ಡಸ್ಟರ್ ಎಕ್ಸ್‌ಪ್ಲೋರ್ ಸೀಮಿತ ಆವೃತ್ತಿ ಬಿಡುಗಡೆ
ಫ್ರಾನ್ಸ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆ ರೆನೊ, ಭಾರತದಲ್ಲಿ ತನ್ನ ಜನಪ್ರಿಯ ಡಸ್ಟರ್ ಮಾದರಿಯ ಸೀಮಿತ ಎಕ್ಸ್ ಪ್ಲೋರ್ (EXPLORE) ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ಡಸ್ಟರ್ ಎಕ್ಸ್ ಪ್ಲೋರ್ ಕಾರಿನಲ್ಲಿ 25 ಹೆಚ್ಚುವರಿ ವೈಶಿಷ್ಟ್ಯಗಳು ಗ್ರಾಹಕರಿಗೆ ಲಭ್ಯವಾಗಲಿದೆ.
ದಿಟ್ಟ ನೋಟ, ಕ್ರೀಡಾತ್ಮಕ ಹೊರಮೈ, ಆಕರ್ಷಕ ಒಳಮೈ ಮತ್ತು ಸಂಸ್ಕರಿಸಿದ 1.5 ಲೀಟರ್ ಡಿಸಿಐ (dCi) ಎಂಜಿನ್ ಹೊಸ ಡಸ್ಟರ್ ಎಕ್ಸ್ ಪ್ಲೋರ್ ಕಾರಿಗೆ ಮತ್ತಷ್ಟು ಮೆರಗು ತುಂಬಲಿದೆ.

ಹೊರಮೈ
ಡಾರ್ಕ್ ಕ್ರೋಮ್ ಫ್ರಂಟ್ ಗ್ರಿಲ್, ಸ್ಕಿಡ್ ಪ್ಲೇಟ್, ರೇಸಿಂಗ್ ರೇಖೆ, ಸ್ಪೋರ್ಟಿ ರೊಬಸ್ಟ್ ಡಿಸೈನ್, ದಿಟ್ಟವಾದ ಫ್ರಂಟ್ ಆರ್ಮರ್, ಅಲಾಯ್ ವೀಲ್ ಮತ್ತು ಹೊಸತಾದ ಕಿತ್ತಳೆ (Nouveau Orange) ಬಣ್ಣವು ಪ್ರಮುಖ ಆಖರ್ಷಣೆಯಾಗಲಿದೆ.

ಒಳಮೈ
ಕಾರಿನ ಒಳಮೈನಲ್ಲೂ ವಿಶೇಷ ಕಿತ್ತಳೆ ಬಣ್ಣವನ್ನು ಹಚ್ಚಲಾಗಿದೆ. ಡೋರ್ ಹ್ಯಾಂಡಲ್ ನಲ್ಲಿ ಕ್ರೋಮ್ ಸ್ಪರ್ಶತೆ, ಫ್ಯಾಬ್ರಿಕ್ ಹೋದಿಕೆ, ಗೇರ್ ಶಿಫ್ಟ್ ನಲ್ಲಿ ಕಿತ್ತಳೆ ಸ್ಟಿಚ್ ಮಾರ್ಕ್, ಎಸಿ ವೆಂಟ್ಸ್, ಲೆಥರ್ ಸ್ಟೀರಿಂಗ್ ವೀಲ್, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಕಿತ್ತಳೆ ವರ್ಣಮಯವಾಗಲಿದೆ.

ವೆರಿಯಂಟ್, ಬೆಲೆ (ಎಕ್ಸ್ ಶೋ ರೂಂ ದೆಹಲಿ)
ನೂತನ ಡಸ್ಟರ್ ಎಕ್ಸ್ ಪ್ಲೋರ್ ಎರಡು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ.
- ಡಸ್ಟರ್ 85 ಪಿಎಸ್ ಆರ್‌ಎಕ್ಸ್‌ಎಲ್ ಎಕ್ಲಪ್ಲೋರ್: 9.99 ಲಕ್ಷ ರು.
- ಡಸ್ಟರ್ 110 ಪಿಎಸ್ ಆರ್‌ಎಕ್ಸ್‌ಎಲ್ ಎಕ್ಲಪ್ಲೋರ್: 11.10 ಲಕ್ಷ ರು.
- ಡಸ್ಟರ್ 85 ಪಿಎಸ್ ಆರ್‌ಎಕ್ಸ್‌ಎಲ್ ಎಕ್ಲಪ್ಲೋರ್: 19.64 kmpl
- ಡಸ್ಟರ್ 110 ಪಿಎಸ್ ಆರ್‌ಎಕ್ಸ್‌ಎಲ್ ಎಕ್ಲಪ್ಲೋರ್: 19.87 kmpl

ಮೈಲೇಜ್

ಇನ್ನುಳಿದಂತೆ ಇಕೊ ಮೋಡ್, ಗೇರ್ ಶಿಫ್ಟ್ ಇಂಡಿಕೇಟರ್, ವೇಗ ನಿಯಂತ್ರಣದ ಜೊತೆಗೆ ಕ್ರೂಸರ್ ಮುಂತಾದ ವೈಶಿಷ್ಟ್ಯಗಳು ಹೊಸ ಡಸ್ಟರ್ ಸೀಮಿತ ಆವೃತ್ತಿಯಲ್ಲಿ ಲಭ್ಯವಾಗಲಿದೆ.


Click it and Unblock the Notifications








