ಹೊಸ ಕೈಟ್; ಇದು ಟಾಟಾ-ಮೆಸ್ಸಿ ಜುಗಲ್‌ಬಂದಿ
ಈಗಷ್ಟೇ ಜಗತ್ತಿನ ಮುನ್ನಡೆಯ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಅವರನ್ನು ಸಂಸ್ಥೆಯ ಮುಖ್ಯ ಪ್ರಚಾರ ರಾಯಭಾರಿಯನ್ನಾಗಿ ನೇಮಕಗೊಳಿಸಿರುವ ದೇಶದ ಅತಿ ದೊಡ್ಡ ವಾಹನ ಕಂಪನಿ ಟಾಟಾ ಮೋಟಾರ್ಸ್, ಹೊಸ ಜಾಹೀರಾತುವೊಂದನ್ನು ಬಿಡುಗಡೆ ಮಾಡಿದೆ.
ಇಲ್ಲಿ ಗಮನಾರ್ಹ ಅಂಶವೆಂದರೆ ಸಂಸ್ಥೆಯ ಜಾಗತಿಕ ಅಂಬಾಸಿಡರ್ ಆಗಿ ನೇಮಕಗೊಂಡಿರುವ ಮೆಸ್ಸಿ ಟಾಟಾದ ಹೊಸ ಮಾದರಿಗಳ ಪ್ರಚಾರ ಮಾಡಲಿದ್ದಾರೆ. ಇದರಂತೆ ಟಾಟಾ ಕೈಟ್ ನೂತನ ವಿಡಿಯೋ ರಚಿಸಲಾಗಿದೆ.

ಟಾಟಾ ಸಂಸ್ಥೆ ಅನುಸರಿಸಲಿರುವ ಹೊಸ ಡಿಸೈನ್ ತಂತ್ರಗಾರಿಕೆಯಲ್ಲಿ ಕೈಟ್ ಬಿಡುಗಡೆಯಾಗಲಿದೆ. ಈ ನಿಟ್ಟಿನಲ್ಲಿ ಟೀಸರ್ ವಿಡಿಯೋ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಚಿಕ್ಕವನಿಂದಲೇ ಮೆಸ್ಸಿ ಫುಟ್ಬಾಲ್ ಮೇಲಿನ ಪ್ರೀತಿಯನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ.
ನಿಮ್ಮ ಮಾಹಿತಿಗಾಗಿ ಟಾಟಾ ಕೈಟ್, ಸಂಸ್ಥೆಯಿಂದ ಬಿಡುಗಡೆಯಾಗಲಿರುವ ಹೊಸ ಕಾಂಪಾಕ್ಟ್ ಹ್ಯಾಚ್ ಬ್ಯಾಕ್ ಕಾರಾಗಿರಲಿದೆ. ಇದು ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು, 2015 ವರ್ಷಾಂತ್ಯದಲ್ಲಿ ಅಥವಾ 2016 ವರ್ಷಾರಂಭದಲ್ಲಿ ಬಿಡುಗಡೆಯಾಗಲಿದೆ.
ಬೋಲ್ಟ್ ಕೆಳ ದರ್ಜೆಯಲ್ಲಿ ಗುರುತಿಸಿಕೊಳ್ಳಲಿರುವ ಕೈಟ್ ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದು 1005 ಸಿಸಿ ತ್ರಿ ಸಿಲಿಂಡರ್ ಡೀಸೆಲ್ ಹಾಗೂ 1.2 ಲೀಟರ್ ಫೋರ್ ಸಿಲಿಂಡರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳುವ ನಿರೀಕ್ಷೆಯಿದೆ.
ಭಾರತದಲ್ಲಿ ಹ್ಯುಂಡೈ ಐ10, ಮಾರುತಿ ಸುಜುಕಿ ಸೆಲೆರಿಯೊ ಹಾಗೂ ವ್ಯಾಗನಾರ್ ಗಳಂತಹ ಮಾದರಿಗಳಿಗೆ ಕೈಟ್ ಪ್ರತಿಸ್ಪರ್ಧಿಯಾಗಲಿದೆ. ಅಲ್ಲದೆ ನಾಲ್ಕು ಲಕ್ಷ ರು.ಗಳ ಬೆಲೆ ಪರಿಧಿಯೊಳಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.
ಟಾಟಾ ಕೈಟ್-ಲಿಯೊನಲ್ ಮೆಸ್ಸಿ ಜುಗಲ್‌ಬಂದಿ ವಿಡಿಯೋ ವೀಕ್ಷಿಸಿ


Click it and Unblock the Notifications