ಮುಂದಿನ ತಿಂಗಳಲ್ಲಿ ಟಾಟಾದ ಹೊಸ ಕ್ವಾಡ್ರಾಸೈಕಲ್ ಮಾರುಕಟ್ಟೆಗೆ

Written By:

ಕ್ವಾಡ್ರಾಸೈಕಲ್ ವಿಭಾಗದಲ್ಲಿ ಗುರುತಿಸಿಕೊಳ್ಳಲಿರುವ ಟಾಟಾದ ಹೊಸ ಉತ್ಪನ್ನವು ಮುಂದಿನ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿ ಕಂಡುಬರುತ್ತಿದ್ದು, ಇನ್ನಷ್ಟೇ ಬಿಡುಗಡೆಯಾಗಲಿರುವ ಬಜಾಜ್ ಆರ್‌ಇ60 ಮಾದರಿಗೆ ಪ್ರತಿಯಾಗಲಿದೆ.

ಸಣ್ಣ ವಾಣಿಜ್ಯ ಕ್ವಾಡ್ವಾಸೈಕಲ್ ವಿಭಾಗವು ದೇಶ ನಿವಾಸಿಗಳಿಗೆ ಹೊಸತನದ ಅನುಭವ ನೀಡಲಿದೆ. ಇದು ಪ್ರಮುಖವಾಗಿಯೂ ಆಟೋ ರಿಕ್ಷಾಗಳಂತಹ ತ್ರಿಚಕ್ರ ವಾಹನಗಳಿಗೆ ಬದಲಿ ವ್ಯವಸ್ಥೆಯಾಗಿರಲಿದೆ.

ಟಾಟಾ ಮ್ಯಾಜಿಕ್ ಐರಿಸ್

ಪ್ರಸ್ತುತ ಬಜಾಜ್ ಆಟೋ ಮಾತ್ರ ಕ್ವಾಡ್ರಾಸೈಕಲ್ ವಿಭಾಗದಲ್ಲಿ ಉತ್ಪನ್ನವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಪ್ರಯಾಣಕಿ ವಾಹನಕ್ಕೆ ಎಂಟ್ರಿ ಕೊಟ್ಟಲ್ಲಿ ಟಾಟಾ ಐರಿಸ್ ಗಿದು ತನ್ನ ಮಾರಾಟ ಕುದುರಿಸಿಕೊಳ್ಳಲು ಸ್ಪಷ್ಟ ಅವಕಾಶವನ್ನು ನೀಡಲಿದೆ.

ನೂತನ ಕ್ವಾಡ್ವಾಸೈಕಲ್ ಸಂಚಾರ ವಾಹಕದ ವಿರುದ್ದ ನ್ಯಾಯಾಲಯದಲ್ಲಿ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಈಗ ತೊಡಕುಗಳೆಲ್ಲ ನಿವಾರಣೆಯಾಗಿದ್ದು, ಬಜಾಜ್ ಆರ್‌ಇ60 ಚೊಚ್ಚಲ ಕ್ವಾಡ್ರಾಸೈಕಲ್ ರೂಪದಲ್ಲಿ ಮಾರುಕಟ್ಟೆಗಿಳಿಯಲು ಸಜ್ಜಾಗುತ್ತಿದೆ.

English summary
Tata Magic Iris Metered Taxi Under Consideration
Story first published: Wednesday, September 23, 2015, 16:40 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark