ಟಾಟಾ ಮೋಟಾರ್ಸ್ ಮೆಗಾ ಸರ್ವಿಸ್ ಕ್ಯಾಂಪ್ ಅಭಿಯಾನ

Written By:

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆ ಟಾಟಾ ಮೋಟಾರ್ಸ್, ಇದೇ ಮುಂಬರುವ 2015 ನವೆಂಬರ್ 20ರಿಂದ ಮೆಗಾ ಸರ್ವೀಸ್ ಕ್ಯಾಂಪ್ ಅಭಿಯಾನವನ್ನು ಆರಂಭಿಸಲಿದೆ. ಇದು ನವೆಂಬರ್ 26ರ ವರೆಗೆ ಮುಂದುವರಿಯಲಿದೆ.

ಟಾಟಾದ ಸಮಗ್ರ ವಾಹನ ಆರೋಗ್ಯ ಚೆಕಪ್ ಕ್ಯಾಂಪ್ ದೇಶದ್ಯಾಂತ 287 ನಗರಗಳಲ್ಲಿ ಸ್ಥಿತಗೊಂಡಿರುವ ಟಾಟಾ ಮೋಟಾರ್ಸ್ ಡೀಲರ್ ಶಿಪ್ ಹಾಗೂ ಅಧಿಕೃತ ಸರ್ವೀಸ್ ಸೆಂಟರ್ ಗಳಲ್ಲಿ (TASC's) ನಡೆಯಲಿದೆ. ಈ ಮೂಲಕ 1000ದಷ್ಟು ಪ್ರದೇಶಗಳಲ್ಲಿ ನೆರವನ್ನು ವರ್ಧಿಸಲಿದೆ.

ಟಾಟಾ ಮೋಟಾರ್ಸ್

ಇದಕ್ಕಾಗಿ ಇಂಡಿಯನ್ ಒಯಿಲ್ ಕಾರ್ಪೋರೇಷನ್ ಲಿಮಿಟೆಡ್ (IOCL) ಜೊತೆಗೂ ಒಪ್ಪಂದ ಮಾಡಿರುವ ಟಾಟಾ ಸಂಸ್ಥೆಯು, ಪೆಟ್ರೋಲ್ ಪಂಪ್ ಗಳಲ್ಲೂ ತನ್ನ ಸೇವೆಯನ್ನು ನೀಡಲಿದೆ.

ಅಷ್ಟೇ ಅಲ್ಲದೆ 16 ವಿತರಕರೊಂದಿಗೆ ಒಪ್ಪಂದವವನ್ನು ಮಾಡಿರುವ ಟಾಟಾ ಆಕ್ಸೆಸರಿಗಳಲ್ಲಿ ಶೇಕಡಾ 10ರಷ್ಟು ರಿಯಾಯಿತಿ ದರ ನೀಡಲಿದೆ. ಅಲ್ಲದೆ ಟಾಟಾ ಮೋಟಾರ್ಸ್ ನೈಜ ಬಿಡಿಭಾಗಗಳಿಗೆ ಶೇಕಡಾ 20ರಷ್ಟು ರಿಯಾಯಿತಿ ನೀಡಲಿದೆ.

English summary
Tata Motors Mega Service Camp To Start From November 20
Story first published: Tuesday, November 17, 2015, 8:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark