ಅದೃಷ್ಟ ಅಂದ್ರೆ ಇದೇನಾ? ಶ್ವಾನಗಳಿಗೆ ವಿಶೇಷ ಕಾರು ಆಕ್ಸೆಸರಿಗಳು
ಅದೃಷ್ಟ ಅಂದ್ರೇ ಇದೇನಪ್ಪಾ? ಚೆಕ್ ಗಣರಾಜ್ಯದ ಮುಂಚೂಣಿಯ ಸಂಸ್ಥೆಯಾಗಿರುವ ಸ್ಕೋಡಾ, ಶ್ವಾನಗಳಿಗಾಗಿ ವಿಶೇಷ ಕಾರು ಆಕ್ಸೆಸರಿಗಳನ್ನು ಬಿಡುಗಡೆ ಮಾಡಿದೆ. ಆಸಕ್ತ ಸ್ಕೋಡಾ ಕಾರು ಮಾಲಿಕರು ಇದರ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ.
ಕಾರುಗಳಲ್ಲಿ ತಮ್ಮ ಶ್ವಾನಗಳನ್ನು ಕೂರಿಸಿಕೊಂಡು ಮೋಜಿನ ಸವಾರಿ ಹೋಗುವುದು ಈಗ ಹವ್ಯಾಸವಾಗಿ ಬಿಟ್ಟಿದೆ. ಇದು ಶ್ರೀಮಂತ ಜೀವನ ಶೈಲಿಯ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಇದನ್ನೇ ಗುರಿಯಾಗಿರಿಸಿಕೊಂಡಿರುವ ಸ್ಕೋಡಾ ಸಂಸ್ಥೆಯು ವಿಶೇಷ ಆಕ್ಸೆಸರಿಗಳನ್ನು ಒದಗಿಸುತ್ತಿದೆ.

ಇದರೊಂದಿಗೆ ನಿಮ್ಮ ಹಾಲಿಡೇಸ್ ಪಯಣವು ಮತ್ತಷ್ಟು ಮಧುರಮಯವಾಗಲಿದೆ. ಇವುಗಳಲ್ಲಿ ಬ್ಯಾಕ್ ಸೀಟ್ ಪ್ರೊಟೆಕ್ಷನ್, ಟ್ರಂಕ್ ಗ್ರಿಲ್ ಇತ್ಯಾದಿ ಆಕ್ಸೆಸರಿಗಳು ಒಳಗೊಂಡಿರಲಿದೆ.

ಬ್ಯಾಕ್ ಸೀಟ್ ಪ್ರೊಟೆಕ್ಷನ್ ಸುಲಭವಾಗಿ ಕಾರಿನ ಹಿಂಭಾಗದ ಸೀಟುಗಳಿಗೆ ಜೋಡಣೆ ಮಾಡಬಹುದಾಗಿದೆ. ಇದರಿಂದಾಗಿ ಕಾರಿನ ಸೀಟುಗಳಲ್ಲಿ ಕೊಳಕುಟಾಂಗುವುದನ್ನು ತಡೆಯಬಹುದಾಗಿದೆ. ಇನ್ನೊಂದೆಡೆ ಟ್ರಂಕ್ ಗ್ರಿಲ್ ಗಳು ನಾಯಿಗಳ ಸುರಕ್ಷಿತ ಪಯಣಕ್ಕೆ ಸಹಕಾರಿಯಾಗಲಿದೆ. ಒಟ್ಟಾರೆಯಾಗಿ ಶ್ವಾನಗಳ ಅದೃಷ್ಟ ಖುಲಾಯಿಸಿದೆ ಅನ್ನಬಹುದೇನೋ ಅಲ್ಲವೇ?


Click it and Unblock the Notifications