ಹೆಚ್ಚು ಕಾಯಬೇಡಿ, ಮುನ್ನುಗ್ಗಿ; ಬರುತ್ತಿದೆ ರೆನೊ 'ಕಯೂ' ಸಣ್ಣ ಕಾರು

By Nagaraja

ಇತ್ತೀಚೆಗಷ್ಟೇ ನಾವೊಂದು ಲೇಖನವೊಂದನ್ನು ಪ್ರಕಟಿಸಿದ್ದು, ರೆನೊ ಸಣ್ಣ ಕಾರು ಭಾರತದಲ್ಲಿ ಬಿಡುಗಡೆಯಾಗುವ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದೇವೆ. ಇದರ ಮುಂದುವರಿದ ಭಾಗವೆಂಬಂತೆ ಫ್ರಾನ್ಸ್ ಮೂಲದ ಈ ಜನಪ್ರಿಯ ಸಂಸ್ಥೆಯು ಟೀಸರ್ ವೀಡಿಯೋವೊಂದನ್ನು ಬಿಡುಗಡೆ ಮಾಡಿದೆ.

ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸಣ್ಣ ವಿಭಾಗಕ್ಕೆ ಕಾಲಿರಿಸಲು ನಿರ್ಧರಿಸಿರುವ ರೆನೊ ಸಂಸ್ಧೆ ಸಂಪೂರ್ಣ ನೂತನ ರೆನೊ 'ಕಯೂ' (kayou) ಮಾದರಿಯನ್ನು 2015 ಮೇ 20ರಂದು ಅನಾವರಣಗೊಳಿಸಲಿದೆ. ಈ ಮೂಲಕ ಇತ್ತೀಚೆಗಷ್ಟೇ ರೆನೊ ಲೊಡ್ಜಿ ಎಂಪಿವಿ ಕಾರನ್ನು ಪರಿಚಯಿಸಿರುವ ರೆನೊ ದೇಶದಲ್ಲಿ ತನ್ನ ಸಾನಿಧ್ಯವನ್ನು ಮತ್ತಷ್ಟು ಬಲಪಡಿಸಲಿದೆ.

ರೆನೊ ಸಣ್ಣ ಕಾರು ದಶಕಗಳಿಂದಲೂ ದೇಶದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ ಮಾರುತಿ ಸುಜುಕಿ ಆಲ್ಟೊ ಮಾದರಿಗೆ ನೇರ ಪ್ರತಿಸ್ಪರ್ಧಿಯಾಗಿರಲಿದೆ. ಇದು ಸಿಎಂಎಫ್-ಎ ತಳಹದಿಯಲ್ಲಿ ನಿರ್ಮಾಣವಾಗಲಿದೆ.

renault kayou

ಬಲ್ಲ ಮೂಲಗಳ ಪ್ರಕಾರ 800ಸಿಸಿ ಎಂಜಿನ್ ಪಡೆಯಲಿರುವ ರೆನೊ ಕಯೂ ಮೂರು ಲಕ್ಷ ರು.ಗಳ ಬೆಲೆ ಪರಿಧಿಯನ್ನು ಹೊಂದಿರಲಿದೆ. ಇದು 50 ಅಶ್ವಶಕ್ತಿ ಜೊತೆಗೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.

ರೋಚಕ ವೀಡಿಯೋ ವೀಕ್ಷಿಸಿ


More from DriveSpark

Article Published On: Saturday, May 16, 2015, 9:29 [IST]
English summary
Renault recently launched its Lodgy MPV in India, which marked the beginning of a new era for the manufacturer. They now plan to enter new segments in India with all-new products.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+