ರೆನೊ ಲೊಡ್ಜಿ ಸ್ಟೆಪ್ ವೇ ಪ್ರೀಮಿಯಂ ಮಾದರಿ ಬಿಡುಗಡೆ
ಫ್ರಾನ್ಸ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ರೆನೊ ತನ್ನ ಜನಪ್ರಿಯ ಲೊಡ್ಜಿ ಮಾದರಿಯ ಸ್ಟೆಪ್ ವೇ ವರ್ಷನ್ ಬಿಡುಗಡೆ ಮಾಡಿದೆ. ಇದರ ದೆಹಲಿ ಎಕ್ಸ್ ಶೋರೂಂ ಪ್ರಾರಂಭಿಕ ಬೆಲೆ 11.99 ಲಕ್ಷ ರು.ಗಳಾಗಿರಲಿದೆ.
ನಿಮ್ಮ ಮಾಹಿತಿಗಾಗಿ, ರೆನೊ ಲೊಡ್ಜಿ ಬಹು ಬಳಕೆಯ ವಾಹನವಾಗಿದ್ದು, ಕೆಲವು ಸಮಯಗಳ ಹಿಂದೆಯಷ್ಟೇ ಸಂಸ್ಥೆ ಪರಿಚಯಿಸಿತ್ತು. ಈಗ ಪರಿಚಯವಾಗಿರುವ ಸ್ಟೆಪ್ ವೇ ಮಾದರಿಯು ಹೆಚ್ಚಿನ ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.

ಒಟ್ಟು ಎರಡು ವೆರಿಯಂಟ್ ಗಳಲ್ಲಿ ರೆನೊ ಲೊಡ್ಜಿ ಸ್ಟೆಪ್ ವೇ ವರ್ಷನ್ ಲಭ್ಯವಾಗಲಿದೆ. ಅವುಗಳೆಂದರೆ ಆರ್ ಎಕ್ಸ್ ಝಡ್ (110 ಅಶ್ವಶಕ್ತಿ), 8 ಸೀಟು ಮತ್ತು ಆರ್ ಎಕ್ಸ್ ಝಡ್ (110 ಅಶ್ವಶಕ್ತಿ) ಏಳು ಸೀಟು.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಆರ್ ಎಕ್ಸ್ ಝಡ್ : 11.99 ಲಕ್ಷ ರು.
ಆರ್ ಎಕ್ಸ್ ಝಡ್ : 12.29 ಲಕ್ಷ ರು.

ನಿರ್ವಹಣೆ, ಇಂಧನ ಕ್ಷಮತೆ, ಅನುಕೂಲತೆ, ವೈಶಿಷ್ಟ್ಯ ಹಾಗೂ ಸೌಲಭ್ಯಗಳ ವಿಚಾರಗಳಲ್ಲಿ ಜನ ಮೆಚ್ಚುಗೆಗೆ ಪಾತ್ರವಾಗಿರುವ ರೆನೊ ಲೊಡ್ಜಿ ಹೊಸ ಮಾದರಿಗಳ ಮೂಲಕ ಇನ್ನು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಯಲ್ಲಿದೆ.

ವಿಶೇಷತೆ
ನೂತನ ಲೊಡ್ಜಿ ಸ್ಟೆಪ್ ವೇ ಮಾದರಿಯು ರತ್ನ ದಟ್ಟವಾದ ಫ್ರಂಟ್ ಗ್ರಿಲ್, ಕಪ್ಪು ಹಾಗೂ ಕ್ರೋಮ್ ರೂಫ್ ರೈಲ್, ಅಲಾಯ್ ವೀಲ್, ಸ್ಟೆಪ್ ವೇ ಬಂಪರ್, ಸ್ಕಿಡ್ ಪ್ಲೇಟ್, ಸ್ಕಫ್ ಪ್ಲೇಟ್, ಫಾಗ್ ಲ್ಯಾಂಪ್ ಮುಂತಾದ ಸೌಲಭ್ಯಗಳನ್ನು ಪಡೆಯಲಿದೆ.

ಇನ್ನು ಸುರಕ್ಷತೆಗೂ ಹೆಚ್ಚಿನ ಆದತ್ಯೆ ಕೊಡಲಾಗಿದ್ದು ಎಬಿಎಸ್, ಇಬಿಡಿ, ಬ್ರೇಕ್ ಅಸಿಸ್ಟ್, ರಿಯರ್ ಬ್ರೇಕ್ ಸೆನ್ಸಾರ್, ರಿಯರ್ ವ್ಯೂ ಮಿರರ್, ಮೀಡಿಯಾ ನೇವ್ ಮನರರಂಜನಾ ಮತ್ತು ನೇವಿಗೇಷನ್ ಸಿಸ್ಟಂ, ಕ್ರೂಸ್ ಕಂಟ್ರೋಲ್ ಮತ್ತು ವೇಗ ನಿಯಂತ್ರಕಗಳನ್ನು ಪಡೆಯಲಿದೆ.

ಎಂಜಿನ್ ತಾಂತ್ರಿಕತೆ
1461 ಸಿಸಿ
108 ಅಶ್ವಶಕ್ತಿ
245 ತಿರುಗುಬಲ,
ಕರ್ಬ್ ಭಾರ - 1365 ಕೀ.ಮೀ.
ಡಿಕ್ಕಿ ಜಾಗ - 207 ಲೀಟರ್
ಇಂಧನ ಟ್ಯಾಂಕ್ ಸಾಮರ್ಥ್ಯ - 50 ಲೀಟರ್


Click it and Unblock the Notifications