ಅತ್ಯಂತ ಶಕ್ತಿಶಾಲಿ ಪೋರ್ಷೆ 911 ಟರ್ಬೊ ಎಸ್ ಬಿಡುಗಡೆ
ಅಮೆರಿಕದ ಡೆಟ್ರಾಯ್ಟ್ ನಲ್ಲಿ ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಪ್ರಖ್ಯಾತ ಉತ್ತರ ಅಮೆರಿಕ ಅಂತರಾಷ್ಟ್ರೀಯ ಆಟೋ ಶೋಗಿಂತಲೂ ಮುಂಚಿತವಾಗಿ ಐಷಾರಾಮಿ ಪೋರ್ಷಿ ಸಂಸ್ಥೆಯು ಅತ್ಯಂತ ಶಕ್ತಿಶಾಲಿ 911 ಟರ್ಬೊ ಮತ್ತು ಟರ್ಬೊ ಎಸ್ ಕಾರುಗಳನ್ನು ಬಿಡುಗಡೆ ಮಾಡಿದೆ.
911 ಟರ್ಬೊ
ಎಂಜಿನ್ ತಾಂತ್ರಿಕತೆ
ನೂತ ಪೋರ್ಷೆ 911 ಟರ್ಬೊ ಕಾರು ತನ್ನ ಹಿಂದಿನ ಮಾದರಿಗಿಂತಲೂ ಹೆಚ್ಚು ಪವರ್ ಫುಲ್ ಎನಿಸಿಕೊಳ್ಳಲಿದ್ದು, 18 ಅಶ್ವಶಕ್ತಿ ಹೆಚ್ಚು ಶಕ್ತಿಯನ್ನು ಉತ್ಪಾದಿಸಲಿದೆ. ಅಂದರೆ ಒಟ್ಟಾರೆ 532 ಬಿಎಚ್‌ಪಿ ಉತ್ಪಾಸಿದುವ ಸಾಮರ್ಥ್ಯ ಪಡೆಯಲಿದೆ.

ವೇಗವರ್ಧನೆ: 3 ಸೆಕೆಂಡುಗಳಲ್ಲೇ ಗಂಟೆಗೆ 100 ಕೀ.ಮೀ.
ಗರಿಷ್ಠ ವೇಗ: ಗಂಟೆಗೆ 100 ಕೀ.ಮೀ.
911 ಟರ್ಬೊ ಎಸ್
ಎಂಜಿನ್ ತಾಂತ್ರಿಕತೆ
3.8 ಲೀಟರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಪೋರ್ಷೆ 911 ಟರ್ಬೊ ಎಸ್ ಕಾರು ಹಿಂದಿನ ಮಾದರಿಗಿಂತಲೂ 20 ಅಶ್ವಶಕ್ತಿ ಹೆಚ್ಚು ಉತ್ಪಾದಿಸಲಿದ್ದು, ತನ್ನ ಶಕ್ತಿಯು 571 ಬಿಎಚ್‌ಪಿ ಹೆಚ್ಚಲಿದೆ.

ವೇಗವರ್ಧನೆ: 2.9 ಸೆಕೆಂಡುಗಳಲ್ಲೇ ಗಂಟೆಗೆ 100 ಕೀ.ಮೀ.
ಗರಿಷ್ಠ ವೇಗ: ಗಂಟೆಗೆ 330 ಕೀ.ಮೀ.
ಎರಡು ಮಾದರಿಗಳು ಕ್ರೊನೊ ಪ್ಯಾಕೇಜ್ ಹಾಗೂ ಪೋರ್ಷೆ ಆಕ್ಟಿವ್ ಸಸ್ಪೆನ್ಷನ್ ಮ್ಯಾನೇಜ್ ಮೆಂಟ್ ಸ್ಟ್ಯಾಂಡರ್ಡ್ ಆಗಿ ಪಡೆಯಲಿದೆ. ಇದಲ್ಲದೆ ಟರ್ಬೊ ಎಸ್ ಮಾದರಿಯು ಡೈನಾಮಿಕ್ ಚಾಸೀ ಕಂಟ್ರೋಲ್ ಮತ್ತು ಕ್ಯಾಬಿನ್ ಸೆರಾಮಿಕ್ ಬ್ರೇಕ್ ಪಡೆಯಲಿದೆ.
ಎಲ್‌ಇಡಿ ಇಂಡಿಕೇಟರ್, ಎಲ್‌ಇಡಿ ಟೈಲ್ ಲ್ಯಾಂಪ್, ಪರಿಷ್ಕೃತ ಬಂಪರ್, ಹೊಸ ಗ್ರಾಫಿಕ್ಸ್, ಹೊಸ ಗ್ರಿಲ್, ಹೊಸ ಸ್ಟೈಲಿಂಗ್ ಪ್ಯಾಕೇಜ್ ಮತ್ತು 20 ಇಂಚುಗಳ ವೀಲ್ ಗಳು ಪ್ರಮುಖ ಆಕರ್ಷಣೆಯಾಗಲಿದೆ.

ಈಗಾಗಲೇ ಯುರೋಪ್ ಮತ್ತು ಯುಕೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಈ ಎರಡು ಮಾದರಿಗಳು ಕೂಪೆ ಹಾಗೂ ಕನ್ವರ್ಟಿಬಲ್ ಶೈಲಿಯಲ್ಲಿ ಲಭ್ಯವಾಗಲಿದೆ.




Click it and Unblock the Notifications