ಚಿಕಾಗೊದಲ್ಲಿ ನೀವು ನೋಡಲೇ ಬೇಕಾಗಿರುವ ಎಸ್‌ಯುವಿಗಳು
ಆಧುನಿಕ ಜಗತ್ತಿನಲ್ಲಿ ಕ್ರೀಡಾ ಬಳಕೆಯ ವಾಹನಗಳಿಗೆ (ಎಸ್‌ಯುವಿ) ಅತಿ ಹೆಚ್ಚಿನ ಬೇಡಿಕೆಯಿದೆ. ಪ್ರಾರಂಭದಲ್ಲಿ ಸಣ್ಣ ಕಾರುಗಳನ್ನು ನೆಚ್ಚಿಕೊಂಡವರು ನಿಧಾನವಾಗಿ ಎಸ್‌ಯುವಿಗಳತ್ತ ವಾಲುತ್ತಿದ್ದಾರೆ.
ಇದು ಕೇವಲ ಜಾಗತಿಕ ಮಾರುಕಟ್ಟೆಗಷ್ಟೇ ಸೀಮಿತವಲ್ಲ. ಭಾರತದಲ್ಲೂ ನಿಧಾನವಾಗಿ ಇಂತಹದೊಂದು ಹವೆ ಅಪ್ಪಳಿಸ ತೊಡಗಿದೆ. ಇದೇ ಕಾರಣಕ್ಕಾಗಿ ಮುಂಬರುವ ಚಿಕಾಗೊ ಆಟೋ ಶೋ ಭಾರತೀಯರ ಪಾಲಿಗೆ ಅತಿ ಮುಖ್ಯವೆನಿಸಲಿದೆ.

ಏಕೆಂದರೆ ಇಲ್ಲಿ ಕೆಲವು ಅತಿ ವಿಶಿಷ್ಟ ಎಸ್‌ಯುವಿ ಕಾರುಗಳು ತೆರೆ ಕಾಣಲಿದ್ದು, ಮುಂದೊಂದು ದಿನ ಭಾರತಕ್ಕೂ ಅಪ್ಪಳಿಸಿದರೆ ಅಚ್ಚರಿಪಡಬೇಕಾಗಿಲ್ಲ. ನಿಮ್ಮ ಮಾಹಿತಿಗಾಗಿ ಕಳೆದ ಮೂರು ವರ್ಷಗಳಲ್ಲಿ ಹೋಂಡಾ ಸಿಆರ್-ವಿ ಅತಿ ಹೆಚ್ಚು ಮಾರಾಟವನ್ನು ದಾಖಲಿಸಿದ ಕಾರುಗಳಲ್ಲಿ ಗುರುತಿಸಿಕೊಂಡಿದೆ. ಅದ ಹಾಗೆ ಚಿಕಾಗೊ ಆಟೋ ಶೋ ಫೆಬ್ರವರಿ 14 ಪ್ರೇಮಿಗಳ ದಿನಾಚರಣೆಯಂದು ಆರಂಭವಾಗಿದ್ದು, 22ರ ವರೆಗೆ ಸಾಗಲಿದೆ.
ಚಿಕಾಗೊದಲ್ಲಿ ನೀವು ನೋಡಲೇ ಬೇಕಾಗಿರುವ ಎಸ್‌ಯುವಿಗಳು:
ಷೆವರ್ಲೆ ಇಕ್ಯೂನಾಕ್ಸ್
- ಪ್ರೊಜೆಕ್ಟರ್ ಬೀಮ್ ಹೆಡ್ ಲ್ಯಾಂಪ್,
- ಎಲ್‌ಇಡಿ ಹೆಡ್ ಲ್ಯಾಂಪ್,
- ರಿಯರ್ ವ್ಯೂ ಕ್ಯಾಮೆರಾ,
- ಬ್ಲೈಂಡ್ ಸ್ಪಾಟ್ ಡಿಟೆಕ್ಷನ್,
- ಕ್ರಾಸ್ ಟ್ರಾಫಿಕ್ ಅಲರ್ಟ್,
- ಏಳು ಇಂಚಿನ ಸ್ಕ್ರೀನ್,
- ಪರಿಷ್ಕೃತ ಇನ್ಸ್ಟ್ರುಮೆಂಟ್ ಪ್ಯಾನೆಲ್

ಕಿಯಾ ಟ್ರೈಲ್‌ಸ್ಟರ್ ಕಾನ್ಸೆಪ್ಟ್
- ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬಹುದಾದ ಕ್ಯಾನ್‌ವಾಸ್ ರೂಫ್,
- ಇಂಟೇಗ್ರೇಟಡ್ ರೂಫ್ ರಾಕ್ ಫಿಟ್ಟಿಂಗ್,
- ಪೈರಲ್ಲಿ ಸ್ನೊ ಚಕ್ರಗಳು,
- 1.6 ಲೀಟರ್ ಫೋರ್ ಸಿಲಿಂಡರ್ ಎಂಜಿನ್ - 185 ಅಶ್ವಶಕ್ತಿ,
- ಎಲೆಕ್ಟ್ರಿಕ್ ಆಲ್ ವೀಲ್ ಡ್ರೈವ್ ಸಿಸ್ಟಂ

- ಏರೋಡೈನಾಮಿಕ್ ನೋಟ (ಸಿಆರ್-ವಿಗೆ ಸಾಮ್ಯತೆ),
- ಎಂಟು ಇಂಚಿನ ಸ್ಕ್ರೀನ್,
- ಸುಧಾರಿತ ನೇವಿಗೇಷನ್ ಸಿಸ್ಟಂ,
- ಐದು ಯುಎಸ್‌ಬಿ ಪೋರ್ಟ್



Click it and Unblock the Notifications








