ಇಟಲಿಯಲ್ಲಿ ಸುಜುಕಿ ಪೊಶ್ ಭಂಗಿ; ಭಾರತಕ್ಕೆ ಬಂದಿತೇ?
ಜಪಾನ್‌ನ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಸುಜುಕಿ ಭಾರತ ಸೇರಿದಂತೆ ಇನ್ನು ಕೆಲವು ರಾಷ್ಟ್ರಗಳಲ್ಲಿ ಉತ್ತಮ ಮಾರಾಟವನ್ನು ಕಾಯ್ದುಕೊಂಡಿದೆ. ಅಲ್ಲದೆ ತನ್ನ ನಿರ್ದಿಷ್ಟ ದೇಶಗಳ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಹೊಸ ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದರಲ್ಲಿ ಸದಾ ಬದ್ಧವಾಗಿದೆ.
ನಿಮಗೆಲ್ಲರಿಗೂ ತಿಳಿದಿರುವಂತೆಯೇ ಭಾರತದಲ್ಲಿ ಸ್ವಿಫ್ಟ್ ಅತ್ಯಂತ ಜನಪ್ರಿಯ ಮಾದರಿಯಾಗಿದೆ. ಇದು ದೇಶದ ಸರ್ವಕಾಲಿಕ ಶ್ರೇಷ್ಠ ಕಾರುಗಳಲ್ಲಿ ಒಂದೆನಿಸಿಸಿಕೊಂಡಿದೆ.

ಈ ಎಲ್ಲ ವಿಚಾರಗಳನ್ನು ಇಲ್ಲಿ ಉಲ್ಲೇಖಿಸಲು ಕಾರಣವೊಂದಿದೆ. ಇದೀಗ ಸುಜುಕಿ ಸಂಸ್ಥೆಯು ಇಟಲಿಯಲ್ಲಿ ಹೊಸತಾದ ಸ್ವಿಫ್ಟ್ ಪೊಶ್ ಮಾದರಿಯನ್ನು ಬಿಡುಗಡೆ ಮಾಡಿದೆ. ನಿಕಟ ಭವಿಷ್ಯದಲ್ಲೇ ಇದು ಭಾರತವನ್ನು ತಲುಪಿದ್ದಲ್ಲಿ ಅಚ್ಚರಿ ಪಡಬೇಕಾಗಿಲ್ಲ.
ನೂತನ ಸುಜುಕಿ ಪೊಶ್ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಲಭ್ಯವಿರಲಿದೆ.
- 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್ - 85 ಅಶ್ವಶಕ್ತಿ (118 ತಿರುಗುಬಲ)
- 1.3 ಲೀಟರ್ ಡೀಸೆಲ್ ಎಂಜಿನ್ - 73 ಅಶ್ವಶಕ್ತಿ (190 ತಿರುಗುಬಲ)

ಅಂತೆಯೇ ಕಾರಿನೊಳಗೆ ಲೆಥರ್ ಸೀಟು, ಡೋರ್ ಪ್ಯಾನೆಲ್, ಸ್ಟಾರ್ಟ್ ಸ್ಟಾಪ್, ಕೀಲೆಸ್ ಎಂಟ್ರಿ, ಕ್ರೂಸ್ ಕಂಟ್ರೋಲ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಸೇವೆ ಲಭ್ಯವಿರಲಿದೆ. ಅಂದ ಹಾಗೆ ಇಟಲಿಯಲ್ಲಿ ಸುಜುಕಿ ಪೊಶ್ 10ರಿಂದ 11 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.


Click it and Unblock the Notifications