎನ್‌ವಿಡಿಯಾ ಡ್ರೈವ್ ಆಟೋಮೋಟಿವ್ ಕಂಪ್ಯೂಟರ್ಸ್ ತಂತ್ರಜ್ಞಾನದ ನಾಳಿನ ಕಾರನ್ನು ಪ್ರದರ್ಶನಕ್ಕಿರಿಸಿದೆ.

nvidia

ಇದು ಚಾಲಕ ಕೋಣೆಯಲ್ಲಿ ಇನ್ನಷ್ಟು ಆಧುನಿಕತೆಯ ಸ್ಪರ್ಶ ನೀಡಲಿದೆ. ಎನ್‌ವಿಡಿಯಾ ಡ್ರೈವ್ ಪಿಎಕ್ಸ್ ಹಾಗೂ ಎನ್‌ವಿಡಿಯಾ ಡ್ರೈವ್ ಸಿಎಕ್ಸ್‌ಗಳೆಂಬ ಎರಡು ಕಂಪ್ಯೂಟರ್ ವ್ಯವಸ್ಥೆಗಳನ್ನು ಇಲ್ಲಿ ಒದಗಿಸಲಾಗುತ್ತದೆ.

ಭವಿಷ್ಯದ ಕಾರುಗಳಲ್ಲಿ ಮೊಬೈಲ್ ಸಂಪರ್ಕಿತ ಯಂತ್ರವು ಅತ್ಯಂತ ನಿರ್ಣಾಯಕವೆನಸಿಲಿದೆ. ಇದರ ಕ್ಯಾಮೆರಾ ಹಾಗೂ ಪರದೆಗಳು ಕಾರಿಗೆ ಹೆಚ್ಚಿನ ಗೋಚರತೆ ಪ್ರದಾನ ಮಾಡಲಿದೆ ಎಂದು ಸಂಸ್ಥೆ ತಿಳಿಸಿದೆ.

More from DriveSpark

Article Published On: Monday, January 5, 2015, 14:58 [IST]
English summary
NVIDIA will offer two car computers: NVIDIA DRIVE PX, for developing autopilot capabilities, and NVIDIA DRIVE CX, for creating the most advanced digital cockpit systems.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+