ಮಹೀಂದ್ರ ಟಿಯುವಿ300; ಸ್ಟೀರಿಂಗ್ ವೀಲ್ ಹೇಂಗಿದೆ ನೋಡಿ!
ಮುಂಬರುವ ಸೆಪ್ಟೆಂಬರ್ 01ರಂದು ಭರ್ಜರಿ ಬಿಡುಗಡೆ ಕಾಣಲಿರುವ ಮಹೀಂದ್ರ ಮಿನಿ ಕ್ರೀಡಾ ಬಳಕೆಯ ವಾಹನವು (ಎಸ್‌ಯುವಿ) ವಾಹನ ಪ್ರೇಮಿಗಳಲ್ಲಿ ಬಹಳ ಕುತೂಹಲವನ್ನುಂಟು ಮಾಡಿದೆ.
ವಾಹನ ಉತ್ಸುಕರ ಬೇಡಿಕೆಯಂತೆ ಮೊದಲು ಅಲಾಯ್ ವೀಲ್ ಚಿತ್ರವನ್ನು ಬಿಡುಗಡೆಗೊಳಿಸಿದ್ದ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯೀಗ ಈಗ ಕ್ರೀಡಾತ್ಮಕ ವಿನ್ಯಾಸದ ಸ್ಟೀರಿಂಗ್ ವೀಲ್ ಚಿತ್ರವನ್ನು ಅಪ್ ಲೋಡ್ ಮಾಡಿದೆ.

ಮಹೀಂದ್ರ ಟಿಯುವಿ300 ಸರಳ ಹಾಗೂ ಸುಲಭವಾಗಿ ಕಾರ್ಯ ನಿರ್ವಹಿಸಬಹುದಾದ ಕ್ರೀಡಾತ್ಮಕ ಸ್ಟೀರಿಂಗ್ ವೀಲ್ ಪಡೆದುಕೊಂಡಿದೆ. ಇದರ ಮಧ್ಯಭಾಗದಲ್ಲಿ ಮಹೀಂದ್ರ ಲಾಂಛನವು ಎದ್ದು ಕಾಣಿಸಲಿದೆ.
ಇದೇ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾದ ಆಕರ್ಷಕ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ಗಮನಕ್ಕೆ ಬರುತ್ತದೆ. ಅಲ್ಲದೆ ಸ್ಟೀರಿಂಗ್ ನಲ್ಲೇ ಸ್ವಿಚ್ ನಿಯಂತ್ರಣವನ್ನು ಕೊಡಲಾಗಿದೆ.
ಒಟ್ಟಿನಲ್ಲಿ ಯುದ್ಧ ಟ್ಯಾಂಕರ್ ನಿಂದ ಸ್ಪೂರ್ತಿ ಪಡೆದಿರುವ ಹೊಸ ಮಹೀಂದ್ರ ಟಿಯುವಿ300 ಒಳಮೈ ಕುತೂಹಲವನ್ನು ಕಾಯ್ದುಕೊಳ್ಳುವಲ್ಲಿ ಮಹೀಂದ್ರ ಯಶ ಕಂಡಿದೆ.


Click it and Unblock the Notifications








