ಭಾರಿ ನಿರೀಕ್ಷೆ ಹುಟ್ಟಿಸಿದ ಟಾಟಾ ಕೈಟ್ ರೇಖಾ ಚಿತ್ರ
ಫುಟ್ಬಾಲ್ ದಿಗ್ಗಜ ಲಿಯೊನೆಲ್ ಮೆಸ್ಸಿ ಅವರನ್ನು ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿರುವ ಬೆನ್ನಲ್ಲೇ ತನ್ನ ಜಾಗತಿಕ ಯೋಜನೆಗಳಿಗೆ ಚುರುಕು ಮುಟ್ಟಿಸಿರುವ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಬಹುನಿರೀಕ್ಷಿತ ಟಾಟಾ ಕೈಟ್ ರೇಖಾಚಿತ್ರ ಬಿಡುಗಡೆಗೊಳಿಸಿದೆ.
Also Read: "ನಮಸ್ತೆ ಇಂಡಿಯಾ" ಭಾರತೀಯರಿಗೆ ವಿಷ್ ಮಾಡಿದ ಮೆಸ್ಸಿ ಮುಂದಕ್ಕೆ ಓದಿ
ಟಾಟಾ ಬಿಡುಗಡೆ ಮಾಡಿರುವ ಕೈಟ್ ರೇಖಾ ಚಿತ್ರವು ಅನೇಕ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಈ ಎಲ್ಲದರ ಮುಖಾಂತರ ವಾಹನ ಮಾರುಕಟ್ಟೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಟಾಟಾ ಮುನ್ನುಗುತ್ತಿದೆ.

ಬಹುನಿರೀಕ್ಷಿತ ಟಾಟಾ ಕೈಟ್ ವರ್ಷಾಂತ್ಯದಲ್ಲಿ ಅಥವಾ ಮುಂಬರುವ ವರ್ಷಾರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ಪೋದಲ್ಲೂ ಇದು ಭರ್ಜರಿ ಪ್ರದರ್ಶನ ಕಾಣಲಿದೆ.

ಇದಕ್ಕೂ ಮೊದಲು ಟಾಟಾ ಕೈಟ್ ಹೆಡ್ ಲೈಟ್ ಚಿತ್ರವನ್ನು ಮಾತ್ರ ಬಹಿರಂಗ ಮಾಡಲಾಗಿತ್ತು. ಇದಕ್ಕಾಗಿ ಮೆಸ್ಸಿ ಜೊತೆಗೆ 'ಮೇಡ್ ಆಫ್ ಗ್ರೇಟ್' ಎಂಬ ಹ್ಯಾಶ್ ಟ್ಯಾಗ್ ಉಪಯೋಗಿಸಿ ವಿಡಿಯೋವನ್ನು ರಚಿಸಲಾಗಿದೆ.

ವಿಶ್ವದ ಅತಿ ಅಗ್ಗದ ನ್ಯಾನೋ ಹಾಗೂ ಬೋಲ್ಟ್ ನಡುವಣ ದರ್ಜೆಯಲ್ಲಿ ಗುರುತಿಸಿಕೊಳ್ಳಲಿರುವ ಟಾಟಾ ಕೈಟ್ ದೇಶದ ನಂ.1 ಕಾರು ಸಂಸ್ಥೆ ಮಾರುತಿ ಸುಜುಕಿಯ ಜನಪ್ರಿಯ ಆಲ್ಟೊ, ಹ್ಯುಂಡೈ ಇಯಾನ್ ಹಾಗೂ ರೆನೊ ಕ್ವಿಡ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಹಾಗಿದ್ದರೂ ಎಂಜಿನ್ ಮಾನದಂಡಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಬಂದಿಲ್ಲ. ಇದು 1.0 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಹಾಗೂ 1.2 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ.

ಇಂಡಿಕಾ ಇವಿ2 ತಳಹದಿಯಲ್ಲಿ ನಿರ್ಮಾಣವಾಗಿರುವ ಕೈಟ್ ಒಂದು ಕೋಡ್ ಹೆಸರಾಗಿದ್ದು, ನಿರ್ಮಾಣ ಆವೃತ್ತಿಯು ಹೊಸ ನಾಮಕರಣ ಪಡೆದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ. ಇದೇ ತಳಹದಿಯಲ್ಲಿ ಹ್ಯಾಚ್ ಬ್ಯಾಕ್ ಜೊತೆಗೆ ಕಾಂಪಾಕ್ಟ್ ಸೆಡಾನ್ ಕಾರುಗಳು ನಿರ್ಮಾಣವಾಗಲಿದ್ದು, ದೇಶದ ಜೊತೆಗೆ ಅಂತರಾಷ್ಟ್ರೀಯ ಮಾರುಕಟ್ಟೆಗೂ ಪ್ರವೇಶಿಸಲಿದೆ.

ಹೊಸ ಟಾಟಾ ಕೈಟ್ ನಾಲ್ಕು ಲಕ್ಷ ರು.ಗಳ ಬೆಲೆ ಪರಿಧಿಯೊಳಗೆ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳಲಾಗಿದೆ.

ಈಗ ಟಾಟಾ ಕೈಟ್ ಹೊಸ ರೇಖಾ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯವೇನು ? ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.
ಆಕರ್ಷಕ ವಿಡಿಯೋ ವೀಕ್ಷಿಸಿ


Click it and Unblock the Notifications