ಲ್ಯಾಂಡ್ ರೋವರ್ ತಳಹದಿಯಲ್ಲಿ ಟಾಟಾದಿಂದ ನೂತನ ಎಸ್‌ಯುವಿ
ನಿಮಗೆಲ್ಲರಿಗೂ ತಿಳಿದಿರುವಂತೆಯೇ ಬ್ರಿಟನ್‌ನ ಐಕಾನಿಕ್ ಲ್ಯಾಂಡ್ ರೋವರ್ ಮಾಲಿಕತ್ವವನ್ನು ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಹೊಂದಿದೆ. ಈಗ ಬಂದಿರುವ ಶುಭ ಸಮಾಚಾರ ಏನೆಂದರೆ ಟಾಟಾ ಸಂಸ್ಥೆಯು ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ತಳಹದಿಯಲ್ಲಿ ನೂತನ ಕ್ರೀಡಾ ಬಳಕೆಯ ಅಭಿವೃದ್ಧಿಯಲ್ಲಿ ತೊಡಗಿದೆ.
ಟಾಟಾ ಮೋಟಾರ್ಸ್ ಹಾಗೂ ಲ್ಯಾಂಡ್ ರೋವರ್‌ನ ಈ ಜಂಟಿ ಎಸ್‌ಯುವಿ ಕ್ಯೂ501 ಕೋಡ್ ಪಡೆದುಕೊಂಡಿದೆ. ಇದು ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ಸ್‌ನ (ಎಲ್550) ಅದೇ ತಳಹದಿಯಲ್ಲಿ ನಿರ್ಮಾಣವಾಗಲಿದೆ.

ಪ್ರಮುಖವಾಗಿಯೂ ದೇಶದಲ್ಲಿ ಅತಿ ಹೆಚ್ಚು ಮಾರಾಟದಲ್ಲಿರುವ ಎಕ್ಸ್‌ಯುವಿ500 ಹಾಗೂ ಇದರ ಹೈ ಎಂಡ್ ಮಾದರಿಯು ಟೊಯೊಟಾ ಫಾರ್ಚುನರ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ನೂತನ ಎಸ್‌ಯುವಿನಲ್ಲಿ ಫಿಯೆಟ್‌ನ 2.0 ಮಲ್ಟಿಜೆಟ್ II ಡಿಸ್ಕವರಿ ಸ್ಪೋರ್ಟ್ ಎಂಜಿನ್ ಆಳವಡಿಸುವ ಸಾಧ್ಯತೆಯಿದೆ. ಇದು 150ರಿಂದ 175ರ ವರೆಗೆ ಅಶ್ವಶಕ್ತಿ ಉತ್ಪಾದಿಸಲಿದೆ.
ಹಾಗಿದ್ದರೂ ಸಂಸ್ಥೆಯಿಂದ ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಬರಬೇಕಾಗಿದೆ. ಇದರಿಂದಾಗಿ 2017ರ ವೇಳೆಯಷ್ಟೇ ನೂತನ ಎಸ್‌ಯುವಿ ಆಗಮನವಾಗಲಿದೆ.


Click it and Unblock the Notifications








