ದೀಪಾವಳಿ ಧಮಾಕಾ; ಸ್ಪೆಷಲ್ ಎಡಿಷನ್ ಬಿಡುಗಡೆಯ ಸುರಿಮಳೆ
ಬೆಳಕಿನ ಹಬ್ಬ ದೀಪಾವಳಿಯ ಈ ಸುಸಂದರ್ಭದಲ್ಲಿ ಅನೇಕ ಜನಪ್ರಿಯ ವಾಹನ ಸಂಸ್ಥೆಗಳು ವಿಶೇಷ ಆವೃತ್ತಿಗಳ ಸುರಿಮಳೆಗೈದಿದೆ. ಅಲ್ಲದೆ ತಮ್ಮ ನೆಚ್ಚಿನ ಮಾದರಿಗಳಿಗೆ ಗರಿಷ್ಠ ಆಫರ್ ಗಳನ್ನು ಮುಂದಿಟ್ಟಿದೆ.
Also Read: ದೀಪಾವಳಿ ಆಫರ್; ಯಾವ ಯಾವ ಕಾರುಗಳಿಗೆ ಎಷ್ಟೆಷ್ಟು ಡಿಸ್ಕೌಂಟ್?
ಈ ಹಬ್ಬದ ವೇಳೆಯಲ್ಲಿ ಹೊಸ ಕಾರು ಹುಡುಕುತ್ತಿರುವವರಿಗೆ ಇದು ಸರಿಯಾದ ಸಮಯವಾಗಿರಲಿದೆ. ಹೀಗೆ ದೀಪಾವಳಿ ವೇಳೆಯಲ್ಲಿ ಬಿಡುಗಡೆಯಾಗಿರುವ ಕೆಲವು ವಿಶೇಷ ಆವೃತ್ತಿಗಳ ಪಟ್ಟಿನಲ್ಲಿ ನಾವಿಲ್ಲಿ ಕೊಡಲಿದ್ದೇವೆ. ಇದು ನಿಮಗೆ ನೆರವಾಗುವ ಭರವಸೆ ನಮ್ಮದ್ದು.

ಹ್ಯುಂಡೈ ಐ20 ಸೆಲೆಬ್ರೇಷನ್ ಎಡಿಷನ್
ಸ್ಪೋರ್ಟ್ಸ್ಜ್ ವೆರಿಯಂಟ್ ತಳಹದಿಯಲ್ಲಿ ಬಿಡುಗಡೆ ಮಾಡಿರುವ ಹ್ಯುಂಡೈ ಐ20 ಸೆಲೆಬ್ರೇಷನ್ ಎಡಿಷನ್ 16 ಇಂಚುಗಳ ಅಲಾಯ್ ವೀಲ್, ಬ್ಲ್ಯಾಕ್ ರೂಫ್, ಸ್ಪೋರ್ಟ್ಸ್ ಪೆಡಲ್, ಬಾಡಿ ಡಿಕಾಲ್ಸ್, ವಿಂಡೋ ಫ್ರೇಮ್ ಹಾಗೂ ಸ್ಟ್ಯಾಂಡರ್ಡ್ ಬಿಳಿ ಬಣ್ಣದೊಂದಿಗೆ ಲಭ್ಯವಾಗಲಿದೆ. ಅಲ್ಲದೆ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್ ಇರಲಿದೆ.
ಸಮಗ್ರ ವಿವರ ಪಡೆಯಿರಿ

ಫೋಕ್ಸ್ ವ್ಯಾಗನ್ ಫೋಕ್ಸ್ ಫೆಸ್ಟ್
ಇಂದೊಂದು ಸೀಮಿತ ಆವೃತ್ತಿ ಅಲ್ಲದಿದ್ದರೂ ಈ ಹಬ್ಬದ ಆವೃತ್ತಿಯಲ್ಲಿ ಫೋಕ್ಸ್ ವ್ಯಾಗನ್ ಫೋಕ್ಸ್ ಫೆಸ್ಟ್ ಎಂಬ ಕೊಡುಗೆಯನ್ನು ಗ್ರಾಹಕರ ಮುಂದಿಟ್ಟಿದೆ. ಈ ಮೂಲಕ ಜನಪ್ರಿಯ ವೆಂಟೊ ಹಾಗೂ ಪೊಲೊ ಮಾದರಿಗಳಿಗೆ ವಿಶೇಷ ನಗದು ಆಫರ್ ಗಳನ್ನು ನೀಡುತ್ತಿದೆ. ಇದರಲ್ಲಿ ಏಳು ಇಂಚುಗಳ ಟಚ್ ಸ್ಕೀನ್ ಮತ್ತು ನೇವಿಗೇಷನ್ ಸಿಸ್ಟಂ ಇರಲಿದೆ.
ಸಮಗ್ರ ವಿವರ ಪಡೆಯಿರಿ
ಟೊಯೊಟಾ ಎಟಿಯೋಸ್ ಲಿವಾ ಲಿಮಿಟೆಡ್ ಎಡಿಷನ್
ಟೊಯೊಟಾ ಎಟಿಯೋಸ್ ಲಿವಾ ಸೀಮಿತ ಆವೃತ್ತಿಯು ಹೊರಗಡೆ ಡ್ಯುಯಲ್ ಟೋನ್ ಬಣ್ಣದ ಆಯ್ಕೆ, ಕಪ್ಪು ವರ್ಣದ ರೂಫ್, ಸ್ಪಾಯ್ಲರ್, 15 ಇಂಚುಗಳ ಅಲಾಯ್ ವೀಲ್, ಹೊಸತಾದ ಫ್ಯಾಬ್ರಿಕ್ ಸೀಟು, ಆಡಿಯೋ ಸಿಸ್ಟಂ ಜೊತೆ ಬ್ಯೂಟೂತ್ ಕನೆಕ್ಟಿವಿಟಿ, ಮರದ ಸ್ಪರ್ಶತೆ ಹಾಗೂ ಡ್ಯಾಶ್ ಬೋರ್ಡ್ ಮುಂತಾದ ಸೌಲಭ್ಯಗಳು ಲಭ್ಯವಾಗಲಿದೆ. ಇದು ಕೂಡಾ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್ ಗಳಲ್ಲಿ ಸಿಗಲಿದೆ.
ಸಮಗ್ರ ವಿವರ ಪಡೆಯಿರಿ
ಫಿಯೆಟ್ ಪುಂಟೊ ಇವೊ ಸ್ಪೋರ್ಟಿವೊ
ಫಿಯೆಟ್ ಆಕ್ಟಿವ್ ವೆರಿಯಂಟ್ ತಳಹದಿಯಲ್ಲಿ ನಿರ್ಮಾಣವಾಗಿರುವ ಫಿಯೆಟ್ ಪುಂಟೊ ಇವೊ ಸ್ಪೋರ್ಟಿವೊ ಹ್ಯಾಚ್ ಬ್ಯಾಕ್ ಕಾರು ಹೊಸ ಗ್ರಾಫಿಕ್ಸ್, ಹೊರಗಡೆಯ ರಿಯರ್ ವ್ಯೂ ಮಿರರ್ ನಲ್ಲಿ ಕ್ರೋಮ್ ಸ್ಪರ್ಶತೆ, ಶ್ವೇತ ವರ್ಣದ ರೂಫ್, 6.5 ಇಂಚುಗಳ ಟಚ್ ಸ್ಕೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಮುಂತಾದ ಸೌಲಭ್ಯಗಳು ಲಭ್ಯವಾಗಲಿದೆ.
ಸಮಗ್ರ ವಿವರ ಪಡೆಯಿರಿ
ಮಾರುತಿ ಸುಜುಕಿ ಸ್ವಿಫ್ಟ್ ಗ್ಲೋರಿ ಎಡಿಷನ್
ಮಾರುತಿ ಜನಪ್ರಿಯ ಸ್ವಿಫ್ಟ್ ಗ್ಲೋರಿ ಎಡಿಷನ್ ಕಾರಿನಲ್ಲಿ ರಿಯರ್ ಸ್ಪಾಯ್ಲಾರ್, ಕಪ್ಪು ವರ್ಣದ ಸಿ ಪಿಲ್ಲರ್, ದೇಹ ವರ್ಣದ ಗ್ರಾಫಿಕ್ಸ್, ರೆಡ್ ರೂಫ್ ಅಂತೆಯೇ ಕಾರಿನೊಳಗೆ ವಿಶೇಷ ಡ್ಯುಯಲ್ ಟೋನ್ ಕೆಂಪು ಹಾಗೂ ಕಪ್ಪು ಹೋದಿಕೆ, ಹೊಸ ಸ್ಟೀರಿಂಗ್ ವೀಲ್ ಕವರ್, ರಿಯರ್ ವ್ಯೂ ಕ್ಯಾಮರಾ, ಬ್ಲೂಟೂತ್ ಕನೆಕ್ಟಿವಿಟ್ ಇರಲಿದೆ. ಅದೇ ರೀತಿ ಎಬಿಎಸ್ ಹಾಗೂ ಇಬಿಡಿ ಸೌಲಭ್ಯಗಳು ದೊರಕಲಿದೆ.

ಮಾರುತಿ ಆಲ್ಟೊ ಕೆ10 ಅರ್ಬನೊ
ರೆನೊ ಕ್ವಿಡ್ ಬಿಡುಗಡೆಯಾದ ಬೆನ್ನಲ್ಲೇ ಮಾರುತಿ ಆಲ್ಟೊ ಕೆ10 ಅರ್ಬನೊ ಎಡಿಷನ್ ಬಿಡುಗಡೆಯಾಗಿತ್ತು. ಇದು ಹ್ಯಾಂಡ್ಸ್ ಫ್ರಿ ಬ್ಲೂಟೂತ್ ಕಿಟ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಲೆಥರ್ ಸೀಟು ಕವರ್, ತಾಪಮಾನ ಪರದೆ ಮತ್ತು ಬಾಡಿ ಗ್ರಾಫಿಕ್ಸ್ ಗಳನ್ನು ಪಡೆಯಲಿದೆ.
ಸಮಗ್ರ ವಿವರ ಪಡೆಯಿರಿ

ಟಾಟಾ ಸೆಲೆಬ್ರೇಷನ್ ಎಡಿಷನ್
ಟಾಟಾ ಸಂಸ್ಥೆಯು ತನ್ನ ಜನಪ್ರಿಯ ಜೆನ್ ಎಕ್ಸ್, ಜೆಸ್ಟ್, ಬೋಲ್ಟ್ ಮತ್ತು ಸಫಾರಿ ಮಾದರಿಗಳಲ್ಲಿ ವಿಶೇಷ ಸಂಭ್ರಮದ ಆವೃತ್ತಿಯನ್ನು ನೀಡುತ್ತಿದೆ. ಇವೆಲ್ಲವೂ ನವೆಂಬರ್ 15ರಿಂದ ದೇಶದ್ಯಾಂತ ಸ್ಥಿತಗೊಂಡಿರುವ ಟಾಟಾ ಡೀಲರ್ ಶಿಪ್ ಗಳಲ್ಲಿ ಲಭ್ಯವಾಗಲಿದೆ.
ಸಮಗ್ರ ವಿವರ ಪಡೆಯಿರಿ
ಸ್ಕೋಡಾ ರಾಪಿಡ್
ಜೆಕ್ ಗಣರಾಜ್ಯದ ವಾಹನ ಸಂಸ್ಥೆಯಾಗಿರುವ ಸ್ಕೋಡಾ ಸಹ ರಾಪಿಡ್ ವಾರ್ಷಿಕ ಆವೃತ್ತಿಯನ್ನು ತನ್ನ ನೆಚ್ಚಿನ ಗ್ರಾಹಕರಿಗಾಗಿ ಒದಗಿಸುತ್ತಿದೆ. ಇದು ಕಾರಿನೊಳಗೆ ಮರದ ಸ್ಪರ್ಶತೆ ಅಂತೆಯೇ ಟಾಂಪ್ ಎಂಡ್ ಎಲೆಗಂಟ್ ಪ್ಲಸ್ ಮಾದರಿಯಲ್ಲಿ ಟ್ರ್ಯಾಕ್ ಪ್ರೊ ಸೌಲಭ್ಯವೂ ದೊರಕಲಿದೆ. ಟ್ರ್ಯಾಕ್ ಪ್ರೊ ಮುಖಾಂತರ ಎಎಂಎಸ್ ಮುಖಾಂತರ ವಾಹನವನ್ನು ಟ್ರ್ಯಾಕ್ ಮಾಡಬಹುದಾಗಿದೆ.
ಸಮಗ್ರ ವಿವರ ಪಡೆಯಿರಿ
ರೆನೊ ಡಸ್ಟರ್ ಎಕ್ಸ್ ಪ್ಲೋರ್
ಕಪ್ಪು ವರ್ಣದ ಫ್ರಂಟ್ ಗ್ರಿಲ್, ಸ್ಪೋಕ್ಡ್ ಹೆಡ್ ಲ್ಯಾಂಪ್, ಹೆಚ್ಚುವರಿ ಲೈಟ್, ಬಾಡಿ ಡಿಕಾಲ್ಸ್, ಹೊಸ ಅಲಾಯ್ ವೀಲ್ ಹಾಗೂ ಡ್ಯುಯಲ್ ಟೋನ್ ಸೀಟುಗಳು ಪ್ರಮುಖ ಆಕರ್ಷಣೆಯಾಗಲಿದೆ.
ಸಮಗ್ರ ವಿವರ ಪಡೆಯಿರಿ
ಹೋಂಡಾ
ಮೊಬಿಲಿಯೊ ಹಾಗೂ ಅಮೇಜ್ ವಿಶೇಷ ಆವೃತ್ತಿಗಳು ಈ ದೀಪಾವಳಿಗೆ ಹೋಂಡಾ ಕೊಡುಗೆಯಾಗಿದೆ. ಇದರಲ್ಲಿ ಹೊಸ ಹೋದಿಗೆ, ಟಫೆಟಾ ವೈಟ್ ಮತ್ತು ಓರ್ಕಿಡ್ ವೈಟ್ ಪಿಯರ್ಲ್ ವೈಟ್ ಬಣ್ಣಗಳು ಲಭ್ಯವಾಗಲಿದೆ.
ಸಮಗ್ರ ವಿವರ ಪಡೆಯಿರಿ
ಸ್ಕೋಡಾ ಒಕ್ಟಾವಿಯಾ ಸ್ಟೈಲ್ ಪ್ಲಸ್ ಎಡಿಷನ್
ಹಿಂದುಗಡೆ ಕರ್ಟೈನ್ ಏರ್ ಬ್ಯಾಗ್, ಪುಶ್ ಬಟನ್ ಸ್ಟ್ಯಾರ್ಟ್, ಕೀಲೆಸ್ ಎಂಟ್ರಿ, ಡಿಎಸ್‌ಜಿ ಗೇರ್ ಬಾಕ್ಸ್ ನಲ್ಲಿ ರಿವರ್ಸಿಂಗ್ ಕ್ಯಾಮೆರಾ ಪೆಡಲ್ ಶಿಫ್ಟರ್ ಮುಂತಾದ ಆಯ್ಕೆಗಳು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್ ನೊಂದಿಗೆ ಲಭ್ಯವಾಗಲಿದೆ.
ಸಮಗ್ರ ವಿವರ ಪಡೆಯಿರಿ

Click it and Unblock the Notifications








