ಪೋರ್ಷೆ ಎಲೆಕ್ಟ್ರಿಕ್ ಕಾರು ಆಗಮನ ಖಚಿತ

By Nagaraja

ಕಾಲಕ್ಕೆ ತಕ್ಕಂತೆ ನಡೆಯಬೇಕು. ಇಲ್ಲದಿದ್ದಲ್ಲಿ ರೇಸ್ ಎಂಬ ಓಟದಲ್ಲಿ ಹಿಂದೆ ಬೀಳುವುದು ಖಚಿತ. ಇದನ್ನೇ ಮನಗಂಡಿರುವ ಜಗತ್ತಿನ ಐಷಾರಾಮಿ ಕಾರು ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಪೋರ್ಷೆ ಸಂಪೂರ್ಣ ವಿದ್ಯುತ್ ಚಾಲಿತ ಕಾರನ್ನು ನಿರ್ಮಿಸುವುದಾಗಿ ಖಚಿತಪಡಿಸಿದೆ.

ಪ್ರಮುಖವಾಗಿಯೂ ಬಿಎಂಡಬ್ಲ್ಯು ಹಾಗೂ ಟೆಸ್ಲಾ ಮಾಡೆಲ್ ಎಸ್ ಮಾದರಿಗಳಿಗೆ ಪ್ರತಿಸ್ಪರ್ಧಿಯನ್ನು ಕಣಕ್ಕಿಳಿಸುವುದು ಪೋರ್ಷೆ ಮಾತೃಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ ಎಜಿ ಇರಾದೆಯಾಗಿದೆ.

Porsche

ಈ ಮೂಲಕ ಪೋರ್ಷೆ ವಿದ್ಯುತ್ ಚಾಲಿತ ಕಾರಿನಲ್ಲಿ ಎಲೆಕ್ಟ್ರಿಕ್ ಮೋಟಾರು ದರ್ಶನವಾಗಲಿದೆ. ಆದರೆ ಎದುರಾಗುವ ತೊಡಕುಗಳನ್ನು ಸಂಸ್ಥೆಯು ಹೇಗೆ ನಿಭಾಯಿಸಲಿದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಾಗಿದೆ.

ಜರ್ಮನಿಯ ಗರಿಷ್ಠ ನಿರ್ವಹಣೆಯ ಸ್ಪೋರ್ಟ್ಸ್ ಕಾರು, ಸೂಪರ್ ಕಾರು, ಎಸ್‌ಯುವಿ ಹಾಗೂ ಸೆಡಾನ್ ಕಾರುಗಳನ್ನು ನಿರ್ಮಿಸುವುದರಲ್ಲಿ ಹೆಸರು ಮಾಡಿರುವ ಪೋರ್ಷೆ, ಭಾರತದಲ್ಲಿ ಪೋರ್ಷೆ ಕೆಮಾನ್, ಪೋರ್ಷೆ 911, ಪೋರ್ಷೆ ಬಾಕ್ಸಟರ್, ಪೋರ್ಷೆ ಕೆಯಾನ್, ಪೋರ್ಷೆ ಮಕಾನ್ ಮತ್ತು ಪೋರ್ಷೆ ಪನಮೆರಾಗಳೆಂಬ ದುಬಾರಿ ಕಾರುಗಳನ್ನು ಮಾರಾಟ ಮಾಡುತ್ತಿದೆ.

More from DriveSpark

Article Published On: Tuesday, March 17, 2015, 9:15 [IST]
English summary
First All Electric Porsche Confirmed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+