ಎಸ್‌ಯುವಿ ಕ್ಯಾಬ್ರಿಯೊ ಮಾದರಿಗೆ ರೇಂಜ್ ರೋವರ್ ಸಿದ್ಧತೆ
ಪ್ರೀಮಿಯಂ ಕಾರು ವಿಭಾಗದಲ್ಲಿ ರೇಂಜ್ ರೋವರ್ ತನ್ನದೇ ಆದ ಹೆಸರನ್ನು ಉಳಿಸಿಕೊಂಡಿದೆ. ವಿಶೇಷವೆಂದರೆ ಅತ್ಯಂತ ಬೆಲೆಬಾಳುವ ರೇಂಜ್ ರೋವರ್ ಕ್ರೀಡಾ ಬಳಕೆಯ ವಾಹನಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ.
ಸಾಮಾನ್ಯವಾಗಿ ಸೆಡಾನ್ ಮಾದರಿಗಳ ಕ್ಯಾಬ್ರಿಯೊಲೆಟ್ ರೂಪವನ್ನು ನಾವು ಕಂಡಿರುತ್ತೇವೆ. ಈಗ ಒಂದು ಹೆಜ್ಜೆ ಮುಂದೆಯಿಟ್ಟಿರುವ ಪ್ರಖ್ಯಾತ ರೇಂಜ್ ರೋವರ್ ಸಂಸ್ಥೆಯು, ಎಸ್‌ಯುವಿ ಕ್ಯಾಬ್ರಿಯೊಲೆಟ್ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಇದಕ್ಕಾಗಿ ತನ್ನ ಅತ್ಯಂತ ಜನಪ್ರಿಯ ಮಾದರಿಯನ್ನೇ ರೇಂಜ್ ರೋವರ್ ಬಳಸಿಕೊಳ್ಳುತ್ತಿದೆ. ಹೌದು, ರೇಂಜ್ ರೋವರ್ ಇವೋಕ್ ತಳಹದಿಯಲ್ಲಿ ಕ್ಯಾಬ್ರಿಯೊಲೆಟ್ ಮಾದರಿ ನಿರ್ಮಾಣವನ್ನು ಆರಂಭಿಸಲು ಸಂಸ್ಥೆಯು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ಸಂಸ್ಥೆಯು ಇದನ್ನು ಖಚಿತಪಡಿಸಿದ್ದು, 2015 ವರ್ಷಾಂತ್ಯದಲ್ಲೇ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. 2012ನೇ ಸಾಲಿನಲ್ಲಿ ಪ್ರದರ್ಶನಕ್ಕಿರಿಸಲಾಗಿದ್ದ ಕಾನ್ಸೆಪ್ಟ್ ಮಾದರಿಗೆ ಹಲವು ಸಾಮತ್ಯೆಗಳನ್ನು ಇದು ಪಡೆದುಕೊಳ್ಳಲಿದೆ.

ಅಂದ ಹಾಗೆ ಡೀಸೆಲ್ ಹಾಗೂ ಪೆಟ್ರೋಲ್ ಮಾದರಿಗಳಲ್ಲಿ ನಿರೀಕ್ಷಿಸಬಹುದಾಗಿದೆ.
4 ಸಿಲಿಂಡರ್ 2179 ಸಿಸಿ ಟರ್ಬೊ ಡೀಸೆಲ್ ಎಂಜಿನ್ - 188 ಬಿಎಚ್‌ಪಿ, 420 ಎನ್‌ಎಂ ಟಾರ್ಕ್ , ಆಲ್ ವೀಲ್ ಡ್ರೈವ್ ಜೊತೆಗೆ 9 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ಇನ್ ಲೈನ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ 199ಸಿಸಿ ಪೆಟ್ರೋಲ್ ಎಂಜಿನ್ - 237 ಬಿಎಚ್‌ಪಿ, 340 ಎನ್‌ಎಂ ಟಾರ್ಕ್, ಆಲ್ ವೀಲ್ ಡ್ರೈವ್ ಜೊತೆಗೆ 9 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್.


Click it and Unblock the Notifications








