ಸ್ಟೈಲಾಗಿ ಸ್ಕೋಡಾ ಯೆಟಿ ಸ್ಟೈಲ್ ವೆರಿಯಂಟ್ ಬಿಡುಗಡೆ

Written By:

ಜೆಕ್ ಗಣರಾಜ್ಯದ ವಾಹನ ತಯಾರಿಕ ಸಂಸ್ಥೆಯಾಗಿರುವ ಸ್ಕೋಡಾ, ತನ್ನ ಜನಪ್ರಿಯ ಯೆಟಿ ಮಾದರಿಯ ಎರಡು ಹೊಸ ವೆರಿಯಂಟ್ ಗಳನ್ನು ಬಿಡುಗಡೆ ಮಾಡಿದೆ. ನೂತನ ಎರಡು ಮಾದರಿಗಳು ಯೆಟಿ ಸ್ಟೈಲ್ ಎಂದು ಗುರುತಿಸಿಕೊಳ್ಳಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ಸ್ಕೋಡಾ ಯೆಟಿ ಸ್ಟೈಲ್ 4x2: 20.27 ಲಕ್ಷ ರು.
  • ಸ್ಕೋಡಾ ಯೆಟಿ ಸ್ಟೈಲ್ 4x4: 21.97 ಲಕ್ಷ ರು.
ಸ್ಕೋಡಾ ಯೆಟಿ ಸ್ಟೈಲ್

ಇದಕ್ಕೂ ಮೊದಲು ಎಲೆಗನ್ಸ್ ಬ್ಯಾಡ್ಜ್ ನಿಂದ ಗುರುತಿಸಿಕೊಂಡಿದ್ದ ಸ್ಕೋಡಾ ಉತ್ಪನ್ನಗಳನ್ನು ಹೊಸತಾದ ಸ್ಟೈಲ್ ವೆರಿಯಂಟ್ ಬದಲಾಯಿಸಿಕೊಳ್ಳಲಿದೆ. ನೂತನ ಕಾರು ಫ್ರಂಟ್ ವೀಲ್ ಹಾಗೂ ಆಲ್ ವೀಲ್ ಡ್ರೈವ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಹಾಗಿದ್ದರೂ ಎಂಜಿನ್ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದರ 2.0 ಲೀಟರ್ ಟಿಡಿಐ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಡೈರಕ್ಟ್ ಇಂಜೆಕ್ಷನ್ ವ್ಯವಸ್ಥೆಯನ್ನು ಪಡೆಯಲಿದೆ. ಇದರ ಫ್ರಂಟ್ ವೀಲ್ ಹಾಗೂ ಆಲ್ ವೀಲ್ ಚಾಲವಾ ವ್ಯವಸ್ಥೆಗಳು ಅನುಕ್ರಮವಾಗಿ 108.62 ಹಾಗೂ 138.12 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ ಇವೆರಡು ಅನುಕ್ರಮವಾಗಿ ಫೈವ್ ಸ್ಪೀಡ್ ಹಾಗೂ ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.

ಇನ್ನು ಸುರಕ್ಷತೆಯ ಬಗ್ಗೆ ಮಾತನಾಡುವುದಾದ್ದಲ್ಲಿ ಆರು ಏರ್ ಬ್ಯಾಗ್, ಎಲೆಕ್ಟ್ರಾನಿಕ್ ಡಿಫೆರನ್ಸಿಯಲ್ ಲಾಕ್, ಆ್ಯಂಟಿ ಸ್ಲಿಪ್ ರೆಗ್ಯುಲೇಷನ್, ಪಾರ್ಕ್ ಟ್ರಾನಿಕ್, ಆಫ್ ರೋಡ್ ಅಸಿಸ್ಟಂಟ್ ಜೊತೆ ಹಿಲ್ ಡಿಸೆಂಟ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಟೈರ್ ಪ್ರೆಶರ್ ಮಾನಿಟರಿಂಗ್ ಮತ್ತು ಇನ್ನಿತರ ಹಲವಾರು ವೈಶಿಷ್ಟ್ಯಗಳನ್ನು ಪಡೆಯಲಿದೆ.

Read more on ಸ್ಕೋಡಾ skoda
English summary
Skoda Yeti Style Variants Launched In Two Options For India
Story first published: Friday, December 11, 2015, 9:55 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark