ಭಾರತದಲ್ಲಿ ಸ್ವಯಂಚಾಲಿತ ಕಾರುಗಳ ಜನಪ್ರಿಯತೆ ಜಾಸ್ತಿಯಂತೆ!

By Nagaraja

ಗೂಗಲ್ ಸೆಲ್ಪ್ ಡ್ರೈವಿಂಗ್ ಕಾರುಗಳ ಬಗ್ಗೆ ನೀವು ಕೇಳಿರಬಹುದು. ಸರ್ಚ್ ಎಂಜಿನ್ ದೈತ್ಯ ಗೂಗಲ್ ಈ ಸಂಬಂಧ ನಿರಂತರ ಅಧ್ಯಯನ ಹಾಗೂ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದು, ಪರೀಕ್ಷಾರ್ಥ ಹಂತದಲ್ಲಿದೆ.

Also Read: ನಂಬಿದ್ರೆ ನಂಬಿ ಚಾಲಕರಹಿತ ಕಾರು ಭಾರತಕ್ಕೆ

ಇತ್ತ ಭಾರತ ಹಾಗೂ ಚೀನಾಗಳಂತಹ ರಾಷ್ಟ್ರಗಳಲ್ಲಿ ಸ್ವಯಂಚಾಲಿತ ಕಾರುಗಳು ಅತಿ ಹೆಚ್ಚು ಜನಪ್ರಿಯತೆಯನ್ನು ಸಾಧಿಸುತ್ತಿದೆಯೆಂದು ಸಮೀಕ್ಷಾ ವರದಿಯೊಂದು ತಿಳಿಸಿದೆ. ಸಮೀಕ್ಷಾ ವರದಿ ಏನು ಹೇಳುತ್ತಿದೆ? ಚಿತ್ರಪುಟದಲ್ಲಿ ನೋಡೋಣ ಬನ್ನಿ.

ಭಾರತದಲ್ಲಿ ಸ್ವಯಂಚಾಲಿತ ಕಾರುಗಳ ಜನಪ್ರಿಯತೆ ಜಾಸ್ತಿಯಂತೆ!

ಸೆಲ್ಪ್ ಡ್ರೈವಿಂಗ್ ಕಾರು ಕನಸು ನನಸಾಗುವ ಕಾಲ ಇನ್ನೂ ಬಹಳ ದೂರವಿಲ್ಲ. ಅಂತೆಯೇ ಬೆಳೆದು ಬರುತ್ತಿರುವ ಭಾರತದಲ್ಲಿ ಶೇಕಡಾ 60ರಷ್ಟು ಗ್ರಾಹಕರು ಸೆಲ್ಪ್ ಡ್ರೈವಿಂಗ್ ವಾಹನಗಳಲ್ಲಿ (ಎಸ್‌ಡಿವಿ) ಸಂಚರಿಸಲು ಉತ್ಸುಕತೆ ವ್ಯಕ್ತಪಡಿಸಿದ್ದಾರೆ ಎಂದು ನೂತನ ಸರ್ವೇ ವರದಿಯೊಂದು ತಿಳಿಸುತ್ತದೆ.

ಭಾರತದಲ್ಲಿ ಸ್ವಯಂಚಾಲಿತ ಕಾರುಗಳ ಜನಪ್ರಿಯತೆ ಜಾಸ್ತಿಯಂತೆ!

ವಿಶ್ವದ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ನಡೆಸಿರುವ ಸಮೀಕ್ಷೆಯಂತೆ ಭಾರತ ಹಾಗೂ ಚೀನಾ ರಾಷ್ಟ್ರಗಳಲ್ಲಿ ಸ್ವಯಂಚಾಲಿತ ಕಾರುಗಳ ಜನಪ್ರಿಯತೆ ಹೆಚ್ಚುತ್ತಿದ್ದು, ಮುಂದಿನ 10 ವರ್ಷಗಳಲ್ಲಿ ಇದೊಂದು ಸಾಮಾನ್ಯ ವಿಷಯವಾಗಲಿದೆ ಎಂದಿದೆ.

ಭಾರತದಲ್ಲಿ ಸ್ವಯಂಚಾಲಿತ ಕಾರುಗಳ ಜನಪ್ರಿಯತೆ ಜಾಸ್ತಿಯಂತೆ!

10 ರಾಷ್ಟ್ರಗಳಲ್ಲಾಗಿ 5,500ರಷ್ಟು ಗ್ರಾಹಕರಿಂದ ಸಂಗ್ರಹಿಸಿದ ಅಭಿಪ್ರಾಯದ ಆಧಾರದಲ್ಲಿ ಅಮೆರಿಕ, ಬ್ರಿಟನ್, ಜಪಾನ್ ಹಾಗಾ ಜರ್ಮನಿ ರಾಷ್ಟ್ರಗಳಿಗೆ ಹೋಲಿಸಿದಾಗ ಬೆಳೆದು ಬರುತ್ತಿರುವ ಭಾರತದಂತಹ ರಾಷ್ಟ್ರಗಳಲ್ಲಿ ಹೆಚ್ಚು ಬೇಡಿಕೆ ಕಂಡುಬಂದಿದೆ ಎಂದು ತಿಳಿಸಿದೆ. ಇಲ್ಲಿ ಅಮೆರಿಕ ಹಾಗೂ ಬ್ರಿಟನ್‌ನಲ್ಲಿ ಶೇಕಡಾ 50ರಷ್ಟು ಉತ್ಸುಕತೆ ವ್ಯಕ್ತವಾಗಿದೆ.

ಭಾರತದಲ್ಲಿ ಸ್ವಯಂಚಾಲಿತ ಕಾರುಗಳ ಜನಪ್ರಿಯತೆ ಜಾಸ್ತಿಯಂತೆ!

ಅಂತೆಯೇ ದುಬೈ, ನ್ಯೂಯಾರ್ಕ್, ಸಿಂಗಾಪುರ, ಆರ್ಮ್‌ಸ್ಟರ್ ಡ್ಯಾಮ್ ಇತ್ಯಾದಿ ನಗರಗಳಲ್ಲೂ ಸೆಲ್ಪ್ ಡ್ರೈವಿಂಗ್ ವಾಹನಗಳ ನಿರೀಕ್ಷೆಯ ಬಗ್ಗೆಯೂ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಇಲ್ಲಿ ಎಲ್ಲ ನಗರಗಳಿಂತಲೂ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾರಿಗೆ ಸಮಸ್ಯೆ ನಿವಾರಿಸುವ ತಾಕತ್ತು ಸ್ವಯಂಚಾಲಿತ ಕಾರುಗಳಿಗಿವೆ ಎಂಬ ಕೂಗು ವ್ಯಕ್ತವಾಗಿದೆ.

ಭಾರತದಲ್ಲಿ ಸ್ವಯಂಚಾಲಿತ ಕಾರುಗಳ ಜನಪ್ರಿಯತೆ ಜಾಸ್ತಿಯಂತೆ!

ಹಾಗಿದ್ದರೂ ಬಹುತೇಕ ನಗರಗಳು ಇನ್ನಷ್ಟೇ ಸ್ವಯಂಚಾಲಿತ ಕಾರುಗಳ ವ್ಯವಸ್ಥೆಗೆ ಒಗ್ಗಬೇಕಾಗಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ಅಭಿವೃದ್ದಿಯೂ ಆಗಬೇಕಾಗಿದೆ ಎಂಬುದನ್ನು ಉಲ್ಲೇಖಿಸಿದೆ.

ಭಾರತದಲ್ಲಿ ಸ್ವಯಂಚಾಲಿತ ಕಾರುಗಳ ಜನಪ್ರಿಯತೆ ಜಾಸ್ತಿಯಂತೆ!

ಅಬ್ಬಬ್ಬಾ ಮಹೀಂದ್ರದಿಂದ ಚಾಲಕರಹಿತ ಕಾರು ಅಭಿವೃದ್ಧಿ!

More from DriveSpark

Article Published On: Thursday, November 26, 2015, 14:52 [IST]
English summary
Self Driving Cars getting more popularity in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+