'ಗೆಟ್ ಸೆಟ್ ಗೊ'; ಇದು ಟಾಟಾದ ಹೊಸ ಘೋಷವಾಕ್ಯ
ಎಲ್ಲೆಡೆ ಟಾಟಾ ಕಾರಿನಿಂದ 'ಗೆಟ್ ಸೆಟ್ ಗೊ' ಕೂಗು ಕೇಳಿಬರುತ್ತಿದೆ. ಹೌದು ಹೊಸತಾಗಿ ಈಗಷ್ಟೇ ಬಿಡುಗಡೆಗೊಂಡಿರುವ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರಿಗೆ ಟಾಟಾ ನೀಡುತ್ತಿರುವ ಅಭೂತಪೂರ್ವ ಪ್ರಚಾರವಿದು.
ಹೊರಿಝೋನ್‌ನೆಕ್ಸ್ಟ್ ಸಿದ್ಧಾತಂದಲ್ಲಿ ನಿರ್ಮಾಣವಾಗಿರುವ ಹೊಸ ಕಾರಿಗೆ ಟಾಟಾ ವಿಶೇಷವಾದ ಪ್ರಚಾರ ವೀಡಿಯೋವೊಂದನ್ನು ನಿರ್ಮಿಸಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ.

ಹೊಸ ಬೋಲ್ಟ್ ಕಾರಿನಲ್ಲಿ ಇದೇ ಮೊದಲ ಬಾರಿಗೆ ಮಲ್ಟಿ ಡ್ರೈವ್ ಚಾಲನಾ ಮೋಡ್ (ಸ್ಪೋರ್ಟ್, ಇಕೊ, ಎಕಾನಮಿ) ಆಳವಡಿಸಲಾಗಿದೆ. ಇದನ್ನು ಸಹ ಟೆಲಿವಿಷನ್ ಜಾಹೀರಾತಿನಲ್ಲಿ ಉತ್ತಮವಾಗಿ ನಿರೂಪಿಸುವಲ್ಲಿ ಸಂಸ್ಥೆಯು ಯಶ ಕಂಡಿದೆ.
ಮಾರುತಿ ಸ್ವಿಫ್ಟ್ ಹಾಗೂ ಹ್ಯುಂಡೈ ಎಲೈಟ್ ಐ20 ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರುವ ಹೊಸ ಬೋಲ್ಟ್ 1.2 ಲೀಟರ್ ಟರ್ಬೊ ಚಾರ್ಜ್ಡ್ ಎಂಪಿಎಫ್‌ಐ ಪೆಟ್ರೋಲ್ ಹಾಗೂ 1.3 ಲೀಟರ್ ಕಾಮನ್ ರೈಲ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸ್ಪಡುತ್ತದೆ.
ವೀಡಿಯೋ ವೀಕ್ಷಿಸಿ


Click it and Unblock the Notifications








