"ನಮಸ್ತೆ ಇಂಡಿಯಾ" ಭಾರತೀಯರಿಗೆ ವಿಷ್ ಮಾಡಿದ ಮೆಸ್ಸಿ

By Nagaraja

ಎಲ್ಲವೂ ಅಂದುಕೊಂಡಂತೆ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆ ಟಾಟಾ ಮೋಟಾರ್ಸ್ ಆಗಿ ಅರ್ಜೆಂಟೀನಾ ಹಾಗೂ ಸ್ಪೇನ್‌ನ ಹೆಸರಾಂತ ಬಾರ್ಸಿಲೋನಾ ತಂಡದ ಮುನ್ನಡೆಯ ಪುಟ್ಬಾಲ್ ಆಟಗಾರ ಲಿಯೊನಲ್ ಮೆಸ್ಸಿ ಅವರನ್ನು ನೇಮಕ ಮಾಡಲಾಗಿದೆ. ಇದು ಮುಂದಿನ ದಿನಗಳಲ್ಲಿ ತನ್ನ ಬ್ರ್ಯಾಂಡ್ ಮೌಲ್ಯವನ್ನು ವೃದ್ಧಿಸಿಕೊಳ್ಳಲು ನೆರವಾಗಲಿದೆ.

Also Read: ಟಾಟಾ ನ್ಯಾನೋ: 15 ಆಸಕ್ತಿದಾಯಕ ಸತ್ಯಗಳು

ಪ್ರಯಾಣಿಕ ಕಾರು ವಿಭಾಗದಲ್ಲಿ ಆಕ್ರಮಣಕಾರಿ ನಿಲುವಿಗೆ ಮುಂದಾಗಿರುವ ಟಾಟಾ ಏಕಕಾಲದಲ್ಲಿ ದೇಶ ಸೇರಿದಂತೆ ಜಾಗತಿಕ ಮಟ್ಟದಲ್ಲೂ ಕಾಲ್ಚೆಂಡಿನ ರಾಜ ಮೆಸ್ಸಿ ಜನಪ್ರಿಯತೆಯನ್ನು ಉಪಯೋಗಿಸಿಕೊಂಡು ಭರ್ಜರಿ ಮಾರಾಟವನ್ನು ಗುರಿಯಾಗಿರಿಸಿಕೊಂಡಿದೆ.

ಭಾರತಕ್ಕೆ ಮೆಸ್ಸಿ ಸಂದೇಶ

ಭಾರತಕ್ಕೆ ಮೆಸ್ಸಿ ಸಂದೇಶ

"ನಮಸ್ತೆ ಇಂಡಿಯಾ. ಭಾರತೀಯ ಬ್ರಾಂಡ್ ಜೊತೆಗೆ ನನ್ನ ಮೊತ್ತ ಮೊದಲ ಜೊತೆಗಾರಿಕೆಯಲ್ಲಿ ಅತೀವ ಉತ್ಸಾಹಿತನಾಗಿದ್ದು, ಟಾಟಾ ಮೋಟಾರ್ಸ್ ಕುಟುಂಬದ ಅಂಗವಾಗಿರುವುದರಲ್ಲಿ ಅತ್ಯಂತ ಸಂತೋಷವಾಗುತ್ತಿದೆ. ಯಾವತ್ತೂ ನಾನು ಭಾರತದ ಬಗ್ಗೆ ಆಕರ್ಷಿತನಾಗಿದ್ದು, ಈ ವೈವಿಧ್ಯಮಯ ದೇಶದ ಬಗ್ಗೆ ಅನೇಕ ವಿಚಾರಗಳನ್ನು ತಿಳಿದುಕೊಂಡಿದ್ದೇನೆ. ಅರ್ಜೇಂಟೀನಾ ರಾಷ್ಟ್ರೀಯ ತಂಡದ ಜೊತೆ ನಾನೊಮ್ಮೆ ಭಾರತಕ್ಕೆ ಭೇಟಿ ಕೊಟ್ಟಿದ್ದು, ಮಗದೊಮ್ಮೆ ಭೇಟಿಯಾಗುವ ನಿರೀಕ್ಷೆಯಲ್ಲಿದ್ದೇನೆ. ಟಾಟಾ ಮೋಟಾರ್ಸ್ ಭಾರತದ ನೈಜ ಪ್ರತಿನಿಧಿಯಾಗಿದ್ದು, ಜಾಗತಿಕವಾಗಿ ಸುದೃಢವಾದ ಸಂಸ್ಥೆಯಾಗಿ ಎದ್ದು ಕಾಣಿಸಿಕೊಂಡಿದೆ. ತನ್ನಲ್ಲೇ ತಾನೇ ನಂಬಿಕೆಯನ್ನಿಟ್ಟುಕೊಂಡು ಯಶಸ್ಸಿನತ್ತ ಮುನ್ನುಗ್ಗಬೇಕಾಗಿದ್ದು, ಅದುವೇ ಮೊದಲ ಅಭಿಯಾನಕ್ಕೆ ಹೇತುವಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಜೊತೆಯಾಗಿ ಮತ್ತಷ್ಟು ಮಂದಿಯನ್ನು ಪ್ರೇರೇಪಿಸುವ ನಂಬಿಕೆಯಲ್ಲಿದ್ದೇನೆ" ಎಂದಿದ್ದಾರೆ.

ಟಾಟಾ ಮೋಟಾರ್ಸ್ ಬ್ರಾಂಡ್ ಅಂಬಾಸಿಡರ್ ಆಗಿ ಲಿಯೊನೆಲ್ ಮೆಸ್ಸಿ ನೇಮಕ

ಭಾರತೀಯ ವಾಹನ ತಯಾರಿಕ ಒಕ್ಕೂಟ (ಎಸ್‌ಐಎಎಂ) ವರದಿಯ ಪ್ರಕಾರ ಪ್ರಯಾಣಿಕ ಮಾರುಕಟ್ಟೆಯಲ್ಲಿ ಟಾಟಾ ಶೇಕಡಾ 5.72ರಷ್ಟು ಶೇರನ್ನು ಹೊಂದಿದೆ. ಈಗ ಮೆಸ್ಸಿ ಬ್ರಾಂಡ್ ಅಂಬಾಸಿಡರ್ ಆಗುವುದರೊಂದಿಗೆ ಟಾಟಾ ತನ್ನ ಆಕ್ರಮಣಕಾರಿ ನೀತಿಯನ್ನು ಅನುಸರಿಸಿದೆ.

ಟಾಟಾ ಮೋಟಾರ್ಸ್ ಬ್ರಾಂಡ್ ಅಂಬಾಸಿಡರ್ ಆಗಿ ಲಿಯೊನೆಲ್ ಮೆಸ್ಸಿ ನೇಮಕ

ಇದರಂತೆ ನಿರ್ದೇಶಕ ಡ್ಯಾನಿಯಲ್ ಬೆನ್ಮಯಾರ್ ನೇತೃತ್ವದಲ್ಲಿ ಬಾರ್ಸಿಲೋನಾದಲ್ಲಿ ಮೊದಲ ಪ್ರಚಾರ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ.

ಟಾಟಾ ಮೋಟಾರ್ಸ್ ಬ್ರಾಂಡ್ ಅಂಬಾಸಿಡರ್ ಆಗಿ ಲಿಯೊನೆಲ್ ಮೆಸ್ಸಿ ನೇಮಕ

ಇಲ್ಲಿ ಟಾಟಾ ಮೋಟಾರ್ಸ್ ಜೆರ್ಸಿ ಧರಿಸಿರುವ ಮೆಸ್ಸಿ 'ನಮಸ್ತೆ ಇಂಡಿಯಾ' ಎಂದು ಸಂಬೋಧಿಸುತ್ತಾರೆ. ಅಲ್ಲದೆ #madeofgreat ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಪ್ರಚಾರವನ್ನು ಮಾಡಲಾಗುತ್ತಿದೆ.

ಟಾಟಾ ಮೋಟಾರ್ಸ್ ಬ್ರಾಂಡ್ ಅಂಬಾಸಿಡರ್ ಆಗಿ ಲಿಯೊನೆಲ್ ಮೆಸ್ಸಿ ನೇಮಕ

ಜಾಗತಿಕವಾಗಿಯೂ ಫುಟ್ಬಾಲ್ ಕ್ರೀಡೆ ಹೆಚ್ಚು ಪ್ರಚಲಿತವಾಗಿದ್ದು, ಭಾರತದಲ್ಲೂ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಇದೇ ಕಾರಣಕ್ಕಾಗಿ ಮೆಸ್ಸಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಟಾಟಾ ಪ್ರಯಾಣಿಕ ವಿಭಾಗದ ಅಧ್ಯಕ್ಷರಾಗಿರುವ ಮಯಾಂಕ್ ಪರೀಕ್ ಅಭಿಪ್ರಾಯಪಡುತ್ತಾರೆ.

ಟಾಟಾ ಮೋಟಾರ್ಸ್ ಬ್ರಾಂಡ್ ಅಂಬಾಸಿಡರ್ ಆಗಿ ಲಿಯೊನೆಲ್ ಮೆಸ್ಸಿ ನೇಮಕ

ಪ್ರಸಕ್ತ ಸಾಲಿನಲ್ಲಿ ಜೆಸ್ಟ್, ಬೋಲ್ಟ್ ಮತ್ತು ಜೆನ್ ಎಕ್ಸ್ ನ್ಯಾನೋ ಮಾದರಿಗಳನ್ನು ಬಿಡುಗಡೆ ಮಾಡಿರುವ ಟಾಟಾ 2020ರ ವರೆಗೆ ವರ್ಷಂಪ್ರತಿ ಎರಡೆರಡು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

#madeofgreat ಮೆಸ್ಸಿ-ಟಾಟಾ ಮೋಟಾರ್ಸ್ ಪುಟಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಇವನ್ನೂ ಓದಿ

ಟಾಟಾ ಹೆಕ್ಸಾ ಟೆಸ್ಟಿಂಗ್; ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆ ಮುಂದಕ್ಕೆ ಓದಿ

Article Published On: Tuesday, November 3, 2015, 14:30 [IST]
English summary
Tata Motors Announce Lionel Messi As Global Brand Ambassador
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+