ಇದು ರೆಹಮಾನ್ ಸ್ಪೆಷಲ್: 'ರೆ..ರೆ..ರೆ..ರಫ್ತಾರ್'

Written By:

ಆಸ್ಕರ್ ಪ್ರಶಸ್ತಿ ವಿಜೇತ ಭಾರತದ ಸಂಗೀತ ಶಿಲ್ಪಿ ಎ.ಆರ್. ರಹಮಾನ್ ಮಗದೊಮ್ಮೆ ಅತ್ಯುತ್ತಮ ಹಾಡಿನ ಸಂಯೋಜನೆಯಿಂದ ಮೋಡಿ ಮಾಡಿದ್ದಾರೆ. ಈ ಬಾರಿ ರೆಹಮಾನ್ ಸಂಗೀತದ ಮಧುರ ಸ್ಪರ್ಶ ಮಾಡಿರುವುದು ಚಿತ್ರಕ್ಕಲ್ಲ.

ಬದಲಾಗಿ ದೇಶದ ಜನಪ್ರಿಯ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ರೆನೊ ಇಂಡಿಯಾದ 'ಫ್ಯಾಶನ್ ಫಾರ್ ಲೈಫ್' ಥೀಮ್‌ಗೆ ರೆಹಮಾನ್ ಸಂಗೀತ ನೀಡಿದ್ದಾರೆ. ಇದು ಅಭಿಮಾನಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಸ್ವತ: ತಾವೇ ಹಾಡಿರುವ ರೆಹಮಾನ್ 'ರೆ..ರೆ..ರೆ..ರಫ್ತಾರ್' ಡೌನ್ ಲೋಡ್ ಮಾಡಿಕೊಳ್ಳಲು ಕೆಳಗಡೆ ಕೊಟ್ಟಿರುವ ಟ್ವಿಟರ್ ಲಿಂಕ್ ಕ್ಲಿಕ್ಕಿಸಿರಿ.

ನಿಮ್ಮ ಮಾಹಿತಿಗಾಗಿ, ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ಭಾರತದಲ್ಲಿ ಇತ್ತೀಚೆಗಷ್ಟೇ ರಣಬೀರ್ ಕಪೂರ್ ಅವರನ್ನು ಮುಖ್ಯ ಪ್ರಚಾರ ರಾಯಭಾರಿಯಾಗಿ ನೇಮಕಗೊಳಿಸಿತ್ತು. ಅಲ್ಲದೆ ನಿಧಾನವಾಗಿ ಭಾರತೀಯ ಗ್ರಾಹಕರ ಹತ್ತಿರವಾಗುತ್ತಿದೆ.

ರೆ..ರೆ..ರೆ..ರಫ್ತಾರ್ ಮೇಕಿಂಗ್ ವೀಡಿಯೋ ವೀಕ್ಷಿಸಿ

 

Read more on ರೆನೊ renault
English summary
Renault India & A.R. Rahman Develop Re Re Re Raftaar
Story first published: Friday, August 14, 2015, 13:58 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark