ಟಾಟಾ ಮೋಟಾರ್ಸ್ ಮಾಡಿದ ತಪ್ಪು ಏನು ಗೊತ್ತಾ?

By Nagaraja

ಟಾಟಾ ಮೋಟಾರ್ಸ್ ಭಾರತದ ಅತಿ ದೊಡ್ಡ ವಾಹನ ಸಂಸ್ಥೆ. ಆದರೆ ಟಾಟಾ ಕಾರುಗಳು ಮಾರಾಟ ಹಾಗೂ ಜನಪ್ರಿಯತೆಯಲ್ಲಿ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ ? ಭಾರತೀಯ ವಾಹನ ಸಂಸ್ಥೆಯಾಗಿರುವ ಟಾಟಾ ದೇಶದಲ್ಲೇ ಕಾರುಗಳನ್ನು ನಿರ್ಮಿಸುತ್ತಿರುವ ಈ ಮೂಲಕ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವ ಹೊರತಾಗಿಯೂ ಉತ್ತಮ ಮಾರಾಟವನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗುತ್ತಿದೆ.

Also Read: ಟಾಟಾ ಬ್ರಾಂಡ್ ಅಂಬಾಸಿಡರ್ ಆಗಲಿರುವ ಲಿಯೊನೆಲ್ ಮೆಸ್ಸಿ? ಮುಂದಕ್ಕೆ ಓದಿ

ಈ ನಿಟ್ಟಿನಲ್ಲಿ ಡಿಸೈನ್ ನೆಕ್ಸ್ಟ್, ಡ್ರೈವ್ ನೆಕ್ಸ್ಟ್ ಹಾಗೂ ಕನೆಕ್ಟ್ ನೆಕ್ಸ್ಟ್ ಎಂಬ ಸಿದ್ಧಾಂತದಲ್ಲಿ ಹೊಸ ಬೋಲ್ಟ್ ಹ್ಯಾಚ್ ಬ್ಯಾಕ್ ಹಾಗೂ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರುಗಳನ್ನು ಪರಿಚಯಿಸಿಯೂ ನಿರೀಕ್ಷೆ ಮಾಡಿದಷ್ಟು ಯಶ ದೊರಕಲಿಲ್ಲ.

ಟಾಟಾ ಮಾಡಿದ ಮೊದಲ ತಪ್ಪು

ಟಾಟಾ ಮಾಡಿದ ಮೊದಲ ತಪ್ಪು

ಎಂದಿಗೂ ಟಾಟಾ ನ್ಯಾನೋ ಎಂಬ ಚೊಕ್ಕದಾದ ಕಾರು ನಿರ್ಮಿಸಿರುವುದು ಟಾಟಾ ಮಾಡಿದ ತಪ್ಪಲ್ಲ. ಹಾಗೆಂದು ನೀವು ಅಂದುಕೊಂಡಿದ್ದರೆ ಅದು ತಪ್ಪಾದಿತು. ಆದರೆ ನ್ಯಾನೋ ಮಾರಾಟಕ್ಕಾಗಿ ಟಾಟಾ ಅನುಸರಿಸಿದ ಮಾರಾಟ ತಂತ್ರ ಮಾತ್ರ ಸಂಸ್ಥೆಗೆ ಮುಳುವಾಗಿ ಪರಿಣಮಿಸಿತ್ತು ಎನ್ನದೇ ಬೇರೆ ದಾರಿಯಿಲ್ಲ.

ಅಗ್ಗದ ಕಾರು

ಅಗ್ಗದ ಕಾರು

ತನ್ನ ಬಜೆಟ್ ನ್ಯಾನೋ ಕಾರನ್ನು ವಿಶ್ವದ ಅಗ್ಗದ ಕಾರೆಂಬ ಹೆಸರಲ್ಲಿ ಟಾಟಾ ಬಿಡುಗಡೆ ಮಾಡಿತ್ತು. ಪರಿಣಾಮ ವಾಹನ ಖರೀದಿಗಾರರು ಇದನ್ನು ಖರೀದಿಸಲು ಹಿಂದೇಟು ಹಾಕಿದರು. ಯಾಕೆಂದರೆ ಹಾಗೊಂದು ವೇಳೆ ನಾನು ನ್ಯಾನೋ ಖರೀದಿಸಿದರೆ ಜಗತ್ತಿನ ಅತಿ ಕಡಿಮೆ ಬೆಲೆಯ ಕಾರು ಖರೀದಿಸಿದಂತಾಗುತ್ತದೆ.

ಪುನಶ್ಚೇತನದ ನಿರೀಕ್ಷೆಯಲ್ಲಿ ಟಾಟಾ

2002ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ ಇಂಡಿಗೊ ಸಬ್ ಕಾಂಪಾಕ್ಟ್ ಸೆಡಾನ್ ಕಾರಿನ ಪರಿಸ್ಥಿತಿಯು ಇದಕ್ಕಿಂತ ಭಿನ್ನವಾಗಿರಲಿಲ್ಲ. ಫಿಟ್ ಆ್ಯಂಡ್ ಫಿನಿಶ್ ಗುಣಮಟ್ಟತೆಯನ್ನು ಕಾಯ್ದುಕೊಳ್ಳಲು ಸಂಸ್ಥೆಗೆ ಸಾಧ್ಯವಾಗಲಿಲ್ಲ. ಇದರ ಬೆನ್ನಲ್ಲೇ ಮಾರುತಿಯ ಸ್ವಿಫ್ಟ್ ಡಿಜೈರ್ ಯಶಸ್ಸಿ ಜೈತ್ರಯಾತ್ರೆಯನ್ನೇ ನಡೆಸಿತ್ತು.

ಪುನಶ್ಚೇತನದ ನಿರೀಕ್ಷೆಯಲ್ಲಿ ಟಾಟಾ

ಟಾಟಾ ಕಾರುಗಳೆಂದರೆ ಬರಿ ಟ್ಯಾಕ್ಸಿ ಮಾರುಕಟ್ಟೆಗಷ್ಟೇ ಸೀಮಿತ ಎಂಬ ಭಾವನೆ ಸೃಷ್ಟಿಯಾಗುತ್ತಿದೆ. ಟಾಟಾ ಇಂಡಿಕಾ ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. ಇದೇ ಕಾರಣಕ್ಕಾಗಿ ಪ್ರತಿಯೊಂದು ವಿಭಾಗದಲ್ಲೂ ಟಾಟಾ ಹಿನ್ನೆಡೆ ಅನುಭವಿಸಿತ್ತು.

ಪುನಶ್ಚೇತನದ ನಿರೀಕ್ಷೆಯಲ್ಲಿ ಟಾಟಾ

ಟಾಟಾ ಸಫಾರಿ ಹಾಗೂ ಟಾಟಾ ಸುಮೋ ಎಸ್‌ಯುವಿ ಯಶಸ್ಸು ಸಹ ಸೀಮಿತ ಮಟ್ಟದಲ್ಲಿತ್ತು. ತನ್ನ ಪ್ರತಿಸ್ಪರ್ಧಿಗಳಾದ ಮಹೀಂದ್ರ ಹಾಗೂ ಟೊಯೊಟಾ ಕಾರುಗಳನ್ನು ಹೋಲಿಸಿದಾಗ ಟಾಟಾ ಹಿನ್ನೆಡೆ ಅನುಭವಿಸಿದೆ. ಈ ಸಾಲಿನಲ್ಲಿ ಟಾಟಾ ಆರಿಯಾ ಹೆಸರನ್ನು ಉಲ್ಲೇಖಿಸಬೇಕಾಗುತ್ತದೆ.

ಪುನಶ್ಚೇತನದ ನಿರೀಕ್ಷೆಯಲ್ಲಿ ಟಾಟಾ

ಈ ಎಲ್ಲದರ ನಡುವೆಯೂ ಪುನಶ್ಚೇತನದ ಹಾದಿಯಲ್ಲಿರುವ ಟಾಟಾ, ಮುಂದಿನ ದಿನಗಳಲ್ಲಿ ಮತ್ತಷ್ಟು ಅತ್ಯಾಧುನಿಕ ತಂತ್ರಜ್ಞಾನದ ಕಾರುಗಳನ್ನು ಪರಿಚಯಿಸುವ ಮೂಲಕ ನಂಬಿಕೆ ಮರಳಿ ಪಡೆಯುವ ಇರಾದೆಯಲ್ಲಿದೆ. ದೇಶದ ಅತಿ ದೊಡ್ಡ ವಾಹನ ಸಂಸ್ಥೆಯ ಈ ಎಲ್ಲ ಪ್ರಯತ್ನಗಳಿಗೆ ಯಶ ದೊರಕಲಿ ಎಂಬುದು ನಮ್ಮ ಹಾರೈಕೆಯಾಗಿದೆ.

ಇವನ್ನೂ ಓದಿ

ಟಾಟಾಗೆ ಹೊಸ ಹುರುಪು ತುಂಬಿತೇ ಹೆಕ್ಸಾ ಎಸ್‌ಯುವಿ

Article Published On: Monday, November 2, 2015, 15:29 [IST]
English summary
Expert Talk: Is Tata Motors Being Beaten At Its Own Game By Giving Ideas?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+