ಸ್ಕೋಡಾ ಸೂಪರ್ಬ್ ಲೌರಿನ್, ಕ್ಲೆಮೆಂಟ್ ಭಾರತದಲ್ಲಿ ಪರೀಕ್ಷೆ
ಎಲ್ಲ ಹೊಸತನದ ಸ್ಕೋಡಾ ಸೂಪರ್ಬ್ 2016ನೇ ಸಾಲಿನಲ್ಲಿ ಬಿಡುಗಡೆಯಾಗಲಿದೆ. ಇಲ್ಲಿಗೆ ಸ್ಕೋಡಾ ಓಟವು ನಿಲುಗಡೆಯಾಗುವುದಿಲ್ಲ. ಭಾರತ ಮಾರುಕಟ್ಟೆಯಲ್ಲಿ ಹೊಸ ಹೊಸ ಪ್ರೀಮಿಯಂ ಗುಣಮಟ್ಟದ ಕಾರುಗಳನ್ನು ಪರಿಚಯಿಸುವುದು ಈ ಜೆಕ್ ಗಣರಾಜ್ಯದ ಸಂಸ್ಥೆಯ ಇರಾದೆಯಾಗಿದೆ.
ಇದರಂತೆ ನೂತನ ಸೂಪರ್ಬ್ ಲೌರಿನ್ ಹಾಗೂ ಕ್ಲೆಮೆಂಟ್ ಮಾದರಿಗಳ ಟೆಸ್ಟಿಂಗ್ ಆರಂಭಿಸಿದೆ. ಇದು ಅಂತರಾಷ್ಟ್ರೀಯ ಮಾರಾಟದಲ್ಲಿರುವ ಸೂಪರ್ಬ್ ವಿಶೇಷ ಆವೃತ್ತಿಗಳಾಗಿವೆ.

ಇದಕ್ಕೂ ಮೊದಲು 2015 ಜಿನೆವಾ ಮೋಟಾರು ಶೋದಲ್ಲಿ ಲೌರಿನ್ ಮತ್ತು ಕ್ಲೆಮೆಂಟ್ ಮಾದರಿಗಳು ಪ್ರದರ್ಶನ ಕಂಡಿದ್ದವು. ಪ್ರಸ್ತುತ ಈ ವಿಶೇಷ ಆವೃತ್ತಿಗಳನ್ನು ಭಾರತದಲ್ಲೂ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.
ಅನೇಕ ಹೊಸ ವೈಶಿಷ್ಟ್ಯಗಳನ್ನು ಗ್ರಾಹಕರು ನಿರೀಕ್ಷೆ ಮಾಡಬಹುದಾಗಿದೆ. ಮೂರು ವಿಧಗಳ ಕ್ಲೈಮೇಟ್ ಕಂಟ್ರೋಲ್, ಲೆಥರ್ ಸೀಟು, ಕ್ಯಾಂಟನ್ (CANTON) ಮಾಹಿತಿ ಮನರಂಜನಾ ವ್ಯವಸ್ಥೆ ಮುಂತಾದ ಸೌಲಭ್ಯಗಳಿರಲಿದೆ.

ಇನ್ನು ಸ್ಕೋಡಾ ಸೂಪರ್ಬ್ ಲೌರಿನ್ ಮತ್ತು ಕ್ಲೆಮೆಂಟ್ ಮಾದರಿಗಳು 2.0 ಲೀಟರ್ ಟಿಡಿಐ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ಡಿಎಸ್‌ಜಿ ಗೇರ್ ಬಾಕ್ಸ್ ಇರಲಿದೆ.


Click it and Unblock the Notifications