ಸುಜುಕಿ ಹೊಸ ಕಾನ್ಸೆಪ್ಟ್ ಕಾರುಗಳು - ಐಕೆ-2 ಮತ್ತು ಐಎಂ-4
ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಸುಜುಕಿ ಬಗ್ಗೆ ಮಾತನಾಡುವಾಗ ನಾವು ಬಹಳ ಉತ್ಸಾಹಿತರಾಗುತ್ತೇವೆ. ಏಕೆಂದರೆ ಮುಂದೊಂದು ದಿನ ಈ ಬಹುನಿರೀಕ್ಷಿತ ಮಾದರಿ ಭಾರತ ಮಾರುಕಟ್ಟೆಯನ್ನು ತಲುಪಲಿದೆ ಎಂಬ ನಂಬಿಕೆ ದೇಶದ ವಾಹನ ಪ್ರೇಮಿಗಳಲ್ಲಿ ಇರುತ್ತದೆ.
ಜಾಗತಿಕವಾಗಿ ತನ್ನ ಸಾನಿಧ್ಯವನ್ನು ವ್ಯಕ್ತಪಡಿಸಿರುವ ಸುಜುಕಿ ಮುಂಬರುವ 2015 ಜಿನೆವಾ ಮೋಟಾರು ಶೋದಲ್ಲಿ ಐಕೆ-2 ಹಾಗೂ ಐಎಂ-4 ಗಳೆಂಬ ಎರಡು ಹೊಚ್ಚ ಹೊಸ ಕಾನ್ಸೆಪ್ಟ್ ಕಾರುಗಳನ್ನು ಪರಿಚಯಿಸಲಿದೆ.

ಜಗತ್ತಿನ ಮುಂಚೂಣಿಯ ವಾಹನ ಪ್ರದರ್ಶನ ಮೇಳಗಳಲ್ಲಿ ಒಂದಾಗಿರುವ ಜಿನೆವಾ ಮೋಟಾರು ಶೋ 2015 ಮಾರ್ಚ್ 3ರಿಂದ ಆರಂಭವಾಗಲಿದೆ. ಇದರಂತೆ ಅನುಕ್ರಮವಾಗಿ ಐಕೆ-2 ಮತ್ತು ಐಎಂ-4 ಕಾನ್ಸೆಪ್ಟ್ ಮಾದರಿಗಳ ಟೀಸರ್ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.
ಎರಡು ಮಾದರಿಗಳು ಒದಕ್ಕೊಂದು ವಿಭಿನ್ನ ವಿನ್ಯಾಸವನ್ನು ಪಡೆದುಕೊಂಡಿದೆ. ಈ ಪೈಕಿ ಐಎಂ-4 ಕಾಂಪಾಕ್ಟ್ ಎಸ್‌ಯುವಿ ಆಗಿರಲಿದ್ದು, ಫೋರ್ ವೀಲ್ ಡ್ರೈವ್ ವ್ಯವಸ್ಥೆಯನ್ನು ಪಡೆಯಲಿದೆ. 'ಸ್ಪೂರ್ತಿಯ ಸಂಕೇತವಾಗಿ' ಜಪಾನ್ ವಾಹನ ತಯಾರಿಕ ಸಂಸ್ಥೆಯು ಇದನ್ನು ಬಳಕೆ ಮಾಡಿದೆ.

ಇನ್ನೊಂದೆಡೆ ಐಕೆ-2 'ಸಮನ್ವಯ ಶಕ್ತಿ'ಯ ಸೂಚಕವಾಗಿದ್ದು ಸಂಪೂರ್ಣ ಎಸ್‌ಯುವಿ ಪ್ಯಾಕೇಜ್ ನೀಡಲಿದೆ. ಭವಿಷ್ಯದಲ್ಲಿ ಈ ಕಾರುಗಳನ್ನು ನನಸಾಗಿಸುವುದು ಸುಜುಕಿ ಗುರಿಯಾಗಿದೆ. ಒಟ್ಟಿನಲ್ಲಿ 85ನೇ ಜಿನೆವಾ ಮೋಟಾರು ಶೋದಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಹೊರಬರಲಿದೆ.


Click it and Unblock the Notifications








