ಭಾರತದ ಅತಿ ಕೆಟ್ಟ ಬಣ್ಣ ಸಂಯೋಜನೆಯ 7 ಕಾರುಗಳು

By Nagaraja

ಈ ಮೊದಲೇ ತಿಳಿಸಿರುವಂತೆಯೇ ಕಾರು ಖರೀದಿಯಲ್ಲಿ ಬಣ್ಣ ಅಥವಾ ವರ್ಣಗಳು ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೆ ಇನ್ನು ಕೆಲವು ಬಾರಿ ಫಲಿತಾಂಶ ತದ್ವಿರುದ್ಧವಾದಾಗ ಖರೀದಿಗಾರ ಅತ್ತ ತಲೆ ಎತ್ತಿಯೂ ನೋಡಲಾರನು [ದೇಶದ ಜನಪ್ರಿಯ ಕಾರುಗಳ ಮನಸೊರೆಗೊಳ್ಳುವ ಬಣ್ಣಗಳು].

ಹೇಗೆ ಕಾರಿನ ಎಂಜಿನ್, ನಿರ್ವಹಣೆ, ಹೊರಮೈ, ಒಳಮೈ, ಮೈಲೇಜ್ ಹಾಗೂ ಬೆಲೆಗಳು ನಿರ್ಣಾಯಕ ಪಾತ್ರ ವಹಿಸುತ್ತದೆಯೋ ಅದೇ ರೀತಿ ಬಣ್ಣಗಳು ಅಷ್ಟೇ ಪ್ರಾಮುಖ್ಯತೆಯನ್ನು ವಹಿಸುತ್ತದೆ. ಹೀಗೆ ಭಾರತೀಯ ಮಾರುಕಟ್ಟೆಯಲ್ಲಿ ವೈಫಲ್ಯವನ್ನು ಅನುಭವಿಸಿರುವ ಕೆಲವು ನಿರ್ದಿಷ್ಟ ಮಾದರಿಗಳು ಹಾಗೂ ಅವುಗಳ ಬಣ್ಣ ಸಂಯೋಜನೆಯ ಬಗ್ಗೆ ಇಲ್ಲಿ ಮಾಹಿತಿಯನ್ನು ಕೊಡುವ ಪ್ರಯತ್ನ ಮಾಡಲಿದ್ದೇವೆ. ನಿಮಗೆ ಈ ಲೇಖನ ಇಷ್ಟವಾದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಲು ಮರೆಯದಿರಿ.

ದಟ್ಸನ್ ಗೊ - ಆಕಾಶ ನೀಲಿ

ದಟ್ಸನ್ ಗೊ - ಆಕಾಶ ನೀಲಿ

ದಟ್ಸನ್ ಗೊ ಭಾರತಕ್ಕೆ ಪರಿಚಯವಾಗಿರುವ ಹೊಸ ಕಾರು ಬ್ರಾಂಡ್ ಆಗಿದೆ. ಜಪಾನ್ ಮೂಲದ ನಿಸ್ಸಾನ್‌ನ ಸಣ್ಣ ಕಾರು ಬ್ರಾಂಡ್ ಇದಾಗಿದೆ. ಆದರೆ ಯಾವುದೋ ಕಾರಣಕ್ಕಾಗಿ ದಟ್ಸನ್ ಗೊ ಕಾರಿಗೆ ಆಕಾಶ ನೀಲಿ ಬಣ್ಣ ಸರಿ ಹೊಂದಿಕೆಯಾಗುತ್ತಿಲ್ಲ ಅಲ್ಲವೇ?

ಮಹೀಂದ್ರ ಬೊಲೆರೊ - ಕಡು ಕೆಂಪು

ಮಹೀಂದ್ರ ಬೊಲೆರೊ - ಕಡು ಕೆಂಪು

ಮೊದಲ ನೋಟದಲ್ಲೇ ಇದನ್ನು ಯಾವುದೋ ಅಗ್ನಿ ಶಾಮಕ ಬಂಡಿ ಬರುತ್ತಿದೆ ಎಂದು ತಪ್ಪಾಗಿ ಅರ್ಥೈಸದಿರಿ. ಏನೋ ಹೊಸತನವನ್ನು ಪ್ರಯತ್ನಿಸಲು ಹೋಗಿರುವ ಮಹೀಂದ್ರಗೆ ಆಗಿರುವ ಎಡವಟ್ಟಿದು.

ಟಾಟಾ ನ್ಯಾನೋ - ಗುಲಾಬಿ ಬಣ್ಣ

ಟಾಟಾ ನ್ಯಾನೋ - ಗುಲಾಬಿ ಬಣ್ಣ

ಟಾಟಾ ಜೆನ್ ಎಕ್ಸ್ ನ್ಯಾನೋ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಪ್ರೇಮಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಸಲುವಾಗಿ ರೋಮ್ಯಾಂಟಿಕ್ ಬಣ್ಣದ ಆಯ್ಕೆಯನ್ನು ಇದಕ್ಕೆ ನೀಡಲಾಗಿದೆ. ಆದರೆ ಬಂದಿರುವ ಫಲಿತಾಂಶ ಮಾತ್ರ ಬೇಸರ ತರಿಸುತ್ತಿದೆ.

ನಿಸ್ಸಾನ್ ಇವಾಲಿಯಾ - ಹಸಿರು

ನಿಸ್ಸಾನ್ ಇವಾಲಿಯಾ - ಹಸಿರು

ಸಾಧಾರಣವಾಗಿ ಹಸಿರು ಬಣ್ಣಗಳು ಎಲ್ಲ ಕಾರುಗಳಿಗೆ ಹೊಂದಿಕೆಯಾಗುವುದಿಲ್ಲ. ಇದನ್ನೇ ನೀವಿಲ್ಲಿ ನಿಸ್ಸಾನ್ ಇವಾಲಿಯಾ ಉಪಯುಕ್ತ ವಾಹನದಲ್ಲೂ ಕಾಣಬಹುದಾಗಿದೆ.

ಮಹೀಂದ್ರ ಎಕ್ಸ್‌ಯುವಿ500 - ಕೇಸರಿ

ಮಹೀಂದ್ರ ಎಕ್ಸ್‌ಯುವಿ500 - ಕೇಸರಿ

ಚಿರತೆಯಿಂದ ಸ್ಪೂರ್ತಿ ಪಡೆದು ರಚನೆಯಾಗಿರುವ ಕೇಸರಿ ಬಣ್ಣದ ಮಹೀಂದ್ರ ಎಕ್ಸ್‌ಯುವಿ500 ಅತ್ಯುತ್ತಮ ನೋಟವನ್ನು ಹೊಂದಿದ್ದರೂ ಕೇಸರಿ ಬಣ್ಣವು ಸ್ವಲ್ಪ ಹಿನ್ನೆಡೆಯನ್ನುಂಟು ಮಾಡಿದೆ.

 ಮಾರುತಿ ಸುಜುಕಿ ಡಿಜೈಲ್ - ತೆಳು ನೀಲಿ

ಮಾರುತಿ ಸುಜುಕಿ ಡಿಜೈಲ್ - ತೆಳು ನೀಲಿ

ತೆಳು ನೀಲಿ ಬಣ್ಣದ ಸಂಯೋಜನೆಯಾಗಿರುವ ಮಾರುತಿ ಸುಜುಕಿ ಡಿಜೈರ್ ಅತಿ ಕೆಟ್ಟ ಬಣ್ಣದ ಕಾರಿಗೆ ಮಗದೊಂದು ಉದಾಹರಣೆಯಾಗಿದೆ.

ಫೋರ್ಸ್ ಗುರ್ಖಾ - ಡ್ರ್ಯಾಗನ್ ಗ್ರೀನ್

ಫೋರ್ಸ್ ಗುರ್ಖಾ - ಡ್ರ್ಯಾಗನ್ ಗ್ರೀನ್

ಡ್ರ್ಯಾಗನ್ ಗ್ರೀನ್ ಎಂಬ ಬಣ್ಣದೊಂದಿಗೆ ಎಂಟ್ರಿ ಕೊಟ್ಟಿರುವ ಫೋರ್ಸ್ ಗುರ್ಖಾ ಸಹ ನಿರೀಕ್ಷಿತ ಮಾರಾಟವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಸಂಸ್ಥೆಯ ಮಾರಾಟ ಕುಸಿತದ ಹಿಂದೆ ಬಣ್ಣವೂ ಪಾತ್ರ ವಹಿಸಿದೆ ಅಂದರೆ ತಪ್ಪಾಗಲಾರದು.

ಭಾರತದ ಅತಿ ಕೆಟ್ಟ ಬಣ್ಣ ಸಂಯೋಜನೆಯ 7 ಕಾರುಗಳು

ನಿಮ್ಮ ಬಳಿಯೂ ಅತಿ ಕೆಟ್ಟ ಬಣ್ಣ ಸಂಯೋಜನೆಯ ಕಾರುಗಳ ಪಟ್ಟಿಯಿದೆಯೇ? ಹಾಗಿದ್ದರೆ ಇನ್ಯಾಕೆ ತಡ ಈಗಲೇ ಕೆಳಗೆ ಕೊಟ್ಟಿರುವ ಕಾಮೆಂಟ್ಸ್ ಬಾಕ್ಸ್ ನಲ್ಲಿ ಉಲ್ಲೇಖಿರಿಸಿರಿ.

More from DriveSpark

Article Published On: Wednesday, June 3, 2015, 9:57 [IST]
English summary
In our list of 7 Indian cars with the worst colours money can buy, we take a look at cars that look like aliens with skin pigmentation disorders to Dragon Green SUVs!
Read more on ಕಾರು cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+