ಕಳಪೆ ಮಾರಾಟ; ರೆನೊ ಪಲ್ಸ್, ಸ್ಕಾಲಾ ನಿರ್ಮಾಣ ಸ್ಥಗಿತ
ಅತಿ ಕಳಪೆ ಮಟ್ಟದ ಮಾರಾಟದ ಹಿನ್ನೆಲೆಯಲ್ಲಿ ಪಲ್ಸ್ ಹಾಗೂ ಸ್ಕಾಲಾ ಮಾದರಿಗಳ ನಿರ್ಮಾಣ ಪ್ರಕ್ರಿಯೆಯನ್ನು ಅನಿರ್ಧಿಷ್ಟಾವಧಿ ತಿಂಗಳುಗಳಿಗೆ ನಿಲುಗಡೆಗೊಳಿಸಲು ಫ್ರಾನ್ಸ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ರೆನೊ ನಿರ್ಧರಿಸಿದೆ.
ದೇಶದಲ್ಲಿರುವ ರೆನೊ ಶ್ರೇಣಿಯ ಕಾರುಗಳ ಪೈಕಿ ಪಲ್ಸ್ ಹ್ಯಾಚ್‌ಬ್ಯಾಕ್ ಹಾಗೂ ಸ್ಕಾಲಾ ಸೆಡಾನ್ ಕಾರುಗಳಿಗೆ ಬೇಡಿಕೆ ಕುಂಠಿತಗೊಂಡಿದೆ. ಅಷ್ಟೇ ಯಾಕೆ ಸಿಯಾಮ್ ಹೊರಬಿಟ್ಟಿರುವ ಮಾಹಿತಿಯ ಪ್ರಕಾರ 2014ರ ಮೇ ತಿಂಗಳ ಬಳಿಕ ಕೇವಲ ಸ್ಕಾಲಾ 183 ಯುನಿಟ್ ಹಾಗೂ 2014 ಅಕ್ಟೋಬರ್ ಬಳಿಕ 59 ಪಲ್ಸ್ ಮಾದರಿಗಳನ್ನಷ್ಟೇ ನಿರ್ಮಿಸಲಾಗಿದೆ.

ಹಾಗಿದ್ದರೂ ಈ ಎರಡು ಮಾದರಿಗಳನ್ನು ಸಂಪೂರ್ಣವಾಗಿ ನಿಲುಗಡೆಗೊಳಿಸಲು ರೆನೊ ಬಯಸುತ್ತಿಲ್ಲ. ಅಲ್ಲದೆ ಮುಂದಿನ ಕೆಲವು ತಿಂಗಳೊಳಗೆ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಿದೆ.
ಇದನ್ನು ರೆನೊ ಸಂಸ್ಥೆಯ ವಕ್ತಾರ ಕೂಡಾ ಖಚಿತಪಡಿಸಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ತಮ್ಮ ತಮ್ಮ ತಳಹದಿಯನ್ನು ಹಂಚಿಕೊಂಡಿರುವ ರೆನೊದ ಪಲ್ಸ್ ಹಾಗೂ ಸ್ಕಾಲಾ ಕಾರುಗಳೇ ಮರು ಲಾಂಛನ ಪಡೆದುಕೊಂಡು ನಿಸ್ಸಾನ್ ಮೈಕ್ರಾ ಹಾಗೂ ಸನ್ನಿ ರೂಪದಲ್ಲಿ ಮಾರಾಟವಾಗುತ್ತಿದೆ. ಇವೆರಡು 2013 ಹಾಗೂ 2014ರಲ್ಲಿ ಅನುಕ್ರಮವಾಗಿ ಫೇಸ್‌ಲಿಫ್ಟ್ ವರ್ಷನ್ ಪಡೆದುಕೊಂಡಿದ್ದವು.


Click it and Unblock the Notifications








