ಟಾಟಾ ಮೆಗಾಪಿಕ್ಸೆಲ್: ಒಂದು ಪುಟ್ಟ ಸ್ಮಾರ್ಟ್ ಸಿಟಿ ಕಾರು

Written By:

ಭವಿಷ್ಯತ್ತಿನ ವಾಹನಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ಸದಾ ಕಾರ್ಯ ಮಗ್ನವಾಗಿರುವ ದೇಶದ ಅತಿ ದೊಡ್ಡ ವಾಹನ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಅತಿ ನೂತನ ಸ್ಮಾರ್ಟ್ ಸಿಟಿ ಕಾರನ್ನು ಅಭಿವೃದ್ಧಿಪಡಿಸುತ್ತಿದೆ. ಈಗಾಗಲೇ 82ನೇ ಜಿನೆವಾ ಮೋಟಾರು ಶೋದಲ್ಲಿ ಕಾನ್ಸೆಪ್ಟ್ ಮಾದರಿಯನ್ನು ಪ್ರದರ್ಶಿಸಿರುವ ಟಾಟಾ ಸಂಸ್ಥೆಯು ಟಾಟಾ ರೇಂಜ್ ಎಕ್ಸ್‌ಟೆಂಡೆಟ್ ಎಲೆಕ್ಟ್ರಿಕ್ ವೆಹಿಕಲ್ (REEV) ವಿಭಾಗಕ್ಕೆ ಸೇರಿದ ನೂತನ ವಾಹನವನ್ನು 'ಮೆಗಾಪಿಕ್ಸೆಲ್' ಎಂದು ಹೆಸರಿಸಿದೆ.

ನಾಲ್ಕು ಸೀಟುಗಳ ಈ ಸ್ಮಾರ್ಟ್ ಸಿಟಿ ಕಾರನ್ನು ಜಾಗತಿಕ ಮಾರಾಟದ ಉದ್ದೇಶದೊಂದಿಗೆ ಟಾಟಾ ಅಭಿವೃದ್ಧಿಪಡಿಸುತ್ತಿದೆ. ಅಲ್ಲದೆ ಸುಸ್ಥಿರ ಪರಿಸರದ ನಿಟ್ಟಿನಲ್ಲಿ ಭವಿಷ್ಯದ ವಾಹನಗಳನ್ನು ನಿರ್ಮಿಸುವುದರಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.

To Follow DriveSpark On Facebook, Click The Like Button
ಟಾಟಾ ಮೆಗಾಪಿಕ್ಸೆಲ್: ಒಂದು ಪುಟ್ಟ ಸ್ಮಾರ್ಟ್ ಸಿಟಿ ಕಾರು

ಟಾಟಾ ಮೆಗಾಪಿಕ್ಸೆಲ್ ಒಂದು ವಿದ್ಯುತ್ ಚಾಲಿತ ಎಲೆಕ್ಟ್ರಿಕ್ ಕಾರಾಗಿರಲಿದ್ದು, ಲಿಥಿಯಂ ಇಯಾನ್ ಬ್ಯಾಟರಿ ಬಳಕೆಯಾಗಲಿದೆ. ಅಲ್ಲದೆ ಇಂಧನವನ್ನು ಪ್ರತ್ಯುತ್ಪಾದಿಸುವ ಸಲುವಾಗಿ ಪೆಟ್ರೋಲ್ ಎಂಜಿನ್ ಜನರೇಟರ್ ಸಹ ಬಳಕೆ ಮಾಡಲಾಗುವುದು.

ಟಾಟಾ ಮೆಗಾಪಿಕ್ಸೆಲ್: ಒಂದು ಪುಟ್ಟ ಸ್ಮಾರ್ಟ್ ಸಿಟಿ ಕಾರು

ಟಾಟಾ ಮೆಗಾಪಿಕ್ಸೆಲ್‌ನಲ್ಲಿ 900 ಕೀ.ಮೀ. ವ್ಯಾಪ್ತಿಯ ವರೆಗೆ ಸರಾಗವಾಗಿ ಸಾಗಬಹುದಾಗಿದೆ. ಅಂದರೆ ಪ್ರತಿ ಲೀಟರ್ ಗೆ 100 ಕೀ.ಮೀ. ಮೈಲೇಜ್ ನೀಡುವಷ್ಟು ಸಕ್ಷಮವಾಗಲಿದೆ.

ಟಾಟಾ ಮೆಗಾಪಿಕ್ಸೆಲ್: ಒಂದು ಪುಟ್ಟ ಸ್ಮಾರ್ಟ್ ಸಿಟಿ ಕಾರು

ಪ್ರತಿ ಕೀ.ಮೀ.ಗೆ 22ಗ್ರಾಂ ಮಾತ್ರ ಕಾರ್ಬನ್ ಡೈಓಕ್ಸೆಡ್ (CO2 emissions) ಹೊರಸೂಸುವ ಈ ಅತಿ ನೂತನ ಕಾರು, ಮನೆ ಚಾರ್ಜಿಂಗ್ ಪ್ಲಗ್ ನಿಂದಲೂ ಚಾರ್ಜಿಂಗ್ ಮಾಡಿಸಬಹುದಾಗಿದೆ.

ಟಾಟಾ ಮೆಗಾಪಿಕ್ಸೆಲ್: ಒಂದು ಪುಟ್ಟ ಸ್ಮಾರ್ಟ್ ಸಿಟಿ ಕಾರು

ಪ್ರತಿಯೊಂದು ಚಕ್ರಗಳಿಗೂ ನಾಲ್ಕು ಸ್ವತಂತ್ರ ಎಲೆಕ್ಟ್ರಿಕ್ ಮೋಟಾರುಗಳನ್ನು ಆಳವಡಿಸಲಾಗುತ್ತದೆ. ಅಲ್ಲದೆ 2.8 ಮೀಟರ್ ಟರ್ನಿಂಗ್ ರೇಡಿಯಸ್ ಹೊಂದಿರುವ ಈ ಕಾರು ಅಂದತೆಯ ವಿಚಾರದಲ್ಲಿ ಇತರ ಕಾರುಗಳಿಗಿಂತ ವಿಭಿನ್ನವಾಗಿ ಗುರುತಿಸಿಕೊಳ್ಳಲಿದೆ.

ಗಮನಾರ್ಹ ಅಂಶಗಳು

ಗಮನಾರ್ಹ ಅಂಶಗಳು

ಎಂಜಿನ್ ವಿಧ: ನಾಲ್ಕು ಎಲೆಕ್ಟ್ರಿಕ್ ವೀಲ್ ಮೋಟಾರು ಮುಖಾಂತರ ಎಲೆಕ್ಟ್ರಿಕ್ ಡ್ರೈವ್

ಬ್ಯಾಟರಿ: ಲಿಥಿಯಂ ಇಯಾನ್ ಫಾಸ್ಫೇಟ್ 13 ಕೆಡಡ್ಲ್ಯುಎಚ್

ಬ್ಯಾಟರಿ ಚಾರ್ಜಿಂಗ್: 30 ನಿಮಿಷಗಳಲ್ಲಿ 80% ಚಾರ್ಚಿಂಗ್

ತಿರುಗುಬಲ: 500 ಎನ್‌ಎಂ

ಗರಿಷ್ಠ ವೇಗ: ಗಂಟೆಗೆ 110 ಕೀ.ಮೀ.

ವಿನ್ಯಾಸ

ವಿನ್ಯಾಸ

ವಿಶಿಷ್ಟ ಶೈಲಿ,

ಪ್ಯಾನರಾಮಿಕ್ ನೋಟ,

ಹೆಚ್ಚು ಸ್ಥಳಾವಕಾಶ,

ಆಕರ್ಷಕ ಒಳಮೈ,

ನಾಲ್ಕು ಮಂದಿಗೆ ಆಸನ ವ್ಯವಸ್ಥೆ

English summary
Tata Megapixel Range Extended Electric Vehicle
Story first published: Saturday, August 29, 2015, 12:15 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark