ರೆನೊ ಏಳು ಸೀಟುಗಳ ಎಸ್‌ಯುವಿ ಭಾರತಕ್ಕೆ
ಇತ್ತೀಚೆಗಷ್ಟೇ ಕ್ವಿಡ್ ಯಶಸ್ವಿ ಮಾದರಿಯನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿರುವ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ಮಗದೊಂದು ಆಕರ್ಷಕ ಕಾರನ್ನು ದೇಶದಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.
Also Read: ರೆನೊ ಕ್ವಿಡ್ ಕೊಳ್ತೀರಾ? ಸಮಗ್ರ ಚಾಲನಾ ವಿಮರ್ಶೆಯನ್ನು ಓದಲು ಕ್ಲಿಕ್ಕಿಸಿ
ಬಲ್ಲ ಮೂಲಗಳ ಪ್ರಕಾರ ರೆನೊ ಏಳು ಸೀಟುಗಳ ಕ್ರೀಡಾ ಬಳಕೆಯ ವಾಹನವು (ಎಸ್‌ಯುವಿ) ಭಾರತದಲ್ಲಿ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಭಾರತ ಸೇರಿದಂತೆ ಬೆಳೆದು ಬರುತ್ತಿರುವ ಅನೇಕ ಮಾರುಕಟ್ಟೆಗಳನ್ನು ಇದು ಗುರಿ ಮಾಡಲಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ರೆನೊ ಡಸ್ಟರ್ ಎಸ್‌ಯುವಿ ಭಾರತದಲ್ಲಿ ಅತಿ ಹೆಚ್ಚು ಯಶಸ್ಸನ್ನು ಕಂಡಿತ್ತು. ಇದಾದ ಬೆನ್ನಲ್ಲೇ ಮಗದೊಂದು ಆಕರ್ಷಕ ಕಾರಿನ ತಯಾರಿಯಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ.

'ರೆನೊ ಎಚ್‌ಎಚ್‌ಎ' ಎಂಬ ಕೋಡ್ ಪಡೆದುಕೊಂಡಿರುವ ಏಳು ಸೀಟುಗಳ ಎಸ್‌ಯುವಿ ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಅಲ್ಲದೆ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ವೆರಿಯಂಟ್ ಇರಲಿದೆ.

ರೆನೊ ಕಾಪ್ಚರ್ ಮಾದರಿಯಿಂದ ಪ್ರೇರಣೆ ಪಡೆದು ಇದನ್ನು ರಚಿಸಲಾಗುತ್ತಿದೆ. ಅಂತೆಯೇ ಸ್ವಲ್ಪ ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರುವ ನೂತನ ಎಸ್‌ಯುವಿ ಪ್ರಮುಖವಾಗಿಯೂ ಮಹೀಂದ್ರ ಎಕ್ಸ್‌ಯುವಿ500 ಮಾದರಿಗೆ ಪ್ರತಿಸ್ಪರ್ಧಿಯಾಗಲಿದೆ.

ಸ್ಪರ್ಧಾತ್ಮಕ ಬೆಲೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನೂತನ ಎಸ್‌ಯುವಿ ನಿರ್ಮಾಣವನ್ನು ಸ್ಥಳೀಯವಾಗಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಇದು ಡಸ್ಟರ್ ಹಾಗೂ ಕ್ವಿಡ್ ಯಶಸ್ಸಿನಲ್ಲೂ ಪ್ರಮುಖ ಪಾತ್ರ ವಹಿಸಿತ್ತು.

ಅಂದ ಹಾಗೆ 2017ರ ವೇಳೆಯಲ್ಲಿ ರೆನೊ ನೂತನ ಕಾರು ಭಾರತ ಪ್ರವೇಶ ಪಡೆಯುವ ಸಾಧ್ಯತೆಯಿದೆ.

ರೆನೊ ಕ್ವಿಡ್; ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರ ಮುಂದಕ್ಕೆ ಓದಿ


Click it and Unblock the Notifications








