ಜರ್ಮನಿ ಕಾರ್ಖಾನೆಯಲ್ಲಿ ಕೆಲಸಗಾರನನ್ನೇ ಕೊಂದು ಬಿಟ್ಟ ರೋಬೋಟ್

By Nagaraja

ಮಾನವರಲ್ಲಿ ದ್ವೇಷ, ಮತ್ಸರ, ಕರುಣೆ, ಪ್ರೀತಿ ಎಲ್ಲವೂ ಇರುತ್ತದೆ. ಇದು ಮನುಷ್ಯ ಸಹಜ ಗುಣ. ಆದರೆ ಅತ್ಯಂತ ವಿಷಾದನೀಯ ಘಟನೆಯೊಂದರಲ್ಲಿ ಜರ್ಮನಿಯ ಹೆಸರಾಂತ ಕಾರು ಸಂಸ್ಥೆ ಫೋಕ್ಸ್ ವ್ಯಾಗನ್ ಕಾರ್ಖಾನೆಯಲ್ಲಿ ಮಾನವ ನಿರ್ಮಿತ ರೋಬೋಟ್ ಅಲ್ಲಿನ ಕೆಲಸಗಾರನೊಬ್ಬನನ್ನು ಕೊಂದೇ ಬಿಟ್ಟಿದೆ.

ಜರ್ಮನಿಯ ಫ್ರಾಂಕ್ ಫರ್ಟ್ ನ 100 ಕೀ.ಮೀ.ಗಳಷ್ಟು ದೂರದಲ್ಲಿ ಸ್ಥಿತಗೊಂಡಿರುವ ಬೌನಾಟಾಲ್ ಕಾರ್ಖಾನೆಯಲ್ಲಿ ಈ ಆಶ್ಚರ್ಯಕರ ಘಟನೆ ನಡೆದಿದೆ.

ಕಾರು ಘಟಕ

ಪ್ರಸ್ತುತ ತನಿಖೆ ಪ್ರಗತಿಯಲ್ಲಿದ್ದು, ಪ್ರಾಥಮಿಕ ಅವಲೋಕನದಲ್ಲಿ ಮಾನವ ದೋಷ ಕಂಡುಬಂದಿದ್ದು, ರೋಬೋಟ್ ನಲ್ಲಿ ಯಾವುದೇ ತಾಂತ್ರಿಕ ತೊಂದರೆಗಳು ಇರಲಿಲ್ಲ ಎಂಬುದು ವರದಿಯಾಗಿದೆ.

ಆಧುನಿಕ ಜಗತ್ತಿನಲ್ಲಿ ಎಲ್ಲ ಮುಂದುವರಿದ ಸಂಸ್ಥೆಗಳು ಕಾರು ಜೋಡಣೆ ಕೆಲಸವನ್ನು ಸುಲಭವಾಗಿಸಲು ಇಂತಹ ಯಾಂತ್ರಿಕ ರೋಬೋಟ್ ಗಳ ಸಹಾಯವನ್ನು ಪಡೆದುಕೊಳ್ಳುತ್ತಿದೆ. ಎಲ್ಲ ಮುಂದುವರಿದ ಕಾರು ಸಂಸ್ಥೆಗಳು ಇಂತಹ ಮುಂದುವರಿದ ತಂತ್ರಜ್ಞಾನಗಳನ್ನು ಅಭಿವೃದ್ಧಿಗೊಳಿಸಿದೆ.

ಇವುಗಳ ನಿಕಟ ಕೋಣೆಗಳಿಗೆ ಕೆಲಸಗಾರರಿಗೆ ತೆರಳುವ ಅವಕಾಶವಿರುವುದಿಲ್ಲ. ಈದರೆ ಬಹು ರಾಷ್ಟ್ರೀಯ ಫೋಕ್ಸ್ ವ್ಯಾಗನ್ ನಿರ್ಮಾಣ ಘಟಕದಲ್ಲಿ ಸಂಭವಿಸಿರುವ ದುರಂತವು ಹೆಚ್ಚು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಕಾರ್ಖಾನೆಯ ಒಳಗಡೆ ಸೇಫ್ಟಿ ಕೇಜ್ ಬಳಿ ನಿಂತಿದ್ದ ಕೆಲಸಗಾರನ ದೇಹಕ್ಕೆ ರೋಬೋಟ್ ಬಲವಾಗಿ ಬಂದಪ್ಪಳಿಸಿತ್ತು ಎಂಬುದು ತಿಳಿದು ಬಂದಿದೆ. ಒಟ್ಟಿನಲ್ಲಿ ಇಂತಹ ಯಾಂತ್ರಿಕ ಉಪಕರಣದಿಂದಾಗಿ ನೌಕರನೊಬ್ಬ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವಂತಾಗಿದೆ.

More from DriveSpark

Article Published On: Thursday, July 2, 2015, 14:16 [IST]
English summary
Robot kills man at Volkswagen plant in Germany
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+