ಟಾಟಾಗೆ ಹೊಸ ಹುರುಪು ತುಂಬಿತೇ ಹೆಕ್ಸಾ ಎಸ್‌ಯುವಿ

By Nagaraja

ಟಾಟಾ ಆರಿಯಾ ತಳಹದಿಯಲ್ಲಿ ನಿರ್ಮಾಣವಾಗಿರುವ ಟಾಟಾ ಹೆಕ್ಸಾ ಮುಂದಿನ ವರ್ಷ ಭಾರತದಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ. ಈ ಸಂಬಂಧ ಅತ್ಯಾಕರ್ಷಕ ಚಿತ್ರಗಳು ವಾಹನ ಪ್ರೇಮಿಗಳಿಗಾಗಿ ಹಂಚಿಕೊಳ್ಳಲಿದ್ದೇವೆ.

ಮೊದಲ ನೋಟದಲ್ಲಿ ಆರಿಯಾವನ್ನು ಹೋಲುವ ವಿನ್ಯಾಸ ಮೈಗೂಡಿಸಿ ಬಂದರೂ ಟಾಟಾ ಹೆಕ್ಸಾ ಕ್ರೀಡಾ ಬಳಕೆಯ ವಾಹನದಲ್ಲಿ ಎಲ್ಲ ಹೊಸತನದ ವಿನ್ಯಾಸ ತಂತ್ರಗಾರಿಕೆಯನ್ನು ಆಳವಡಿಸಲಾಗಿದೆ. ಇದು ಸಂಸ್ಥೆಯ ಅತಿ ನೂತನ ಹೊರಿಝೋನೆಕ್ಸ್ಟ್ ಸಿದ್ಧಾಂತದಡಿಯಲ್ಲಿ ನಿರ್ಮಾಣವಾಗಲಿದೆ.

ಟಾಟಾಗೆ ಹೊಸ ಹುರುಪು ತುಂಬಿತೇ ಹೆಕ್ಸಾ ಎಸ್‌ಯುವಿ

ಭಾರತದಲ್ಲಿ ತನ್ನೆಲ್ಲ ವಿಭಾಗದ ವಾಹನಗಳಿಗೆ ಹೊಸ ಹುರುಪು ತುಂಬುತ್ತಿರುವ ಟಾಟಾ, ಕಳೆಗುಂದಿರುವ ಮಾರಾಟಕ್ಕೆ ಉತ್ತೇಜನ ನೀಡುವ ಇರಾದೆಯಲ್ಲಿದೆ. ಕೆಲವು ಸಮಗಳ ಹಿಂದೆ ಬಿಡುಗಡೆಯಾಗಿದ್ದ ಟಾಟಾ ಬೋಲ್ಟ್ ಹಾಗೂ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರುಗಳು ಇದಕ್ಕೆ ಉದಾಹರಣೆಯಾಗಿದೆ.

ಟಾಟಾಗೆ ಹೊಸ ಹುರುಪು ತುಂಬಿತೇ ಹೆಕ್ಸಾ ಎಸ್‌ಯುವಿ

2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣಲಿರುವ ಟಾಟಾ ಹೆಕ್ಸಾ ತದಾ ಬಳಿಕ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂಬುದು ತಿಳಿದು ಬಂದಿದೆ. ಈ ಬಗ್ಗೆ ದೇಶದ ಅತಿ ದೊಡ್ಡ ಸಂಸ್ಥೆಯಿಂದ ಇನ್ನಷ್ಟೇ ಸ್ಪಷ್ಟನೆ ಬರಬೇಕಾಗಿದೆ.

ಟಾಟಾಗೆ ಹೊಸ ಹುರುಪು ತುಂಬಿತೇ ಹೆಕ್ಸಾ ಎಸ್‌ಯುವಿ

ಪರಿಪೂರ್ಣ, ದೃಢಕಾಯದ ಎಸ್ ಯುವಿ ಹುಡುಕುತ್ತಿರುವವರಿಗೆ ಸ್ವದೇಶಿ ಉತ್ಪನ್ನ ಟಾಟಾ ಹೆಕ್ಸಾ ನೆಚ್ಚಿನ ಆಯ್ಕೆಯಾಗಿರಲಿದೆ. ಶಕ್ತಿಯುತ ಮಸಲರ್ ಡಿಸೈನ್, ಹೊಸ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಹನಿಕಾಂಬ್ ಮೆಶ್ ಫ್ರಂಟ್ ಗ್ರಿಲ್, ಪರಿಷ್ಕೃತ ಫಾಗ್ ಲ್ಯಾಂಪ್ ಹಾಗೂ ಏರ್ ಡ್ಯಾಮ್ ಗಳು ಹೆಕ್ಸಾ ಕಾರಿನ ಪ್ರಮುಖ ಆಕರ್ಷಣೆಯಾಗಿರಲಿದೆ.

ಟಾಟಾಗೆ ಹೊಸ ಹುರುಪು ತುಂಬಿತೇ ಹೆಕ್ಸಾ ಎಸ್‌ಯುವಿ

ಇನ್ನು ಕಾರಿಗೆ ಪ್ರೀಮಿಯಂ ಅನುಭವ ನೀಡುವ ನಿಟ್ಟಿನಲ್ಲಿ ಎಕ್ಸಾಸ್ಟ್ ಕೊಳೆವೆಗೂ ಕ್ರೋಮ್ ಸ್ಪರ್ಶವನ್ನು ನೀಡಲಾಗಿದೆ. ಒಟ್ಟಿನಲ್ಲಿ ಮಿನುಗು ತಾರೆಯಂತೆ ಪ್ರಜ್ವಲಿಸಲಿದೆ.

ಟಾಟಾಗೆ ಹೊಸ ಹುರುಪು ತುಂಬಿತೇ ಹೆಕ್ಸಾ ಎಸ್‌ಯುವಿ

ಅಂದ ಹಾಗೆ ನೂತನ ಟಾಟಾ ಹೆಕ್ಸಾ ಕಾರಿನಲ್ಲಿ 2.2 ಲೀಟರ್ 4 ಸಿಲಿಂಡರ್ ವ್ಯಾರಿಕೋರ್ (VARICOR) ಡೀಸೆಲ್ ಎಂಜಿನ್ ಬಳಕೆಯಾಗುವ ಸಾಧ್ಯತೆಯಿದೆ. ಇದು 400 ಎನ್‌ಎಂ ತಿರುಗುಬಲದಲ್ಲಿ 154 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಟಾಟಾಗೆ ಹೊಸ ಹುರುಪು ತುಂಬಿತೇ ಹೆಕ್ಸಾ ಎಸ್‌ಯುವಿ

ಪ್ರಸ್ತುತ ಕಾರು 4764 ಎಂಎಂ ಉದ್ದ, 1895 ಎಂಎಂ ಅಗಲ, 1780 ಎಂಎಂ ಎತ್ತರ ಹಾಗೂ 2850 ಎಂಎಂ ಚಕ್ರಾಂತರವನ್ನು ಪಡೆದುಕೊಳ್ಳಲಿದೆ. ಇನ್ನುಳಿದಂತೆ ಆರು, ಏಳು ಹಾಗೂ ಎಂಟು ಸೀಟುಗಳ ಆಸನ ವ್ಯವಸ್ಥೆಯಲ್ಲೂ ಗ್ರಾಹಕರನ್ನು ತಲುಪಲಿದೆ.

ಟಾಟಾಗೆ ಹೊಸ ಹುರುಪು ತುಂಬಿತೇ ಹೆಕ್ಸಾ ಎಸ್‌ಯುವಿ

ಎಲ್‌ಇಡಿ ಹೆಡ್ ಲ್ಯಾಂಪ್, ಹೊಸ ಬಂಪರ್, ಕಾರಿನೊಳಗೆ ಜೋಡಿ ಬಣ್ಣ ಇತರ ಪ್ರಮುಖ ಆಕರ್ಷಣೆಯಾಗಲಿದೆ. ಅಂತಿಮವಾಗಿ ದೆಹಲಿ ಆಟೋ ಎಕ್ಸ್ ಪೋ ವೇಳೆಯಾಗುವಾಗ ಬೆಲೆ ಕುರಿತಂತೆ ಸ್ಪಷ್ಟವಾದ ಮಾಹಿತಿ ಹೊರಬೀಳಲಿದೆ.

Most Read Articles

Kannada
English summary
Tata Motors new SUV concept Hexa
Story first published: Friday, October 9, 2015, 11:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X