ನೌಕಾಪಡೆಗೆ ಮತ್ತೊಂದು ಬಲ- ದೇಶಿ ನಿರ್ಮಿತ ಐಎನ್ಎಸ್ ಕಲ್ವರಿ ಲೋಕಾರ್ಪಣೆ

ದೇಶದ ಮೊದಲ ಸ್ವದೇಶಿ ನಿರ್ಮಿತ ಸ್ಕಾರ್ಪಿನ್ ಶ್ರೇಣಿಯ ಜಲಾಂತರ್ಗಾಮಿ ನೌಕೆಯಾದ ಐಎನ್ಎಸ್ ಕಲ್ವರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಾರ್ಪಣೆಗೊಳಿಸಿದ್ದು, ಈ ಮೂಲಕ ದೇಶದ ನೌಕಾದಳದ ಶಕ್ತಿಗೆ ಮತ್ತೊಂದು ಬಲ ಬಂದಂತಾಗಿದೆ.

By Praveen

ದಕ್ಷಿಣ ಚೀನಾ ಸಮುದ್ರದಲ್ಲಿ ಆಧಿಪತ್ಯ ಸ್ಥಾಪಿಸಲು ಹವಣಿಸುತ್ತಿರುವ ಚೀನಾ ಸೇನೆಯು ಹಿಂದು ಮಹಾಸಾಗರದಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದ್ದು, ಈ ಹೊತ್ತಿನಲ್ಲೇ ಐಎನ್ಎಸ್ ಕಲ್ವರಿ ದೇಶ ಸೇವೆಗೆ ಲೋಕಾರ್ಪಣೆಗೊಂಡಿರುವುದು ಶತ್ರುಗಳ ರಾಷ್ಟ್ರಗಳಿಗೆ ನಡುಕು ಹುಟ್ಟಿಸುವಂತೆ ಮಾಡಿರುವುದು ಸುಳ್ಳಲ್ಲ.

ನೌಕಾಪಡೆಗೆ ಮತ್ತೊಂದು ಬಲ- ದೇಶಿ ನಿರ್ಮಿತ ಐಎನ್ಎಸ್ ಕಲ್ವರಿ ಲೋಕಾರ್ಪಣೆ

ಹೀಗಾಗಿ ಮುಂಬೈನಲ್ಲಿ ನಡೆದ ಐಎನ್ಎಸ್ ಕಲ್ವರಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾವುಕರಾಗಿ ಮಾತನಾಡಿದ ಪ್ರಧಾನಿ ಮೋದಿಯವರು "ಸಾಗರಕ್ಕೆ ನಾನು ಬೇರೆಯದೇ ಅರ್ಥ ನೀಡುತ್ತೇನೆ. S.A.G.A.R. ಅಂದರೆ ಅದು security and growth for all in the region(ಎಲ್ಲರಿಗೂ ಭದ್ರತೆ ಮತ್ತು ಅಭಿವೃದ್ಧಿ ಕಲ್ಪಿಸುವುದು)" ಎಂಬರ್ಥದಲ್ಲಿ ಪ್ರಧಾನಿ ಮೋದಿ ಮಾರ್ಮಿಕವಾಗಿ ಮಾತನಾಡಿದ್ದಾರೆ.

ನೌಕಾಪಡೆಗೆ ಮತ್ತೊಂದು ಬಲ- ದೇಶಿ ನಿರ್ಮಿತ ಐಎನ್ಎಸ್ ಕಲ್ವರಿ ಲೋಕಾರ್ಪಣೆ

ಇನ್ನು ಐಎನ್ಎಸ್ ಕಲ್ವರಿ ಲೋಕಾರ್ಪಣೆ ಕಾರ್ಯಕ್ರಮಲ್ಲಿ ಉಪಸ್ಥಿತರಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, 'ಸಾಗರದ ಮೂಲಕ ಭಯೋತ್ಪಾದನೆ, ಕಡಲ್ಗಳ್ಳತನ ಮತ್ತು ಕಳ್ಳಸಾಗಣೆ, ಅಕ್ರಮ ಮೀನುಗಾರಿಕೆ ನಿರ್ಮೂಲನೆಗೆ ಐಎನ್ಎಸ್ ಕಲ್ವರಿ ಸಹಾಯವಾಗಲಿದೆ ಎಂದಿದ್ದಾರೆ.

Recommended Video

Bangalore City Police Use A Road Roller To Crush Loud Exhausts
ನೌಕಾಪಡೆಗೆ ಮತ್ತೊಂದು ಬಲ- ದೇಶಿ ನಿರ್ಮಿತ ಐಎನ್ಎಸ್ ಕಲ್ವರಿ ಲೋಕಾರ್ಪಣೆ

ಇನ್ನು ಐಎನ್ಎಸ್ ಕಲ್ವರಿ ಜಲಾಂತರ್ಗಾಮಿ ನೌಕೆಯನ್ನು ಫ್ರೆಂಚ್ ನಾವೆಲ್ ಡಿಫೆನ್ಸ್ ಆಂಡ್ ಎನರ್ಜಿ ಕಂಪನಿ ಡಿಸಿಎನ್ಎಸ್ ವಿನ್ಯಾಸಗೊಳಿಸಿದ್ದು, ಮಝಗೋನ್ ಡಾಕ್ ಲಿಮಿಟೆಡ್ ನಿರ್ಮಾಣ ಮಾಡಿರುವುದು ಮತ್ತೊಂದು ವಿಶೇಷ.

ನೌಕಾಪಡೆಗೆ ಮತ್ತೊಂದು ಬಲ- ದೇಶಿ ನಿರ್ಮಿತ ಐಎನ್ಎಸ್ ಕಲ್ವರಿ ಲೋಕಾರ್ಪಣೆ

ಐಎನ್ಎಸ್ ಕಲ್ವರಿ ವಿಶೇಷತೆ ಏನು?

ಸ್ಕಾರ್ಪೀನ್ ಸರಣಿಯ ಜಲಾಂತರ್ಗಾಮಿಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಇವು ಹಡಗು ನಿರೋಧಕ ಕ್ಷಿಪಣಿಗಳು, ಹೆಚ್ಚು ಸಾಮರ್ಥ್ಯದ ಟಾರ್ಪೆಡೊಗಳು ಮತ್ತು ಅತ್ಯಾಧುನಿಕ ಸಂವೇದಕಗಳನ್ನು ಹೊಂದಿರುತ್ತವೆ.

ನೌಕಾಪಡೆಗೆ ಮತ್ತೊಂದು ಬಲ- ದೇಶಿ ನಿರ್ಮಿತ ಐಎನ್ಎಸ್ ಕಲ್ವರಿ ಲೋಕಾರ್ಪಣೆ

ಈ ಪೈಕಿ 4 ಸಾಂಪ್ರದಾಯಿಕ ಹಾಗೂ ಉಳಿದೆರಡು ಏರ್ ಇಂಡಿಪೆಂಡೆಂಟ್ ಪ್ರೊಪಲ್ಯೂಷನ್ (ಎಐಪಿ) ವ್ಯವಸ್ಥೆಯನ್ನು ಹೊಂದಿದ್ದು, ದೀರ್ಘ ಕಾಲದ ವರೆಗೆ ನೀಡಿನಡಿಯಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುತ್ತದೆ.

ನೌಕಾಪಡೆಗೆ ಮತ್ತೊಂದು ಬಲ- ದೇಶಿ ನಿರ್ಮಿತ ಐಎನ್ಎಸ್ ಕಲ್ವರಿ ಲೋಕಾರ್ಪಣೆ

ಆದ್ರೆ ಕೆಲ ಮೂಲಗಳ ಪ್ರಕಾರ ದೇಶಕ್ಕೆ 24-30ರಷ್ಟು ಜಲಾಂತರ್ಗಾಮಿಯ ಅವಶ್ಯಕತೆಯಿದ್ದು, ಆದರೆ ಸದ್ಯ 14ರಷ್ಟು ಮಾತ್ರ ಸೇವೆಯಲ್ಲಿದೆ. ಇನ್ನೊಂದೆಡೆ ನೆರೆಯ ಚೀನಾದಲ್ಲಿ 68 ಹಾಗೂ ಪಾಕಿಸ್ತಾನದಲ್ಲಿ ಐದು ಸಬ್ ಮೆರಿನ್ ಗಳನ್ನು ಹೊಂದಿದೆ. ಅಲ್ಲದೆ ಸದ್ಯದಲ್ಲೇ ಪಾಕಿಸ್ತಾನವು ಆರು ಸಬ್ ಮೆರಿನ್ ಗಳನ್ನು ಚೀನಾದಿಂದ ಖರೀದಿಸಲು ಮುಂದಾಗಿದೆ.

ನೌಕಾಪಡೆಗೆ ಮತ್ತೊಂದು ಬಲ- ದೇಶಿ ನಿರ್ಮಿತ ಐಎನ್ಎಸ್ ಕಲ್ವರಿ ಲೋಕಾರ್ಪಣೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ನೌಕಾಪಡೆಗೆ ಈ ಸಬ್ ಮೆರಿನ್ ಸೇರಿರುವುದು ಭಾರತೀಯ ಭದ್ರತಾ ಕ್ಷೇತ್ರದ ಮೈಲಿಗಲ್ಲು ಎನ್ನಿಸಿದೆ. ಭಾರತದಲ್ಲಿ ಈಗ ಕೇವಲ 15 ಸಬ್ ಮೆರಿನ್ ಗಳಷ್ಟೇ ಇದ್ದು, ಚೀನಾ ಬಳಿ ಭಾರತಕ್ಕಿಂತ ನಾಲ್ಕು ಪಟ್ಟು ಹೆಚ್ಚು ಸಬ್ ಮೆರಿನ್ ಗಳಿವೆ. 2020 ರ ಹೊತ್ತಿಗೆ 5 ಹೆಚ್ಚುವರಿ ಸಬ್ ಮೆರಿನ್ ಗಳನ್ನು ನೌಕಾಪಡೆಗೆ ಅರ್ಪಿಸಲು ಯೋಜನೆ ಹಾಕಲಾಗಿದೆ.

Most Read Articles

Kannada
English summary
Read in Kannada about PM Modi dedicates India’s first indigenous Scorpene-class submarine INS Kalvari to nation.
Story first published: Thursday, December 14, 2017, 11:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X