ಮಹೀಂದ್ರ ಮಾಲಿಕತ್ವದ ಸ್ಯಾಂಗ್ಯೊಂಗ್ ಟಿವೊಲಿ ಎಸ್‌ಯುವಿ ಭಾರತಕ್ಕೆ
ದಕ್ಷಿಣ ಕೊರಿಯಾದ ಐಕಾನಿಕ್ ಕಾರು ಸಂಸ್ಥೆ ಸ್ಯಾಂಗ್ಯೊಂಗ್ ಮಾಲಿಕತ್ವವನ್ನು ಹೊಂದಿರುವ ದೇಶದ ಮುಂಚೂಣಿಯ ವಾಹನ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ, ಮುಂದಿನ ವರ್ಷಾರಂಭದಲ್ಲಿ ಟಿವೊಲಿ ಕ್ರೀಡಾ ಬಳಕೆಯ ವಾಹನವನ್ನು ಭಾರತಕ್ಕೆ ಪರಿಚಯಿಸಲಿದೆ.
ಇದಕ್ಕೂ ಮೊದಲು ಬ್ರಿಟನ್ ಪ್ರವೇಶ ಪಡೆದಿರುವ ಟಿವೊಲಿ ಎಸ್‌ಯುವಿಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾರತದಲ್ಲೂ ಮೋಡಿ ಮಾಡುವ ನಿರೀಕ್ಷೆ ಹೊಂದಿದೆ. ಇದು ದೇಶದಲ್ಲಿ ಮಹೀಂದ್ರ ಸಂಸ್ಥೆಗೆ ಹೊಸ ಆಯಾಮವನ್ನು ನೀಡಲಿದೆ.

ಇದುವರೆಗೆ ಲಭ್ಯವಾಗಿರುವ ಮಾಹಿತಿಗಳ ಪ್ರಾಕರ 2016 ಆಟೋ ಎಕ್ಸ್ ಪೋದಲ್ಲಿ ಸ್ಯಾಂಗ್ಯೊಂಗ್ ಕ್ರೀಡಾ ಬಳಕೆಯ ವಾಹನವು ಭಾರತ ಪ್ರವೇಶ ಪಡೆಯಲಿದೆ. ಇದು ಈಗಿರುವ ಮಹೀಂದ್ರ ಎಕ್ಸ್‌ಯುವಿ500 ಗಿಂತಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ.

ಅಂದರೆ ಸ್ಯಾಂಗ್ಯೊಂಗ್ ಟಿವೊಲಿ ಒಂದು ಪರಿಪೂರ್ಣ ಪ್ರೀಮಿಯಂ ಎಸ್‌ಯುವಿ ಎಂಬುದರಲ್ಲಿ ಸಂಶಯವೇ ಇಲ್ಲ. ಈಗಿನ ಬೆಳವಣಿಗೆ ನೋಡಿದಾಗ ಎಸ್‌ಯುವಿಗಳಂತಹ ಉಪಯುಕ್ತ ವಾಹನಗಳ ವಿಭಾಗಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ.

ಟಿವೊಲಿ ಕಾರಿನಲ್ಲಿ ಆಳವಡಿಸಲಾಗುವ ನೂತನ 1.6 ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಅಭಿವೃದ್ಧಿಗಾಗಿ ಮಹೀಂದ್ರವು ತನ್ನ ಸಹಾಯವನ್ನು ಮಾಡಿದೆ. ಅಂತರಾಷ್ಟ್ರೀಯವಾಗಿ ಸ್ಯಾಂಗ್ಯೊಂಗ್ ಎಸ್ ಯುವಿಗಳು ಟು ವೀಲ್ ಹಾಗೂ ಫೋರ್ ವೀಲ್ ಚಾಲನಾ ಅನುಭವ ವ್ಯವಸ್ಥೆಗಳಲ್ಲಿ ಲಭ್ಯವಿರುತ್ತದೆ.

ಭಾರತಕ್ಕೆ ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಸಿದ್ಧಾಂತದ ಮುಖಾಂತರ ಟಿವೊಲಿ ಪ್ರವೇಶ ಪಡೆಯಲಿದೆ. ಜೊತೆಗೆ ದೇಶದಲ್ಲಿ ಸ್ಯಾಂಗ್ಯೊಂಗ್ ಬ್ರಾಂಡ್ ಮುಂದುವರಿದಿತೇ ಎಂಬುದರಲ್ಲಿ ಟಿವೊಲಿ ಬ್ರ್ಯಾಂಡ್ ಯಶಸ್ಸು ನಿರ್ಣಾಯಕವೆನಿಸಲಿದೆ.

ಒಟ್ಟಿನಲ್ಲಿ ಸ್ಯಾಂಗ್ಯೊಂಗ್ ಟಿವೊಲಿ ಆಗಮನ ವಾರ್ತೆಯಿಂದ ದೇಶದ ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ನಿರೀಕ್ಷೆ ಹುಟ್ಟಿಕೊಂಡಿದೆ.


Click it and Unblock the Notifications








