ಅತಿ ದುಬಾರಿ ಪೋರ್ಷೆ 911 ಟಾರ್ಗಾ ಭಾರತದಲ್ಲಿ ಬಿಡುಗಡೆ

By Nagaraja

ಜರ್ಮನಿಯ ಮಗದೊಂದು ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಪೋರ್ಷೆ ಸಹ ಭಾರತದ ಶ್ರೀಮಂತ ಗ್ರಾಹಕರನ್ನು ಸೆಳೆದುಕೊಳ್ಳುವ ಯೋಜನೆಯಲ್ಲಿದ್ದು, ಇದರಂತೆ ಅತಿ ದುಬಾರಿ 911 ಟಾರ್ಗಾ ಮಾದರಿಯನ್ನು ಬಿಡುಗಡೆಗೊಳಿಸಿದೆ.

ಭಾರತದ ವಾಹನ ಸಾಮರ್ಥ್ಯವನ್ನು ಅರಿತುಕೊಂಡಿರುವ ಜಗತ್ತಿನೆಲ್ಲ ಪ್ರಮುಖ ಲಗ್ಷುರಿ ಕಾರು ತಯಾರಿಕ ಸಂಸ್ಥೆಗಳು ದೇಶದತ್ತ ಚಿತ್ತ ಹಾಯಿಸಿದೆ. ಈ ನಡುವೆ ಪೋರ್ಷೆ 911 ಟಾರ್ಗಾ ತನ್ನ ಸ್ಥಾನ ಗುರುತಿಸಿಕೊಂಡಿತೇ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

Porsche 911 Targa

ಬೆಲೆ ಮಾಹಿತಿ - ಪೋರ್ಷೆ 911 ಟಾರ್ಗಾ (ಎಕ್ಸ್ ಶೋ ರೂಂ ದೆಹಲಿ) - ವೆರಿಯಂಟ್ - 2
  • ಪೋರ್ಷೆ 911 ಟಾರ್ಗಾ 4 - 1.59 ಕೋಟಿ ರು.
  • ಪೋರ್ಷೆ 911 ಟಾರ್ಕಾ 4ಎಸ್ - 1.78 ಕೋಟಿ ರು.

ತಾಂತ್ರಿಕತೆ
ಹೊಸ ಪೋರ್ಷೆ 911 ಟಾರ್ಗಾ 4 ಮಾದರಿಯು ಸಿಕ್ಸ್ ಸಿಲಿಂಡರ್ 3.4 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 390 ತಿರುಗುಬಲದಲ್ಲಿ 350 ಅಶ್ವಶಕ್ತಿ ಉತ್ಪಾದಿಸಲಿದೆ. ಅಂತೆಯೇ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (ಪಿಡಿಕೆ) ಸ್ಟ್ಯಾಂಡರ್ಡ್ ಆಗಿ ಪಡೆಯಲಿದೆ.

Porsche 911 Targa

ಇನ್ನು ಪೋರ್ಷೆ 911 ಟಾರ್ಗಾ 4ಎಸ್ ಮಾದರಿಯು ಸಿಕ್ಸ್ ಸಿಲಿಂಡರ್ 3.8 ಲೀಟರ್ ಎಂಜಿನ್ ಪಡೆಯಲಿದ್ದು, 400 ಅಶ್ವಶಕ್ತಿ (440 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಕೂಡಾ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (ಪಿಡಿಕೆ) ಸ್ಟ್ಯಾಂಡರ್ಡ್ ಆಗಿ ಪಡೆಯಲಿದೆ. ಇವೆಲ್ಲದರ ಜೊತೆಗೆ ಐಚ್ಛಿಕ ಕ್ರೊನೊ ಪ್ಯಾಕೇಜ್ ಸಹ ಗ್ರಾಹಕರು ಪಡೆಯಬಹುದಾಗಿದೆ.

ವಿನ್ಯಾಸ
ವಿಶಿಷ್ಟ ವಿನ್ಯಾಸವನ್ನು ಕಾಪಾಡಿಕೊಂಡಿರುವ ಪೋರ್ಷೆ 911 ಟಾರ್ಗಾ ಕಾರಿನ ಒಳಗೂ ಹೊರಗೂ ಗರಿಷ್ಠ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ.

Porsche 911 Targa

ವಿಶಿಷ್ಟತೆ
ನಾಲ್ಕು ಪಾಯಿಂಟ್ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್,
ಬೈ ಕ್ಸೆನಾನ್ ಹೆಡ್ ಲೈಟ್,
ಪೆಡಲ್ ಶಿಫ್ಟರ್,
20 ಇಂಚಿನ ಅಲಾಯ್ ವೀಲ್,
ವಾಹನ ಟ್ರಾಕಿಂಗ್ ವ್ಯವಸ್ಥೆ,
ಲೆಥರ್ ಇಂಟಿರಿಯರ್,
ಎಂಪಿ3 ಕನೆಕ್ಟಿವಿಟಿ,
ಸ್ಪೋರ್ಟ್ಸ್ ಸೀಟು,
ಡಿಜಿಟಲ್ ರೆಡಿಯೋ,
ಪೋರ್ಷೆ ಕಮ್ಯೂನಿಕೇಷನ್ ಮ್ಯಾನೇಜ್‌ಮೆಂಟ್ ಜೊತೆ ಸ್ಯಾಟಲೈಟ್ ನೇವಿಗೇಷನ್,
ಪೋರ್ಷೆ ಸ್ಟೆಬಿಲಿಟಿ ಮ್ಯಾನೇಜ್ ಮೆಂಟ್,
ಪೋರ್ಷೆ ಟ್ರಾಕ್ಷನ್ ಮ್ಯಾನೇಜ್ ಮೆಂಟ್,
ಪೋರ್ಷೆ ಆಕ್ಟಿವ್ ಸಸ್ಪೆಷನ್ ಮ್ಯಾನೇಜ್ ಮೆಂಟ್,

More from DriveSpark

Article Published On: Wednesday, February 4, 2015, 12:55 [IST]
English summary
German luxury car manufacturer Porsche offers a few of its high-end products in India. Now the manufacturer has opted to launch its 911 Targa in India, it is currently on offer in several developed markets. The open top is being offered in India in two options.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+