ಶೆಲ್ ಅತ್ಯುತ್ತಮ ಸಾಮರ್ಥ್ಯದ ಪೆಟ್ರೋಲ್ 'ಶೆಲ್ ವಿ-ಪವರ್' ಬಿಡುಗಡೆ
ಶೆಲ್ ಇಂಡಿಯಾ ತನ್ನ ಪ್ರೀಮಿಯಂ ಫರ್ಮಾಮೆನ್ಸ್ ಪೆಟ್ರೋಲ್ 'ಶೆಲ್ ವಿ-ಪವರ್' ಬಿಡುಗಡೆಯನ್ನು ಘೋಷಿಸಿದೆ. ಭಾರತದ ಎಲ್ಲ ಪ್ರಮುಖ ಶೆಲ್ ಮಳಿಗೆಗಳಲ್ಲಿ ಈ ಉತ್ಪನ್ನ ಲಭ್ಯವಿದೆ. ಫೆರಾರಿಗಾಗಿ ಶೆಲ್‍ನ ತಾಂತ್ರಿಕ ಸಂಶೋಧನೆಯಿಂದ ಸ್ಪೂರ್ತಿ ಪಡೆದ ಶೆಲ್ ವಿ-ಪವರ್ ಪೆಟ್ರೋಲ್, ಭಿನ್ನವಾದ ಡಬ್ಬಲ್ ಆ್ಯಕ್ಷನ್ ಸಮ್ಮಿಶ್ರಣದೊಂದಿಗೆ ವಿನ್ಯಾಸಗೊಂಡಿದ್ದು, ಸಕ್ರಿಯವಾಗಿ ಎಂಜಿನ್‍ನ್ನು ಸ್ವಚ್ಛಗೊಳಿಸುತ್ತದೆ ಮತ್ತು ಎಂಜಿನ್‍ನ ಭಾಗಗಳನ್ನು ರಕ್ಷಿಸುತ್ತದೆ. ಜೊತೆಗೆ ಹೆಚ್ಚು ದಕ್ಷತೆ ತೋರಿಸಲು ಸಹಕಾರಿಯಾಗಿದೆ. ಶೆಲ್ ವಿ ಪವರ್ ಪ್ರಸ್ತುತ ಬೆಂಗಳೂರು, ಮೈಸೂರು, ಚೆನ್ನೈ, ಅಹಮದಾಬಾದ್, ರಾಜ್‍ಕೋಟ್, ಬರೋಡ, ಸೂರತ್ ಮತ್ತು ಪುಣೆಯ ಶೆಲ್ ಮಳಿಗೆಗಳಲ್ಲಿ ಲಭ್ಯವಿದೆ.
ಈ ಕುರಿತು ಪ್ರತಿಕ್ರಿಯಿಸಿದ ಶೆಲ್ ರೀಟೇಲ್ ಇಂಡಿಯಾ ಸಾಮಾನ್ಯ ವ್ಯವಸ್ಥಾಪಕ ರವಿ ಸುಂದರ್‍ರಾಜನ್, ಜಾಗತಿಕವಾಗಿ ಜನಪ್ರಿಯವಾಗಿರುವ ಮತ್ತು ಯಶಸ್ವಿಯಾಗಿರುವ ಇಂಧನ ತೈಲ ಶೆಲ್ ವಿ ಪವರನ್ನು ಭಾರತಕ್ಕೆ ತರಲು ಸಂತಸವಾಗುತ್ತಿದೆ. ಈಗಾಗಲೇ 67 ರಾಷ್ಟ್ರಗಳಲ್ಲಿ ಈ ತೈಲ ಅಸ್ತಿತ್ವದಲ್ಲಿದೆ. ಶೆಲ್ ವಿ ಪವರ್ ನ ಮುಂಚೂಣಿ ತಂತ್ರಜ್ಞಾನ ಸಾಮರ್ಥ್ಯವನ್ನು ಸೇರಿಸುವ ಮೂಲಕ ಎಂಜಿನ್‍ನ ದಕ್ಷತೆ ಚುರುಕುಗೊಳಿಸುವ ನಿಟ್ಟಿನಲ್ಲಿ ವಿನ್ಯಾಸಗೊಂಡಿದೆ. ಶೆಲ್‍ನಲ್ಲಿ ನಾವು ಎಲ್ಲ ಇಂಧನಗಳು ಒಂದೇ ಅಲ್ಲ ಎಂದು ನಂಬಿದ್ದೇವೆ. ಹಾಗಾಗಿಯೇ ನಮ್ಮ ಗ್ರಾಹಕರಿಗೆ ಮತ್ತು ಅವರ ವಾಹನಗಳಿಗೆ ಅತ್ಯುತ್ತಮ ಇಂಧನ ನೀಡಲು ಶ್ರಮಿಸುತ್ತೇವೆ. ನಮ್ಮ ಗ್ರಾಹಕರು ಶೆಲ್‍ನಲ್ಲಿ ಇಂಧನದ ಗುಣಮಟ್ಟವನ್ನು ಶ್ಲಾಘಿಸಿದ್ದಾರೆ. ವಿ-ಪವರ್ ಈಗಿನ ಶೆಲ್ ಸೂಪರ್ ಬ್ರಾಂಡ್‍ಗೆ ಬದಲಾವಣೆ ಎಂದರು.

ಶೆಲ್ ಯೋಜನೆಗಳು ಮತ್ತು ತಂತ್ರಜ್ಞಾನದಲ್ಲಿ ಹಿರಿಯ ಇಂಧನ ವಿಜ್ಞಾನಿ ಮಾಯಿ ಆಸ್ಕನ್ ಮಾತನಾಡಿ, ಶೆಲ್ ವಿ ಪವರ್ ಪ್ರಯೋಗಾಲಯ ಮತ್ತು ಟ್ರ್ಯಾಕ್ ಎರಡೂ ಕಡೆ ಸಾಕಷ್ಟು ಪರೀಕ್ಷೆಗೊಳಪಟ್ಟ ನಂತರ ಮಾರುಕಟ್ಟೆಗೆ ಬಂದಿದೆ. ಫೆರಾರಿಯೊಂದಿಗೆ ಶೆಲ್ ತಾಂತ್ರಿಕ ಪಾಲುದಾರಿಕೆ ನಮಗೆ ಶೆಲ್ ವಿ-ಪವರನ್ನು ಅತ್ಯಂತ ಸಂಕೀರ್ಣ ಸನ್ನಿವೇಶಗಳಲ್ಲಿ ಪರೀಕ್ಷಿಸುವ ಅವಕಾಶ ನೀಡಿದೆ. ದಕ್ಷತೆ ಮತ್ತು ಸಾಮರ್ಥ್ಯ ಉತ್ತಮಗೊಳಿಸಲು ಏನು ನೀಡಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡಿದೆ ಎಂದರು.
ಶೆಲ್ ಇಂಧನ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಶತಮಾನಕ್ಕೂ ಅಧಿಕ ಅನುಭವ ಹೊಂದಿದ್ದು, 120 ಇಂಧನ ವಿಜ್ಞಾನಿಗಳು ಮತ್ತು ವಿಶೇಷ ತಜ್ಞರೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.
ಫೆರಾರಿಯೊಂದಿಗಿನ ಶೆಲ್ ತಾಂತ್ರಿಕ ಪಾಲುದಾರಿಕೆಯಲ್ಲಿ ಶೆಲ್ ವಿ ಪವರ್ ಇಂಧನ ಅತ್ಯುತ್ತಮ ಗುಣಮಟ್ಟವನ್ನು ತಲುಪಿದೆ. 2013ರ ಸ್ಕೌಂಡ್ರಿಯಾದ ಫೆರಾರಿ ಎಫ್‍ಐಎ ಫಾರ್ಮುಲ್ ಒನ್ ಚಾಂಪಿಯನ್‍ಶಿಪ್‍ನಲ್ಲಿ ಶೆಲ್ ವಿ ಪವರ್ ರೇಸ್‍ನಲ್ಲಿ ಬಳಸಿದ ಇಂಧನ ಶೇ. 99ರಷ್ಟು ಅಂಶಗಳನ್ನು ಶೆಲ್ ವಿ ಪವರ್ ಹೊಂದಿದೆ. ಶೆಲ್ ವಿ ಪವರ್ ಇಂಧನ ಫೆರಾರಿ ದಕ್ಷತೆಯೊಂದಿಗಿನ 60 ವರ್ಷದ ಸಂಶೋಧನೆ ಫಲ. ಶೆಲ್ ಈ ಸಂಶೋಧನೆಗಾಗಿ ಸುಮಾರು 21,000 ಗಂಟೆಗಳನ್ನು ತೆಗೆದುಕೊಂಡಿದೆ.


Click it and Unblock the Notifications








