ರೆನೊ ಡಸ್ಟರ್ ದೀಪಾವಳಿ ಆಫರ್ ಮತ್ತು ಡಿಸ್ಕೌಂಟ್ಸ್
ದೀಪಾವಳಿ ಹಬ್ಬದ ಸಂಭ್ರಮದ ಈ ವೇಳೆಯಲ್ಲಿ ದೇಶದೆಲ್ಲ ಜನಪ್ರಿಯ ಸಂಸ್ಥೆಗಳು ತನ್ನೆಲ್ಲ ಮಾದರಿಗಳಿಗೆ ಆಕರ್ಷಕ ಆಫರ್ ಗಳನ್ನು ಮುಂದಿಡುತ್ತಿದೆ. ಹಾಗಿರುವಾಗ ಹೊಸ ಕಾರು ಖರೀದಿಗಾರರು ಈ ಎಲ್ಲದರ ಸ್ಪಷ್ಟ ಮಾಹಿತಿ ಗಿಟ್ಟಿಸಿಕೊಳ್ಳುವುದು ಅತಿ ಮಹತ್ವಪೂರ್ಣವೆನಿಸುತ್ತದೆ.
ಪ್ರಸ್ತುತ ಫ್ರಾನ್ಸ್ ಮೂಲದ ವಾಹನ ಸಂಸ್ಥೆಯಾಗಿರುವ ರೆನೊ ಇಂಡಿಯಾ ಈ ಬೆಳಕಿನ ಹಬ್ಬದ ಆವೃತ್ತಿಯ ಸಂಭ್ರಮದಲ್ಲಿ ತನ್ನ ಜನಪ್ರಿಯ ಡಸ್ಟರ್ ಕ್ರೀಡಾ ಬಳಕೆಯ ವಾಹನಕ್ಕೆ ಆಕರ್ಷಕ ಆಫರ್ ಹಾಗೂ ಡಿಸ್ಕೌಂಟ್ ಗಳನ್ನು ಒದಗಿಸುತ್ತಿದೆ.

ಡಸ್ಟರ್ ಖರೀದಿ ವೇಳೆಯಲ್ಲಿ ಶೇಕಡಾ 4.99ರಷ್ಟು ವಿಶೇಷ ಬಡ್ಡಿದರ ಅಥವಾ 45,000 ರು.ಗಳ ಪ್ರಯೋಜನವನ್ನು ನೀಡಲಾಗುತ್ತಿದೆ. ಹಾಗೆಯೇ ಆಯ್ದ ಮಾದರಿಗೆ 25,000 ರು.ಗಳ ಹೆಚ್ಚುವರಿ ಪ್ರಯೋಜನವೂ ಲಭ್ಯವಾಗುತ್ತದೆ. ಇವೆಲ್ಲದರ ಹೊರತಾಗಿ 6,000 ರು.ಗಳ ಕಾರ್ಪೋರೇಟ್ ಡಿಸ್ಕೌಂಟ್ ಸಹ ರೆನೊ ಒದಗಿಸುತ್ತಿದೆ.
ಪ್ರಸ್ತುತ ಅತ್ಯುತ್ತಮ ಮಾರಾಟ ಎಸ್ ಯುವಿ ಕಾರುಗಳಲ್ಲಿ ಗುರುತಿಸಿಕೊಂಡಿರುವ ರೆನೊ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದರಲ್ಲಿ 1.6 ಲೀಟರ್ ಪೆಟ್ರೋಲ್ (102 ಅಶ್ವಶಕ್ತಿ, 145 ಎನ್‌ಎಂ ತಿರುಗುಬಲ) ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್‌ಗಳು (84 ಅಶ್ವಶಕ್ತಿ, 200 ಎನ್‌ಎಂ ತಿರುಗುಬಲ) ಪ್ರಮುಖವೆನಿಸಿದೆ. ಪ್ರಸ್ತುತ 1.5 ಲೀಟರ್ ಡೀಸೆಲ್ ಎಂಜಿನ್ ಇನ್ನೊಂದು ಪವರ್ ಆಯ್ಕೆಯಲ್ಲೂ (108 ಅಶ್ವಶಕ್ತಿ, 248 ಎನ್‌ಎಂ ತಿರುಗುಬಲ) ಲಭ್ಯವಿರುತ್ತದೆ. ಇವೆಲ್ಲವೂ 5 ಸ್ಪೀಡ್ ಮ್ಯಾನುವಲ್ ಹಾಗೂ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಗಳಲ್ಲಿ ಆಗಮನವಾಗಿದೆ. ಇನ್ನು ಆಲ್ ವೀಲ್ ಡ್ರೈವ್ (ಎಡಬ್ಲ್ಯುಡಿ) ಆಯ್ಕೆಯೂ ವಿಶಿಷ್ಟವಾಗಿಸುತ್ತದೆ.


Click it and Unblock the Notifications








