ಜ.28ರಿಂದ ಸುಜುಕಿ ಗುಜರಾತ್ ಘಟಕದ ನಿರ್ಮಾಣ ಕಾಮಗಾರಿ ಆರಂಭ

By Nagaraja

ಬರೋಬ್ಬರಿ 4,000 ಕೋಟಿ ರುಪಾಯಿ ವೆಚ್ಚದಲ್ಲಿ ಗುಜರಾತ್‌ನಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಕಾರು ಘಟಕದ ಕೆಲಸವು ಜನವರಿ 28ರಂದು ಆರಂಭವಾಗಲಿದೆ ಎಂದು ಆಟೋ ದೈತ್ಯ ಸುಜುಕಿ ಮೋಟಾರು ಕಾರ್ಪೋರೇಷನ್ (ಎಸ್‌ಎಂಸಿ) ತಿಳಿಸಿದೆ.

ಮಾರುತಿ ಸುಜುಕಿ ಅಂಗಸಂಸ್ಥೆಯಾಗಿರುವ ಸುಜುಕಿ ಹೊಸ ಘಟಕದ ಕಾಮಗಾರಿಯು 2017ರ ವೇಳೆಗೆ ಪೂರ್ಣಗೊಳ್ಳಲಿದೆ. ತದಾ ಬಳಿಕ ಘಟಕದ ಕಾರ್ಯಾಚರಣೆಯು ಸಂಪೂರ್ಣವಾಗಿ ಆರಂಭವಾಗಲಿದೆ.

suzuki vitara

ಇದರಂತೆ ಇದೇ ಮುಂಬರುವ ಜನವರಿ 28ರಂದು ಹನ್ಸಾಲ್‌ಪುರ ಗ್ರಾಮದಲ್ಲಿ ಅಡಿಗಲ್ಲನ್ನು ಹಾಕಲಿದೆ. ಈ ಮಹತ್ತರ ಕಾರ್ಯಕ್ರಮಕ್ಕೆ ಗುಜರಾತ್ ಮುಖ್ಯಮಂತ್ರಿ ಆನಂದಿ ಪಟೇಲ್ ಹಾಗೂ ವಿತ್ತ ಸಚಿವರಾದ ಸೌರಭ್ ಪಟೇಲ್ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಭಾರತದ ಜಪಾನ್ ರಾಯಭಾರಿ ಟಕೆಶಿ ಕೂಡಾ ಉಪಸ್ಥಿತರುವ ಸಾಧ್ಯತೆಯಿದೆ.

ಪ್ರಸ್ತುತ ಘಟಕವು ಪ್ರಾರಂಭದಲ್ಲಿ ವಾರ್ಷಿಕವಾಗಿ 1,50,000 ಲಕ್ಷ ಯುನಿಟ್‌ಗಳಷ್ಟು ನಿರ್ಮಾಣ ಸಾಮರ್ಥ್ಯ ಹೊಂದಿರಲಿದೆ. ಈ ಹಿಂದೆ 2012ರಲ್ಲಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್‌ಐಎಲ್) ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದ ಸುಜುಕಿ, ಹನ್ಸಾಲ್‌ಪುರ ಗ್ರಾಮದಲ್ಲಿ 700 ಎಕರೆ ಜಾಗವನ್ನು ಸ್ವಾಧೀನಪಡಿಸಿತ್ತು.

More from DriveSpark

Article Published On: Monday, January 26, 2015, 10:03 [IST]
English summary
Suzuki to start Gujarat plant work on January 28
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+